ETV Bharat / state

ಬ್ಲ್ಯಾಕ್ ಲಿಸ್ಟ್​​ನಲ್ಲಿದ್ದ ಕಂಪನಿಗೆ ಸರ್ಕಾರ ರಸ್ತೆ ನಿರ್ಮಾಣದ ಟೆಂಡರ್ ನೀಡಿದೆ: ರಾಮಲಿಂಗರೆಡ್ಡಿ

ಉದಯ ಶಿವಕುಮಾರ್ ಪ್ರೈವೇಟ್ ಲಿಮಿಟೆಡ್ ಅನರ್ಹ ಆಗಿದ್ದ ಕಂಪನಿ. ಬ್ಲ್ಯಾಕ್ ಲಿಸ್ಟ್​ಗೆ ಹಾಕಿದ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. ಬಳ್ಳಾರಿ, ತುಮಕೂರು ರಸ್ತೆ ಸೇರಿದಂತೆ ಹಲವು ಸಿಗ್ನಲ್​ ಫ್ರೀ ರಸ್ತೆಗಳ ಕಾಂಟ್ರಾಕ್ಟ್ ಕೊಟ್ಟಿದ್ದಾರೆ. ಕೂಡಲೇ ಗುತ್ತಿಗೆ ರದ್ದು ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಒತ್ತಾಯಿಸಿದರು.

ರಾಮಲಿಂಗರೆಡ್ಡಿ
ರಾಮಲಿಂಗರೆಡ್ಡಿ
author img

By

Published : Jun 3, 2021, 5:02 PM IST

ಬೆಂಗಳೂರು: ಬ್ಲ್ಯಾಕ್ ಲಿಸ್ಟ್​ಗೆ ಒಳಗಾಗಿದ್ದ ಕಂಪನಿಗೆ ರಾಜ್ಯ ಸರ್ಕಾರ ರಸ್ತೆ ನಿರ್ಮಾಣದ ಟೆಂಡರ್ ನೀಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಉದಯ ಶಿವಕುಮಾರ್ ಪ್ರೈವೇಟ್ ಲಿಮಿಟೆಡ್ ಅನರ್ಹ ಆಗಿದ್ದ ಕಂಪನಿ. ಬ್ಲ್ಯಾಕ್ ಲಿಸ್ಟ್​ಗೆ ಹಾಕಿದ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. ಬಳ್ಳಾರಿ, ತುಮಕೂರು ರಸ್ತೆ ಸೇರಿದಂತೆ ಹಲವು ಸಿಗ್ನಲ್​ ಫ್ರೀ ರಸ್ತೆಗಳ ಕಾಂಟ್ರಾಕ್ಟ್ ಕೊಟ್ಟಿದ್ದಾರೆ. ಕೂಡಲೇ ಗುತ್ತಿಗೆ ರದ್ದು ಮಾಡಬೇಕು. ಅಗತ್ಯ ಇರುವ ರಸ್ತೆಗೆ ಮಾತ್ರ ಟೆಂಡರ್ ಅಹ್ವಾನ ನೀಡಲಿ. ಐದು ವರ್ಷದಲ್ಲಿ 700ಕ್ಕೂ ಹೆಚ್ಚು ಕೋಟಿ ರೂ. ಖರ್ಚು ಮಾಡ್ತಿದ್ದಾರೆ. ಪ್ರತಿವರ್ಷ ನಿರ್ವಹಣೆಗೆ 700 ಕೋಟಿಗೂ ಅಧಿಕ ಹಣ ಖರ್ಚು ಮಾಡ್ತಿದ್ದಾರೆ. ಇದನ್ನ ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ಕೋರ್ಟ್ ಮೊರೆ ಹೋಗ್ತೀವಿ ಎಂದು ಎಚ್ಚರಿಸಿದರು.

