ETV Bharat / state

ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳು ಸಂಪೂರ್ಣ ಈಡೇರಿಲ್ಲ: ಮುಷ್ಕರ ಹಿಂಪಡೆದಿರುವುದಕ್ಕೆ ಸರ್ಕಾರಿ ನೌಕರರ ಒಕ್ಕೂಟದ ಖಂಡನೆ

author img

By

Published : Mar 1, 2023, 10:09 PM IST

Updated : Mar 1, 2023, 10:45 PM IST

ಶೇ 25ರಷ್ಟು ಮಧ್ಯಂತರ ಪರಿಹಾರ ಹಾಗೂ ಶೇ 40 ರಷ್ಟು ವೇತನ ಹೆಚ್ಚಿಸಲು 15000 ಕೋಟಿ ರೂಪಾಯಿ ಅನುದಾನವನ್ನು 2023-24ನೇ ಸಾಲಿನ ಬಜೆಟ್‌ನಲ್ಲಿ ತೆಗೆದಿರಿಸಿ ಅನುಷ್ಠಾನ ಮಾಡಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಆಗ್ರಹಿಸಿದೆ.

government employees demands
government employees demands

ಬೆಂಗಳೂರು: ಸರ್ಕಾರಿ ನೌಕರರ ಬೇಡಿಕೆಗಳು ಸಂಪೂರ್ಣ ಇನ್ನೂ ಈಡೇರಿಲ್ಲ. ಆದರೂ ಮುಷ್ಕರ ಹಿಂಪಡೆದಿರುವುದಕ್ಕೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಖಂಡಿಸಿದೆ. ಬುಧವಾರ ನಡೆದ ರಾಜ್ಯ ಸರ್ಕಾರಿ ನೌಕರರ ಮುಷ್ಕರದಲ್ಲಿ ಭಾಗವಹಿಸಿ ಯಶಸ್ವಿ ಮಾಡಿದ ಎಲ್ಲರಿಗೂ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪರ ಅಭಿನಂದನೆಗಳನ್ನು ಹೇಳಬಯಸುತ್ತೇವೆ ಎಂದು ಒಕ್ಕೂಟದ ಅಧ್ಯಕ್ಷ ಜೈಕುಮಾರ್ ಹೆಚ್.ಎಸ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಲವಾರು ತೊಂದರೆಗಳಾಗಿವೆ. ಅದಕ್ಕಾಗಿ ನೌಕರರ ಒಕ್ಕೂಟ ವಿಷಾದಿಸುತ್ತದೆ. ಆದರೆ, ರಾಜ್ಯಸರ್ಕಾರವು ಸಕಾಲದಲ್ಲಿ ಮಧ್ಯಪ್ರವೇಶಿಸಿ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕಳೆದ ಒಂದು ವರ್ಷದಿಂದ ನೌಕರರ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಸರ್ಕಾರ ಏಳನೇ ವೇತನ ಆಯೋಗ ರಚನೆ ಮಾಡಿ, ಕೂಡಲೇ 01-07-2022ರಿಂದಲೇ ಅನ್ವಯ ಆಗುವಂತೆ ವೇತನ ಪರಿಷ್ಕರಣೆ ಮಾಡಬೇಕು. ಅಲ್ಲದೇ ರಾಜ್ಯದಲ್ಲಿ NPS ರದ್ದು ಮಾಡಿ, OPS ಮರುಸ್ಥಾಪನೆ ಮಾಡಲು ಒತ್ತಾಯಿಸುತ್ತ ಬಂದಿವೆ. ಆದರೆ, ರಾಜ್ಯ ಸರ್ಕಾರ ನೌಕರರ ಒತ್ತಾಯವನ್ನು ನಿರ್ಲಕ್ಷ್ಯ ಮಾಡುತ್ತ ಬಂದಿತ್ತು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

government employees demands
ಪತ್ರಿಕಾ ಪ್ರಕಟಣೆ

ಶೇ 25ರಷ್ಟು ಮಧ್ಯಂತರ ಪರಿಹಾರ; ಶೇ40ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹ: ಇಂದು ರಾಜ್ಯ ಸರ್ಕಾರ ಏಳನೇ ವೇತನ ಆಯೋಗದ ಭಾಗವಾಗಿ 1 ಏಪ್ರಿಲ್ 2023ರಿಂದ ಅನ್ವಯ ಆಗುವಂತೆ ಶೇ 17ರಷ್ಟು ಮಧ್ಯಂತರ ಪರಿಹಾರವನ್ನು ಘೋಷಿಸಿದೆ. ಅಲ್ಲದೇ, NPS ರದ್ದು ಮಾಡಿ, OPS ಮರುಸ್ಥಾಪನೆ ಮಾಡುವ ಕುರಿತಾಗಿ ಅಧ್ಯಯನ ಮಾಡಿ ಶಿಫಾರಸುಗಳನ್ನು ಮಾಡಲು ಅಧಿಕಾರಿ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ.

ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟವು ಶೇ. 25ರಷ್ಟು ಮಧ್ಯಂತರ ಪರಿಹಾರ ಕೂಡಲೇ ಘೋಷಣೆ ಮಾಡಬೇಕು ಹಾಗೂ ಸರ್ಕಾರವು ಅಂತಿಮವಾಗಿ ಶೇ40ರಷ್ಟು ವೇತನ ಹೆಚ್ಚಿಸಲು ಅಗತ್ಯ 15000 ಕೋಟಿ ರೂಪಾಯಿಗಳ ಅನುದಾನವನ್ನು 2023-24ನೇ ಸಾಲಿನ ಬಜೆಟ್‌ನಲ್ಲಿ ತೆಗೆದಿರಿಸಿ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿತು.

ಆದರೆ, ಸರ್ಕಾರವು ಮಧ್ಯಂತರ ಪರಿಹಾರವನ್ನು 01-07-2022ರಿಂದ ಅನ್ವಯ ಮಾಡದೇ 01-04- 2023ರಿಂದ ಅನ್ವಯ ಆಗುವಂತೆ ಆದೇಶ ಮಾಡುವ ಮೂಲಕ ರಾಜ್ಯದ ನೌಕರರು 9 ತಿಂಗಳ ವೇತನ ಹೆಚ್ಚಳದಿಂದ ವಂಚಿತರಾಗುವಂತೆ ಮಾಡಿರುವುದನ್ನು ಒಕ್ಕೂಟ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ. ರಾಜ್ಯದ ಸರ್ಕಾರಿ ನೌಕರರಿಗೆ ರಚಿಸಲಾಗಿರುವ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗಾಗಿ 2023-24ನೇ ಸಾಲಿನ ಬಜೆಟ್‌ನಲ್ಲಿ ಅಗತ್ಯವಿರುವ ಅಂದಾಜು 15000 ಕೋಟಿ ರೂಪಾಯಿಗಳನ್ನು ತೆಗೆದಿರಿಸಬೇಕಾಗಿತ್ತು. ಆದರೆ ಮುಖ್ಯಮಂತ್ರಿಯವರು ಅದಕ್ಕಾಗಿ 6000 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿರುವುದಾಗಿ ಬಜೆಟ್‌ ಮಂಡನೆಯ ನಂತರ ಹೊರಗೆ ಹೇಳಿದ್ದಾರೆ.

government employees demands
ಪತ್ರಿಕಾ ಪ್ರಕಟಣೆ

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಮಿತಿ ರಚನೆ: NPS ರದ್ಧತಿ ಕುರಿತಂತೆ ಪರಿಶೀಲಿಸಲು ಈ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಮಿತಿಯೊಂದನ್ನು ರಚಿಸಿದ್ದರು. ಆದರೆ, ಆ ಸಮಿತಿ ಈ ವರೆಗೂ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ಆದರೆ, ಈಗ ಸರ್ಕಾರವು ಅಂತಹ ಮತ್ತೊಂದು ಸಮಿತಿ ರಚಿಸಿರುವುದನ್ನು ಗಮನಿಸಿದರೆ, ರಾಜ್ಯ ಸರ್ಕಾರವು NPS ರದ್ದು ಮಾಡಿ OPS ಮರುಸ್ಥಾಪನೆ ಮಾಡಲು ಬದ್ಧತೆ ಹೊಂದಿಲ್ಲ ಎಂಬುದನ್ನು ಗಮನಿಸಬಹುದಾಗಿದೆ.

