ETV Bharat / state

ಕಾಂತರಾಜು ಆಯೋಗದ ಜಾತಿವಾರು ಸಮೀಕ್ಷೆಯನ್ನು ಈ ಕೂಡಲೇ ರಾಜ್ಯ ಸರ್ಕಾರ ಸ್ವೀಕರಿಸಬೇಕು; ಮಾವಳ್ಳಿ ಶಂಕರ್

author img

By ETV Bharat Karnataka Team

Published : Nov 9, 2023, 11:59 AM IST

ನ್ಯಾಯವಾದಿ ಕಾಂತರಾಜು ಆಯೋಗದ ಜಾತಿವಾರು ಸಮೀಕ್ಷೆಯನ್ನು ಈ ಕೂಡಲೇ ರಾಜ್ಯ ಸರ್ಕಾರ ಸ್ವೀಕರಿಸಬೇಕೆಂದು ಕರ್ನಾಟಕ ಶೋಷಿತ ಸಮುದಾಯ ಮತ್ತು ಹಿಂದುಳಿದ ಜಾತಿಗಳ ಒಕ್ಕೂಟ ಒತ್ತಾಯಿಸಿವೆ.

Etv Bharat
Etv Bharat

ಬೆಂಗಳೂರು: ಸಾಮಾಜಿಕ ನ್ಯಾಯ ಸೂತ್ರದಡಿ ಅಸಮಾತೋಲನ ಅಪಾಯವನ್ನು ತಪ್ಪಿಸುವ ದೃಷ್ಟಿಯಿಂದ ಈಗಾಗಲೇ ಸಿದ್ಧವಾಗಿರುವ ನ್ಯಾಯವಾದಿ ಕಾಂತರಾಜು ಆಯೋಗದ ಜಾತಿವಾರು ಸಮೀಕ್ಷೆಯನ್ನು ಈ ಕೂಡಲೇ ರಾಜ್ಯ ಸರ್ಕಾರ ಸ್ವೀಕರಿಸಬೇಕು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಒತ್ತಾಯಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​​ನಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ರಾಜ್ಯ ಹಿಂದುಳಿದ ವರ್ಗಗಳ ಪರಿಷ್ಕೃತ ಪಟ್ಟಿಯನ್ನು ಪರಿಷ್ಕರಣೆ ಮಾಡದೆ ಇರುವ ಕಾರಣ ಕಾಂತರಾಜು ಆಯೋಗದ ವರದಿ ಬಿಡುಗಡೆಗೊಳಿಸಿ, ಅದನ್ನು ಅಂಗೀಕರಿಸುವ ಮೂಲಕ ಶೀಘ್ರ ಜಾರಿಗೆ ತರಬೇಕು ಎಂದರು.

ವರದಿ ಸ್ವೀಕರಿಸದಿದ್ದ ಪಕ್ಷದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಅವಶ್ಯವಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು. ಈಗಿನ ಸರ್ಕಾರ ನಮ್ಮ ತಾಳ್ಮೆಯನ್ನು ಇನ್ನಷ್ಟು ಪರೀಕ್ಷಿಸಬಾರದು. ವರದಿ ಸ್ವೀಕರಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದರೂ ಇದನ್ನು ಲೆಕ್ಕಿಸದೇ ಕೆಲ ಪ್ರಬಲ ಜಾತಿಗಳ ಕೂಗಿಗೆ, ಆ ಜಾತಿಗಳ ಓಲೈಕೆಗೆ ವರದಿಯನ್ನು ಮೂಲೆಗುಂಪು ಮಾಡಲಾಗಿದೆ. ವಾಸ್ತವವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಸರ್ಕಾರಗಳು ಕುತ್ತು ತಂದಿವೆ. ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯದಲ್ಲಿ 1975 ರ ಹಾವನೂರು ಆಯೋಗದ ವರದಿಯ ಪ್ರಕಾರ ಹಿಂದುಳಿದ ವರ್ಗಗಳಿಗೆ ಶೇ 40 ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು. ತದನಂತರ ಸುಪ್ರೀಂ ಕೋರ್ಟ ಆದೇಶದ ಪ್ರಕಾರ ಪ್ರತ್ಯೇಕ ಆಯೋಗ ರಚನೆ ಮಾಡಿ ಹಿಂದುಳಿದ ವರ್ಗಗಳ ವರದಿ ತಯಾರು ಮಾಡಲು ಕರ್ನಾಟಕ ರಾಜ್ಯದಲ್ಲಿ 1983 ರಲ್ಲಿ ಟಿ.ವೆಂಕಟಸ್ವಾಮಿ ಆಯೋಗ ರಚನೆಯಾಯಿತು. 1986 ರಲ್ಲಿ ತನ್ನ ಸಂಪೂರ್ಣ ವರದಿಯನ್ನು ಆಯೋಗ ಸಲ್ಲಿಸಿತು. ಆದರೆ ಆದರೆ ಸರ್ಕಾರ ವರದಿಯನ್ನು ಮಾನ್ಯ ಮಾಡದೆ ಮತ್ತೆ ಹೊಸದಾಗಿ ಅದೇ ವರ್ಷದಲ್ಲಿ ಅಂದರೆ ಓ.ಚೆನ್ನಪ್ಪ ರೆಡ್ಡಿಯವರ ಮತ್ತೊಂದು ಆಯೋಗವನ್ನು ರಚನೆ ಮಾಡಿತು. ಈ ಆಯೋಗವು ವರದಿ ಸಂಪೂರ್ಣಗೊಳಿಸಿ ನೀಡುವಷ್ಟರಲ್ಲಿ ಬಹಳಷ್ಟು ಮುಂದುವರೆದ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಯಿತು. ಹಾಗೆಯೇ 1986 ರಲ್ಲಿ ಆಯೋಗದ ವರದಿ ಹೊರ ಬಿದ್ದಿತು. ಅದನ್ನು ಆಗಿನ ಸರ್ಕಾರವಾಗಲಿ ಮುಂದೆ ಬಂದ ಸರ್ಕಾರವಾಗಲಿ ಗಣನೆಗೆ ತೆಗೆದುಕೊಳ್ಳದೆ ಅಸಡ್ಡೆ ತೋರಿಸಿದವು ಎಂದು ದೂರಿದ್ದಾರೆ.

