ಬೆಂಗಳೂರು: ಕೊರೊನಾ ವಿರುದ್ಧ ಹಗಲು ರಾತ್ರಿ ಎನ್ನದೆ ಹೋರಾಡುತ್ತಿರುವ ಪೊಲೀಸರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ.
ವಿಭಿನ್ನ ಪ್ರತಿಭಟನೆಗಳಿಗೆ ಹೆಸರಾದ ವಾಟಾಳ್ ನಾಗರಾಜ್, ತಮ್ಮ ಕಪ್ಪು ಟೋಪಿ ಮೇಲೆ ಪೊಲೀಸರ ಟೋಪಿ ಧರಿಸಿ ಕೊರೊನಾ ವಾರಿಯರ್ಸ್ ಆದ ಪೊಲೀಸರಿಗೆ ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ಘೋಷಿಸಬೇಕೇಂದು ಆಗ್ರಹಿಸಿ ಏಕಾಂಗಿಯಾಗಿ ಪ್ರತಿಭಟಿಸಿದ್ದಾರೆ.
ಜಿಲ್ಲೆಯ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಮೌನ ಪ್ರತಿಭಟನೆ ಮಾಡಿದ ಅವರು, ಸರ್ಕಾರ ಕೊರೊನಾ ಸಂಕಷ್ಟ ಪರಿಹಾರವಾಗಿ ಸಾಕಷ್ಟು ನೇರವು ಘೋಷಿಸಿದೆ. ಅದ್ರೆ ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡ್ತಿರುವ ಪೊಲೀಸರಿಗೆ ಯಾವುದೇ ನೆರವು ನೀಡಿಲ್ಲ. ಅದ್ದರಿಂದ ಈ ಕೂಡಲೇ ಸರ್ಕಾರ ನಮ್ಮ ಪೊಲೀಸರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಅಗ್ರಹಿಸಿದ್ದಾರೆ.