NPS ಸಮಸ್ಯೆ ಮುಂದುವರೆಸುವ ತಂತ್ರಗಾರಿಕೆ: NPS ರದ್ದು ಮಾಡಿ OPS ಮರುಸ್ಥಾಪನೆ ಕುರಿತಾಗಿ ರಾಜಸ್ಥಾನ, ಛತ್ತೀಸ್​​ಗಢ, ಪಂಜಾಬ್, ಹಿಮಾಚಲ ಪ್ರದೇಶ, ಹಾಗೂ ಜಾರ್ಖಂಡ್ ರಾಜ್ಯಗಳು ದಿಟ್ಟ ನಿರ್ಧಾರ ಕೈಗೊಂಡು ಆದೇಶ ಮಾಡಿವೆ. ಕರ್ನಾಟಕ ರಾಜ್ಯ ಸರಕಾರವು ಆ ನಿಟ್ಟಿನಲ್ಲಿ ಆದೇಶ ಹೊರಡಿಸಬಹುದಾಗಿತ್ತು. ಆದರೆ, ಈಗಲೂ ಕೂಡಾ ಮತ್ತೊಂದು ಅಧಿಕಾರಿ ಸಮಿತಿ ರಚಿಸಿ, ಅದರಿಂದ ಇನ್ನು ಎರಡು ತಿಂಗಳಲ್ಲಿ ವರದಿ ತರಿಸಿಕೊಳ್ಳುವ ಆದೇಶವೆಂದರೆ NPS ಸಮಸ್ಯೆಯನ್ನು ಯಥಾವತ್ತಾಗಿ ಮುಂದುವರೆಸುವ ತಂತ್ರಗಾರಿಕೆಯಾಗಿ ಕಾಣುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅನಿರ್ದಿಷ್ಟ ಮುಷ್ಕರಕ್ಕೆ ವಿವಿಧ ಸಂಘಟಣೆಗಳು ಸಾಥ್​: ಏಳನೇ ವೇತನ ಆಯೋಗದ ಜಾರಿ 40% ಫಿಟೆಂಟ್ ಮತ್ತು OPS ಮರುಸ್ಪಾಪನೆ ಈ ಎರಡು ಬೇಡಿಕೆಗಳು ಈಡೇರುವವವರೆಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಅನಿರ್ದಿಷ್ಟ ಮುಷ್ಕರವನ್ನು ಹಿಂಪಡೆಯುವುದಿಲ್ಲವೆಂದು ಹೇಳಿದ್ದರ ಹಿನ್ನೆಲೆ ವಿವಿಧ ನೌಕರರ ಸಂಘಟನೆಗಳು ಇಂದಿನ ಮುಷ್ಕರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದವು.

ಮುಷ್ಕರ ಹಿಂಪಡೆದಿರುವುದು NPS ನೌಕರರಿಗೆ ದ್ರೋಹ: ಆದರೆ, NPS ರದ್ದು ಮಾಡಿ OPS ಮರುಸ್ಥಾಪನೆ ಮಾಡಲು ಅಧ್ಯಯನಕ್ಕಾಗಿ ಅಧಿಕಾರಿ ಸಮಿತಿ ರಚಿಸುವುದಾಗಿ ಸರ್ಕಾರ ಹೇಳಿದ ತಕ್ಷಣ ಅದನ್ನು ಒಪ್ಪಿ ಸಂಘವು ಮುಷ್ಕರವನ್ನು ಹಿಂಪಡೆದಿರುವುದು NPS ನೌಕರರಿಗೆ ಬಗೆದ ದ್ರೋಹವಾಗಿದೆ. ಹೀಗೆ ಮಾಡುವುದರ ಮೂಲಕ NPS ನೌಕರರನ್ನು ನಡು ನೀರಿನಲ್ಲಿ ಕೈ ಬಿಟ್ಟಂತಾಗಿದೆ ಹಾಗೂ NPS ರದ್ದತಿಯ ಕುರಿತು ಸರ್ಕಾರ ತನ್ನ ಬದ್ಧತೆ ತೋರಿಸದ ಕಾರಣಕ್ಕಾಗಿ ನೌಕರರು ಮತ್ತೊಂದು ಹೋರಾಟದ ಹಾದಿ ತುಳಿಯಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇವೆಲ್ಲ ಅಂಶಗಳ ಹಿನ್ನೆಲೆಯಲ್ಲಿ, ಮಧ್ಯಂತರ ಪರಿಹಾರವನ್ನು ದಿನಾಂಕ: 1.07.2022ರಿಂದ ಅನ್ವಯವಾಗುವಂತೆ ಜಾರಿಗೊಳಿಸಬೇಕೆಂದು ಮತ್ತು NPS ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಪದ್ಮತಿ ಮರುಸ್ಥಾಪಿಸಲು ಆಗ್ರಹಿಸಿ ಮುಂದಿನ ದಿನಗಳಲ್ಲಿ ಗಂಭೀರ ಹೋರಾಟವನ್ನು ರೂಪಿಸಲು ನೌಕರ ಸಂಘಟನೆಗಳು ಸಜ್ಜಾಗಬೇಕೆಂದು ಒಕ್ಕೂಟವು ಕರೆ ನೀಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂಓದಿ:ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಿಸಿ ಸರ್ಕಾರ ಆದೇಶ: ಮುಷ್ಕರ ವಾಪಸ್

Last Updated : Mar 1, 2023, 10:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.