ETV Bharat / state

ಆಟೋ ರಿಕ್ಷಾ ಮಾಲೀಕರಿಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ - 4 ಸ್ಟ್ರೋಕ್ ಆಟೋ

ಬೆಂಗಳೂರಿನಲ್ಲಿ ಮಾಲಿನ್ಯ ನಿಯಂತ್ರಣದ ಸಲುವಾಗಿ ಟು-ಸ್ಟ್ರೋಕ್ ಆಟೋಗಳ ಅರ್ಹತಾ ಪ್ರಮಾಣಪತ್ರ (ಎಫ್​ಸಿ) ಅವಧಿಯನ್ನು ಮಾ.31ಕ್ಕೆ ಮುಕ್ತಾಯಗೊಳಿಸುತ್ತಿದ್ದು, ಇದರಿಂದ 10 ಸಾವಿರ ಟು-ಸ್ಟ್ರೋಕ್ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ.

ಆಟೋ
ಆಟೋ
author img

By

Published : Feb 24, 2022, 11:15 AM IST

ಬೆಂಗಳೂರು: ಆಟೋ ಮೀಟರ್ ದರ ಪರಿಷ್ಕರಣೆ ಮಾಡಿ ಗುಡ್ ನ್ಯೂಸ್ ಕೊಟ್ಟಿದ್ದ ಸರ್ಕಾರ ಇದೀಗ ಆಟೋ ಮಾಲೀಕರಿಗೆ ಬಿಗ್ ಶಾಕ್​ವೊಂದನ್ನು ಕೊಟ್ಟಿದೆ.

ಬೆಂಗಳೂರಿನಲ್ಲಿ 10 ಸಾವಿರ ಆಟೋ ಚಾಲಕರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಲಿದೆ. ಯಾಕಂದ್ರೆ, ರಾಜಧಾನಿಯಲ್ಲಿ ಮಾರ್ಚ್ 31 ರಿಂದ ಟು-ಸ್ಟ್ರೋಕ್ ಆಟೋಗಳು ರಸ್ತೆಗೆ ಇಳಿಯುವಂತಿಲ್ಲ. ಇದರಿಂದಾಗಿ ಸಾವಿರಾರು ಆಟೋ ಚಾಲಕರ ಪಾಡೇನು ಎಂಬ ಪ್ರಶ್ನೆ‌ ‌ಎದುರಾಗಿದೆ.‌

ವಾಯು ಮಾಲಿನ್ಯ ನಿಯಂತ್ರಣ ಮಾಡುವ ಸಲುವಾಗಿ ಟು- ಸ್ಟ್ರೋಕ್ ಕಂಪ್ಲೀಟ್ ಬ್ಯಾನ್​ ಮಾಡಲು ಸರ್ಕಾರ ನಿರ್ಧರಿಸಿದ್ದು, ಏಪ್ರಿಲ್ 1 ರಿಂದ ಟು-ಸ್ಟ್ರೋಕ್ ಆಟೋ ಸಂಚಾರ ಮಾಡುವಂತಿಲ್ಲ. ‌ಹೆಚ್ಚು ಹೊಗೆ ಉಗುಳೋ ಕಾರಣದಿಂದ ಟು-ಸ್ಟ್ರೋಕ್ ನಿಷೇಧ ಮಾಡಲಾಗುತ್ತಿದ್ದು, ಎರಡು ವರ್ಷಗಳ ಹಿಂದೆ ಟು-ಸ್ಟ್ರೋಕ್ ಸ್ಕ್ರ್ಯಾಫ್ ಮಾಡಿ 4 ಸ್ಟ್ರೋಕ್ ಖರೀದಿಸುವಂತೆ ಸೂಚಿಸಲಾಗಿತ್ತು.‌ ಆದ್ರೆ ಕೋವಿಡ್ ಪರಿಣಾಮ ಚಾಲಕರ ಆರ್ಥಿಕ ಸಮಸ್ಯೆಯಿಂದ 4 ಸ್ಟ್ರೋಕ್ ಮಾರ್ಪಾಡು ಆಗಲಿಲ್ಲ.

ಸದ್ಯಕ್ಕೆ ಏಪ್ರಿಲ್ 1 ರಿಂದ ಟು ಸ್ಟ್ರೋಕ್ ಆಟೋ ಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್​ ನೀಡುವುದನ್ನ ನಿಷೇಧಿಸಲಾಗುತ್ತಿದ್ದು, ಸರ್ಕಾರದ ನಿರ್ಧಾರದಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರುವ ಸಾಧ್ಯತೆ ಇದೆ. ಎಲ್ಲಾ ಟು-ಸ್ಟ್ರೋಕ್ ಅಟೋಗಳಿಗೆ ಏಪ್ರಿಲ್​ನಿಂದ ಎಫ್​ಸಿ ಮಾಡದಂತೆ ಸೂಚನೆ ನೀಡಲಾಗಿದೆ. ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ಟು-ಸ್ಟ್ರೋಕ್ ಆಟೋ ರಸ್ತೆಗಿಳಿದರೆ ಭಾರಿ ದಂಡ ಬೀಳಲಿದೆ. ಈ ಹಿಂದೆ ಟು-ಸ್ಟ್ರೋಕ್ ಬದಲಾಗಿ 4 ಸ್ಟ್ರೋಕ್ ಮಾರ್ಪಾಡಿಗೆ 30 ಸಾವಿರ ಸಬ್ಸಿಡಿ ನೀಡಿತ್ತೇವೆ ಎಂದು ಸರ್ಕಾರ ಹೇಳಿತ್ತು. ಆದ್ರೆ, 50 ಸಾವಿರ ಸಬ್ಸಿಡಿ ನೀಡುವಂತೆ ಚಾಲಕರು ಮನವಿ ಮಾಡಿದರು.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.