ETV Bharat / state

ಸಾರಿಗೆ ನೌಕರರಿಗೆ ಲಿಖಿತ ರೂಪದಲ್ಲಿ ನಡಾವಳಿ ಪತ್ರ ನೀಡಿದ ಸರ್ಕಾರ

ಸಾರಿಗೆ ನೌಕರರ ಮುಷ್ಕರ ಕುರಿತು ದಿನಾಂಕ 13.12.2020ರಂದು ವಿಕಾಸ ಸೌಧದಲ್ಲಿ ನಡೆದ ಸಭೆಯ ನಡಾವಳಿ ಇಂತಿದೆ.

Government issued a written letter to Transport Employees
ಸಾರಿಗೆ ನೌಕರರಿಗೆ ಲಿಖಿತ ರೂಪದಲ್ಲಿ ನಡಾವಳಿ ಪತ್ರ ನೀಡಿದ ಸರ್ಕಾರ
author img

By

Published : Dec 14, 2020, 1:58 PM IST

ಬೆಂಗಳೂರು: ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಹಿರಿಯ ಸಚಿವರ ಸುದೀರ್ಘ ಸಭೆ ನಂತರ ಲಿಖಿತ ರೂಪದಲ್ಲಿ ನಡಾವಳಿ ಪತ್ರವನ್ನು ಸರ್ಕಾರದ ಪ್ರತಿನಿಧಿ ಮೂಲಕ ಮುಷ್ಕರ ನಿರತ ಕಾರ್ಮಿಕರಿಗೆ ಕಳಿಸಿಕೊಡಲಾಯಿತು.

Government issued a written letter to Transport Employees
ಸಾರಿಗೆ ನೌಕರರಿಗೆ ಲಿಖಿತ ರೂಪದಲ್ಲಿ ನಡಾವಳಿ ಪತ್ರ ನೀಡಿದ ಸರ್ಕಾರ

ಸಾರಿಗೆ ನೌಕರರ ಮುಷ್ಕರ ಕುರಿತು ದಿನಾಂಕ 13.12.2020ರಂದು ವಿಕಾಸ ಸೌಧದಲ್ಲಿ ನಡೆದ ಸಭೆಯ ನಡಾವಳಿಗಳು:

1. ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆಯನ್ನು ಅಳವಡಿಸಲು ತೀರ್ಮಾನ

2. ಕೋವಿಡ್-19 ಸೋಂಕು ತಗುಲಿದ ನಿಗಮದ ನೌಕರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಸರ್ಕಾರಿ ನೌಕರರಿಗೆ ನೀಡಿದಂತೆ ರೂ.30 ಲಕ್ಷ ರೂ. ಪರಿಹಾರ.

3. ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ತೀರ್ಮಾನ.

4. ತರಬೇತಿಯಲ್ಲಿರುವ ನೌಕರರ ತರಬೇತಿ ಅವಧಿಯನ್ನು 02 ವರ್ಷದಿಂದ 01 ವರ್ಷಕ್ಕೆ ಇಳಿಸಲು ತೀರ್ಮಾನ.

5. ನಿಗಮದಲ್ಲಿ ಹೆಚ್.ಆರ್.ಎಂ.ಎಸ್ (ಮಾನವ ಸಂಪನ್ಮೂಲ) ವ್ಯವಸ್ಥೆ ಜಾರಿಗೆ ನಿರ್ಧಾರ.

6. ಸಿಬ್ಬಂದಿಯು ಹೆಚ್ಚಿನ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆಯನ್ನು ಕೊಡಲು ತೀರ್ಮಾನ.

7. ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ.

8. ನಾಟ್​ ಇಶ್ಯೂಡ್​-ನಾಟ್ ಕಲೆಕ್ಟೆಡ್ ಪದ್ಧತಿ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿ.

9. ವೇತನ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸುವ ಸಂದರ್ಭದಲ್ಲಿ ಸಾರಿಗೆ ನೌಕರರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದು, ಅದರಲ್ಲಿ 06ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸುವಂತೆ ಕೋರಿದ್ದಾರೆ. ಈ ಬಗ್ಗೆ ಸರ್ಕಾರವು ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.