ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ, ಗಾಂಧಿನಗರ ಈ ಸಂಘದಿಂದ ನಡೆಯುತ್ತಿರುವ ಮುಷ್ಕರ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕೈಗಾರಿಕಾ ವಿವಾದ ಕಾಯ್ದೆ 1947 ರ ಕಲಂ 12 ಅಡಿಯಲ್ಲಿ ಕಾರ್ಮಿಕ ಸಂಘಟನೆ ಹಾಗೂ ನಾಲ್ಕು ಸಾರಿಗೆ ನಿಗಮಗಳ ನಡುವೆ ಉದ್ಭವಿಸಿರುವ ಕೈಗಾರಿಕಾ ವಿವಾದದ ಬಗ್ಗೆ ಸಂಧಾನ ಪ್ರಕ್ರಿಯೆ ಪ್ರಾರಂಭಿಸಿದ್ದರೂ, ಸಾರಿಗೆ ನೌಕರರು 06-04-21 ರಿಂದ ಮುಷ್ಕರ ಹೂಡಿದ್ದಾರೆ. ಆದರೆ' ಬಿಎಂಟಿಸಿ, ಕೆಎಸ್ಆರ್ಟಿಸಿ ಈಶಾನ್ಯ, ವಾಯುವ್ಯ ಸಾರಿಗೆ ಸಂಸ್ಥೆಗಳು ಕೈಗಾರಿಕಾ ವಿವಾದ ಕಾಯ್ದೆಯಡಿ ' ಸಾರ್ವಜನಿಕ ಉಪಯುಕ್ತ ಸೇವೆ' ಎಂದು ಅಧಿಸೂಚನೆ ಹೊರಡಿಸಲಾಗಿದೆ.
ಕೈಗಾರಿಕಾ ವಿವಾದ ಸಂಧಾನ ಪ್ರಕ್ರಿಯೆ ಬಾಕಿ ಇರುವಾಗ ಕಾರ್ಮಿಕರು ಯಾವುದೇ ಮುಷ್ಕರ ಹೂಡಬಾರದೆಂಬ ನಿಯಮ ಇರುತ್ತದೆ. ಹೀಗಾಗಿ ಸಾರ್ವಜನಿಕರಿಗೆ ಅನಾನುಕೂಲತೆ ಹಾಗೂ ಕೈಗಾರಿಕಾ ವಿವಾದ ಕಾಯ್ದೆಯ ವಿರುದ್ಧವಾಗಿರುವ ಈ ಸಾರಿಗೆ ನೌಕರರ ಮುಷ್ಕರವನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ ಎಂದು ಕಾರ್ಮಿಕ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಸಂಧ್ಯಾ ಎಲ್ ನಾಯಕ್, ಆದೇಶ ಹೊರಡಿಸಿದ್ದಾರೆ. ಅಲ್ಲದೆ ಈ ವಿವಾದವನ್ನು ನ್ಯಾಯ ನಿರ್ಣಯಕ್ಕೆ ಔದ್ಯಮಿಕ ನ್ಯಾಯಾಧೀಕರಣಕ್ಕೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತದ ಅನುಮತಿಯಿಲ್ಲದೇ ಲಕ್ಷದ್ವೀಪ ಕಡಲಲ್ಲಿ ಸಂಚರಿಸಿದ ಅಮೆರಿಕದ ಯುದ್ಧ ನೌಕೆ!