ಬೆಂಗಳೂರು : ರಾಜ್ಯ ಸರ್ಕಾರ ಹತ್ತು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಇಂದು ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಂತಿದೆ.
- ಮಹಮ್ಮದ್ ಮೊಹ್ಸಿನ್- ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ.
- ಟಿ.ಎಚ್.ಎಂ.ಕುಮಾರ್ - ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ.
- ಆರ್.ಸ್ನೇಹಲ್ - ನಿರ್ದೇಶಕಿ(ಐಟಿ), ಬಿಎಂಟಿಸಿ.
- ಪ್ರಭುಲಿಂಗ ಕವಲಿಕಟ್ಟಿ- ಆಯುಕ್ತರು, ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವೆ.
- ಜಿ.ಲಕ್ಷ್ಮೀಕಾಂತ್ ರೆಡ್ಡಿ- ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ.
- ಪಂಡ್ವೆ ರಾಹುಲ್ ತುಕರಾಮ್ - ಕಾರ್ಯ ನಿರ್ವಾಹಣಾಧಿಕಾರಿ, ರಾಯಚೂರು ಜಿಲ್ಲೆ.
- ಎಸ್.ಜೆ.ಸೋಮಶೇಖರ್- ಕಾರ್ಯ ನಿರ್ವಾಹಣಾಧಿಕಾರಿ, ಚಿತ್ರದುರ್ಗ ಜಿಲ್ಲೆ.
- ಎಸ್.ರಂಗಪ್ಪ- ನಿರ್ದೇಶಕರು, ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗ.
- ಡಾ.ಎಸ್. ಆಕಾಶ್ - ಹೆಚ್ಚುವರಿ ಆಯುಕ್ತರು, ಕಲಬುರಗಿ ಜಿಲ್ಲೆಯ ಸಾರ್ವಜನಿಕ ಸೂಚನೆಗಳು ವಿಭಾಗ.
- ಅನ್ಮೂಲ್ ಜೈನ್- ನೋಂದಣಿ (ವಿಜೆಲೆನ್ಸಿ) ಡಿಐಜಿ.
ಕಳೆದ ತಿಂಗಳು ಜುಲೈ 25ರಂದು ಐವರು ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾಯಿಸಿತ್ತು. ಡಾ. ವೆಂಕಟೇಶ್ ಎಂ.ವಿ ಅವರನ್ನು ದಾವಣಗೆರೆ ಜಿಲ್ಲಾಧಿಕಾರಿಯಾಗಿ, ಗಂಗೂಬಾಯಿ ರಮೇಶ್ ಮಾನಕ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಉಪ ಆಯುಕ್ತರನ್ನಾಗಿ, ಗಂಗಾಧರಸ್ವಾಮಿ ಜಿ.ಎಂ ಅವರನ್ನು ಕೃಷಿ ಮಾರುಕಟ್ಟೆ ಇಲಾಖೆ ಬೆಂಗಳೂರಿಗೆ, ನಾಗೇಂದ್ರ ಪ್ರಸಾದ್ ಕೆ ಅವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕರನ್ನಾಗಿ ಮತ್ತು ಅಶ್ವಿಜಾ ಬಿ.ವಿ ಅವರನ್ನು ತುಮಕೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ವರ್ಗಾವಣೆಗೊಳಿಸಲಾಗಿತ್ತು.
ಇದನ್ನೂ ಓದಿ : ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