ETV Bharat / state

ಸರ್ಕಾರದ ಸಂಪೂರ್ಣ ಮಾಹಿತಿಯನ್ನು ಜನರಿಗೆ ತಲುಪಿಸಬೇಕು: ಡಿಸಿಎಂ ಅಶ್ವತ್ಥ ನಾರಾಯಣ - dcm ashwat narayan

ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ವಿಚಾರದಲ್ಲಿ ನಾವು ಸಂಪೂರ್ಣವಾಗಿ ಹಿಂದೆ ಉಳಿದಿದ್ದೇವೆ. ನಾವು ಕೆಲಸಗಳನ್ನು ಮಾಡುತ್ತಿದ್ದೇವೆ, ಆದರೆ ಮಾಡಿದ ಕೆಲಸಗಳನ್ನು ಜನರಿಗೆ ತಿಳಿಸುತ್ತಿಲ್ಲ. ನಾವು ಏನು ಕೆಲಸ ಮಾಡುತ್ತಿದ್ದೇವೆ ಎನ್ನುವುದನ್ನು ವಿವರವಾಗಿ ಸಮಾಜದ ಜೊತೆ ಹಂಚಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದೇವೆಂದು ಡಿಸಿಎಂ ಅಶ್ವತ್ಥ ನಾರಾಯಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

government information should reach the people : DCM C. N. Ashwath Narayan
ಸರ್ಕಾರದ ಸಂಪೂರ್ಣ ಮಾಹಿತಿಯನ್ನು ಜನರಿಗೆ ತಲುಪಿಸಬೇಕು; ಡಿಸಿಎಂ ಅಶ್ವತ್ಥನಾರಾಯಣ್
author img

By

Published : Feb 7, 2021, 4:36 PM IST

ಬೆಂಗಳೂರು: ಸರ್ಕಾರದ ವೆಬ್​​ಸೈಟ್​​ಗಳು ಸರ್ಕಾರದ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಹಿಂದೆ ಉಳಿದಿವೆ. ಸರ್ಕಾರದಲ್ಲಿ ನಾವು ರೂಪಿಸುವ ಪ್ರತಿ ಯೋಜನೆ, ಆಡಳಿತ, ಯಾವ ರೀತಿ ಸುಧಾರಣೆ ತಂದಿದ್ದೇವೆ ಎನ್ನುವ ಮಾಹಿತಿಯನ್ನು ಪಕ್ಷದ ಸಾಮಾಜಿಕ ಜಾಲತಾಣಗಳು ಸಮಗ್ರವಾಗಿ ನೀಡಬೇಕು ಎಂದು ಡಿಸಿಎಂ ಅಶ್ವತ್ಥ ನಾರಾಯಣ ಕರೆ ನೀಡಿದರು‌.

ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ ಚಾಲನೆ

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ ಇಂದು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ವಿಚಾರದಲ್ಲಿ ನಾವು ಸಂಪೂರ್ಣವಾಗಿ ಹಿಂದೆ ಉಳಿದಿದ್ದೇವೆ. ನಾವು ಕೆಲಸಗಳನ್ನು ಮಾಡುತ್ತಿದ್ದೇವೆ. ಆದರೆ ಮಾಡಿದ ಕೆಲಸಗಳನ್ನು ಜನರಿಗೆ ತಿಳಿಸುತ್ತಿಲ್ಲ. ನಾವು ಏನು ಕೆಲಸ ಮಾಡುತ್ತಿದ್ದೇವೆ ಎನ್ನುವುದನ್ನು ವಿವರವಾಗಿ ಸಮಾಜದ ಜೊತೆ ಹಂಚಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದೇವೆ. ಹಾಗಾಗಿ ಸಮಾಜದಲ್ಲಿ ಈ ಸರ್ಕಾರ ಏನು ಮಾಡುತ್ತಿದೆ, ಸರ್ಕಾರದಲ್ಲಿ ಏನಾಗುತ್ತಿದೆ ಎಂದು ಜನರಿಗೆ ಗೊತ್ತಾಗುತ್ತಿಲ್ಲ. ಜನಪರವಾಗಿ ಕೆಲಸವಾಗುತ್ತಿದೆಯೇ ಅಥವಾ ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಜನರಲ್ಲಿ ಕಾಡುತ್ತಿದೆ ಎಂದರು.

ಕಾಂಗ್ರೆಸ್​ಗೆ ಹೋಗಲ್ಲವೆಂದು ಪ್ರಮಾಣ ಮಾಡಿ.. ಜೆಡಿಎಸ್​ ಶಾಸಕರಿಗೆ ಎನ್​.ಆರ್​​. ಸಂತೋಷ್ ಸವಾಲ್​!

ನಮ್ಮ ಸರ್ಕಾರದ ವೆಬ್​ಸೈಟ್​ಗಳು ಅಷ್ಟು ಪರಿಣಾಮಕಾರಿಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪ್ರಗತಿ ಬಹಳ ಕಡಿಮೆ ಇದೆ. ಸರ್ಕಾರದ ಸಂಪೂರ್ಣ ಮಾಹಿತಿಯನ್ನು ಜನರಿಗೆ ನೀಡಬೇಕು. ಆ ಕೆಲಸವನ್ನು ನಮ್ಮ ಪಕ್ಷದ ಸಾಮಾಜಿಕ ಜಾಲತಾಣ ಮಾಡಬೇಕು ಎಂದರು.

ಜಾಲತಾಣ ನಿರ್ವಹಣೆ ಬಗ್ಗೆ ಡಿಸಿಎಂ ಪಾಠ:

ಯಾರೋ ಸೆಟ್ ಮಾಡುವ ಅಜೆಂಡಾದಲ್ಲಿ ನೀವು ಭಾಗಿಗಳಾಗಬಾರದು. ಸರ್ಕಾರದ ಕೆಲಸ ಕಾರ್ಯಗಳ ಬಗ್ಗೆ ಅಧ್ಯಯನ ಮಾಡಿ ವಿಶ್ಲೇಷಣೆ ಮಾಡಬೇಕು. ಪರಸ್ಪರ, ಬೇರೆ ಬೇರೆಯವರ ಜೊತೆ ಮಾತುಕತೆ ನಡೆಸಬೇಕು. ಯಾವುದಕ್ಕೂ ತಕ್ಷಣವೇ ಪ್ರತಿಕ್ರಿಯೆ ನೀಡಬೇಕಿಲ್ಲ. ಯಾವುದೇ ವಿಷಯದ ಬಗ್ಗೆ ತುಂಬಾ ವಿಚಾರಗಳು ಗೊತ್ತಿದ್ದರೆ ತಕ್ಷಣ ಪ್ರತಿಕ್ರಿಯೆ ನೀಡಿ. ಇಲ್ಲದೇ ಇದ್ದಲ್ಲಿ ತಿಳಿದುಕೊಂಡು ಪ್ರತಿಕ್ರಿಯೆ ನೀಡಬೇಕು. ಎಷ್ಟು ವಿಚಾರ ತಿಳಿದುಕೊಳ್ಳುತ್ತೀರೋ ಅಷ್ಟು ಒಳ್ಳೆಯದು. ಎಲ್ಲಾ ವಿಚಾರದ ಬಗ್ಗೆ ವಿವರಣೆ ನೀಡಲು ಹೋಗಬಾರದು. ನಾವು ಕೈಗೆತ್ತಿಕೊಳ್ಳುವ ವಿಚಾರವನ್ನು ಅರ್ಥೈಸಿಕೊಂಡು ಎಳೆಎಳೆಯಾಗಿ ಬಿಡಿಸಿ ನಮ್ಮ ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.