1992 ರಲ್ಲಿ ಇಂದಿರಾ ಸಹಾನಿ ಕೇಸಿನ ವಿಚಾರಣೆಯಲ್ಲಿ 9 ಸದಸ್ಯರ ನ್ಯಾಯಮೂರ್ತಿಗಳ ಪೀಠವು ಆದೇಶದಲ್ಲಿ ಸುಪ್ರಿಂ ಕೋರ್ಟ್ ದೇಶದ ಎಲ್ಲಾ ರಾಜ್ಯಗಳಿಗೆ ತಮ್ಮದೇ ಆದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ರಚಿಸಲು ನಿರ್ದೇಶನ ನೀಡಿತು. ಅದೇ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮ 1995 ಜಾರಿಗೆ ಬಂದಿತು. 2000 ನೇ ಇಸವಿಯಲ್ಲಿ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಸರ್ಕಾರವು ಸಹ ಅದನ್ನು ಒಪ್ಪಿ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿತು. ಆದರೆ 2002ರ ನಂತರ ಯಾವುದೇ ಆಯೋಗದ ವರದಿಯನ್ನು ಪರಿಗಣಿಸಿ ಮರು ಪರಿಷ್ಕರಿಸಿಲ್ಲ ಎಂದು ದೂರಿದರು.

ಸರ್ಕಾರವು ಪ್ರತಿ 10 ವರ್ಷಕೊಮ್ಮೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ಹಿಂದುಳಿದ ಎಲ್ಲಾ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಆರ್ಥಿಕ ಮತ್ತು ಎಲ್ಲಾ ರೀತಿಯಿಂದಲೂ ಅವರ ಹಿಂದುಳಿದಿರುವಿಕೆಯ ಬಗ್ಗೆ ವರದಿ ಪಡೆಯಬೇಕು. ಆದರೆ ಹಿಂದುಳಿದ ವರ್ಗಗಳ ಪರಿಷ್ಕೃತ ಪಟ್ಟಿ ಮಾಡಿ ಆದೇಶ ಹೊರಡಿಸದಿರಿವುದು ಶೋಚನೀಯ ಎಂದು ಮಾವಳ್ಳಿ ಶಂಕರ್ ಹೇಳಿದರು.

ರಾಷ್ಟ್ರದಲ್ಲಿ ಮೀಸಲಾತಿಯನ್ನು ಅವಕಾಶ ವಂಚಿತ ಜಾತಿಗಳಿಗೆ ನೀಡಿ ಸಾಮಾಜಿಕ ಸಮಾನತೆಯನ್ನು ಸಾರಿದ ಅಗ್ರಗಣ್ಯ ರಾಜ್ಯಗಳಲ್ಲಿ ಕರ್ನಾಟಕವೂ ಕೂಡ ಒಂದಾಗಿದೆ. ಭಾರತದ ಸಂವಿಧಾನದ ಆಶಯಗಳನ್ನು ಈಡೇರಿಸಿ ಅನೇಕ ಜಾತಿಗಳನ್ನು ಮುಖ್ಯವಾಹಿನಿಗೆ ತರಲು ರಾಜ್ಯದಲ್ಲಿ ಅನೇಕ ಯಶಸ್ವಿ ಪ್ರಯೋಗಗಳು ನಡೆದಿವೆ. ಹಿಂದುಳಿದ ವರ್ಗಗಳ ಆಯೋಗಗಳು ನೀಡಿದ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿ ಮೀಸಲಾತಿಯನ್ನು ಕೊಡಬಹುದಾಗಿದ್ದರೂ ರಾಜಕೀಯ ತೀರ್ಮಾನಗಳಿಂದ ಪ್ರಬಲರು ಮೀಸಲಾತಿ ಪಡೆದು ಶೋಷಿತರ ಪಾಲನ್ನು ಕಬಳಿಸುತ್ತಿರುವುದು ಶೋಚನೀಯ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ. ಎಂ ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ್ ಲಾತೋರ್, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಚಾಲಕರು ಮತ್ತು ಪ್ರಧಾನ ಕಾರ್ಯದರ್ಶಿ ಆರ್ ವೆಂಕಟರಾಮಯ್ಯ, ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್ ಸೇರಿದಂತೆ ಹಲವು ಹಿಂದುಳಿದ ಜಾತಿಗಳ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: 'ಜಾತಿ ಗಣತಿ ಎಕ್ಸ್​ರೇ ಇದ್ದಂತೆ, ಸಮೀಕ್ಷೆಯಿಂದ ಸಮುದಾಯಗಳ ಬಗ್ಗೆ ತಿಳಿಯಲು ಸಾಧ್ಯ': ರಾಹುಲ್​ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.