ರಾಮಲಿಂಗರೆಡ್ಡಿ ಆರೋಪ

ಬೆಂಗಳೂರಿನ ಒಳಭಾಗದ 15 ರಸ್ತೆಗಳ ನಿರ್ಮಾಣಕ್ಕೆ 355 ಕೋಟಿ ರೂ. ಟೆಂಡರ್ ನೀಡಲಾಗಿದೆ. ನಿರ್ಮಾಣದ ಬಳಿಕ ಪ್ರತಿ ವರ್ಷ 150 ಕೋಟಿಯಂತೆ ನಿರ್ವಹಣೆಗೆ ಐದು ವರ್ಷಕ್ಕೆ 750 ಕೋಟಿ ರೂ. ಟೆಂಡರ್ ನೀಡಿದೆ. ಗುತ್ತಿಗೆದಾರ ರಸ್ತೆ ನಿರ್ಮಾಣ ಮಾಡಿದ ಬಳಿಕ ಮೂರು ವರ್ಷ ನಿರ್ವಹಣೆ ಮಾಡಬೇಕು‌. ಆದರೆ ಒಂದು ವರ್ಷ ಮಾತ್ರ ಸಾಕು ಎಂದು ಹೇಳಿದ್ದಾರೆ. ಇದು ಕಾನೂನಿಗೆ ವಿರೋಧ. ಜನರ ತೆರಿಗೆ ಹಣ ಖರ್ಚು ಮಾಡ್ತಿದ್ದಾರೆ. ಕಾಂಟ್ರಾಕ್ಟ್ ಹೆಸರಲ್ಲಿ ದುಡ್ಡು ಹೊಡೆಯುವ ಕೆಲಸ ನಡೀತಿದೆ. ಮೂಗಿಗಿಂತ ಮೂಗುತಿ ಭಾರ ಅನ್ನೋ ರೀತಿ ಆಗಿದೆ. ಬಿಬಿಎಂಪಿ ಅಧಿಕಾರಿಗಳು ವಿರೋಧ ಮಾಡಿದ್ರು ಇದಕ್ಕಾಗಿಯೇ ಸರ್ಕಾರ ಟೆಂಡರ್ ಕೆಆರ್​ಡಿಸಿಎಲ್ ಮೂಲಕ ನೀಡಿದೆ. ಎಲ್ಲವೂ ಫೈನಲ್ ಆಗಿದೆ. ಬಿಬಿಎಂಪಿ ಆಯುಕ್ತರು ವಿರೋಧ ಮಾಡಿದ್ರು ಸರ್ಕಾರ ಟೆಂಡರ್ ನೀಡಿದೆ ಎಂದರು.

ಬಿಬಿಎಂಪಿ ಅಧಿಕಾರಿಗಳು ತಾವೇ ಮಾಡ್ತೀವಿ ಅಂದ್ರೆ, ಸರ್ಕಾರ ಕೆಆರ್​ಡಿಸಿಎಲ್ ಮಾಡ್ಲಿ ಎಂದು ಕ್ಯಾಬಿನೆಟ್ ನಿರ್ಧಾರ ಮಾಡಿದೆ. ಬ್ಲಾಕ್ ಲಿಸ್ಟ್ ಕಂಪನಿಗೆ ಗುತ್ತಿಗೆ ನೀಡಿದೆ. ಪಕ್ಷದ ಮಟ್ಟದಲ್ಲಿ ಚರ್ಚೆ ಮಾಡಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡ್ತೀವಿ. ನಾವು ಕೋರ್ಟ್​ಗೆ ಹೋಗದಿದ್ರು ಬೇರೆ ಯಾರಾದರೂ ಹೋಗ್ತಾರೆ. ಬಿಜೆಪಿ ಸರ್ಕಾರ ಬಂದಾಗ ಈ ರೀತಿಯ ಟೆಂಡರ್ ಕಾಮನ್ ಆಗಿದೆ. ಕಳೆದ ಅವಧಿಯಲ್ಲೂ ರಾತ್ರಿ ಟೆಂಡರ್ ಮಾಡಿದ್ರು. ಸರ್ಕಾರ ಕೂಡಲೇ ಟೆಂಡರ್ ವಾಪಸ್​ ಪಡೆಯಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.