ETV Bharat / state

ಬಿಜೆಪಿಗೆ ಬಿಸಿತುಪ್ಪವಾದ ಸರ್ಕಾರಿ ನೌಕರರ ವೇತನ ಪರಿಷ್ಕರಣೆ, OPS ಪಟ್ಟು; ಬೊಮ್ಮಾಯಿ ಸರ್ಕಾರದ ಕಾರ್ಯತಂತ್ರ ಏನು? - ವೇತನ ಮತ್ತು ಭತ್ಯೆಗಳ ಪರಿಷ್ಕರಣೆ

7ನೇ ವೇತನ ಆಯೋಗ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆ ಜಾರಿಗೆ ಸರ್ಕಾರಿ ನೌಕರರ ಒತ್ತಾಯ - ಚುನಾವಣೆ ಹೊಸ್ತಿಲಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ನುಂಗಲಾರದ ತುತ್ತು -ಈಡೇರುತ್ತಾ ಸರ್ಕಾರಿ ನೌಕರರ ಬೇಡಿಕೆ?

government employees demand Pay Revision and OPS
ಸರ್ಕಾರಿ ನೌಕರರಿಂದ ವೇತನ ಪರಿಷ್ಕರಣೆ, OPS ಪಟ್ಟು: ಸರ್ಕಾರದ ಕಾರ್ಯತಂತ್ರ ಏನು?
author img

By

Published : Feb 19, 2023, 3:33 PM IST

ಬೆಂಗಳೂರು: ಚುನಾವಣಾ ವರ್ಷದಲ್ಲಿ ಬಿಜೆಪಿ ಸರ್ಕಾರಕ್ಕೆ ಸರ್ಕಾರಿ ನೌಕರರ ಏಳನೇ ಪರಿಷ್ಕೃತ ವೇತನ ಹಾಗೂ ಹಳೆ ಪಿಂಚಣಿ ಯೋಜನೆ (OPS)ಗಾಗಿನ ಪಟ್ಟು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದೊಡ್ಡ ಪ್ರಮಾಣದಲ್ಲಿ ಮತ ಬ್ಯಾಂಕ್ ಹೊಂದಿರುವ ಸರ್ಕಾರಿ ಉದ್ಯೋಗಿಗಳ ಈ ಎರಡು ಬೇಡಿಕೆಯನ್ನು ಕಡೆಗಣಿಸುವುದು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ಇದೀಗ ಸರ್ಕಾರಿ ನೌಕರರು ತಮ್ಮ ಪಟ್ಟು ಬಿಗಿಪಡಿಸಲು ಮುಂದಾಗಿದ್ದು, ಬೊಮ್ಮಾಯಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

7ನೇ ವೇತನ ಆಯೋಗ ಪರಿಷ್ಕರಣೆ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂಬುದು ರಾಜ್ಯ ಸರ್ಕಾರಿ ನೌಕರರ ಒತ್ತಾಯವಾಗಿದೆ. ಬಹುದಿನಗಳ ಈ ಬೇಡಿಕೆ ಈಡೇರಿಕೆಗೆ ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದಾರೆ. ಅದರಲ್ಲೂ ಚುನಾವಣೆ ಸನಿಹದಲ್ಲಿರುವ ಕಾರಣ ಸರ್ಕಾರಿ ನೌಕರರು ತಮ್ಮ ಪಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. 7ನೇ ಪರಿಷ್ಕೃತ ವೇತನವನ್ನು ಕೂಡಲೇ ಜಾರಿಗೊಳಿಸಲು ಒಂದೆಡೆ ಪಟ್ಟು ಹಿಡಿದರೆ, ಇನ್ನೊಂದೆಡೆ ಹಳೆ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.

ಮತ್ತೆ ಪಟ್ಟು ಬಿಗಿಗೊಳಿಸಲಿರುವ ಸರ್ಕಾರಿ ನೌಕರರು: 2023-24ರ ಬಜೆಟ್ ನಲ್ಲಿ ಸಿಎಂ ಬೊಮ್ಮಾಯಿ ರಾಜ್ಯ ಸರ್ಕಾರಿ ನೌಕರರ ಎರಡು ಪ್ರಮುಖ ಬೇಡಿಕೆಗಳಾದ ವೇತನ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೇ ಇರುವುದು ನೌಕರರನ್ನು ಕೆರಳಿಸಿದೆ. ಇದೀಗ ರಾಜ್ಯ ಸರ್ಕಾರಿ ನೌಕರರ ಸಂಘ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಮಾಡಿಕೊಳ್ಳಲು ನಿರ್ಧರಿಸಿದೆ.

ಬಜೆಟ್ ನಲ್ಲಿ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯ ಬಗ್ಗೆ ಯಾವುದೇ ಘೋಷಣೆಗಳನ್ನು ಸರ್ಕಾರವು ಪ್ರಸ್ತಾಪಿಸದೇ ಇರುವುದರಿಂದ ರಾಜ್ಯ ಸರ್ಕಾರಿ ನೌಕರರಿಗೆ ನಿರಾಶೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆ ಸರ್ಕಾರಿ ನೌಕರರ ಸಂಘದ ಚುನಾಯಿತ ನಿರ್ದೇಶಕರ ಸಭೆಯನ್ನು ಮಂಗಳವಾರ ಕರೆಯಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಷಡಕ್ಷರಿ ತಿಳಿಸಿದ್ದಾರೆ.

ಇಕ್ಕಟ್ಟಿಗೆ ಸಿಲುಕಿದ ಬೊಮ್ಮಾಯಿ ಸರ್ಕಾರ: ಇತ್ತ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ಪಟ್ಟು ಬಿಗಿಗೊಳಿಸಿರುವುದು ಬೊಮ್ಮಾಯಿ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಸುಮಾರು ಏಳು ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ಇದ್ದು, ಬೇಡಿಕೆ ಈಡೇರಿಸದೇ ಇದ್ದರೆ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಚುನಾವಣೆ ವೇಳೆ ಬಿಜೆಪಿ ಸರ್ಕಾರದ ಮೇಲೆ ತಿರುಗಿಬಿದ್ದರೆ ಕಷ್ಟ ಎಂಬ ಆತಂಕ ಬಿಜೆಪಿ ಸರ್ಕಾರಕ್ಕೆ ಇದೆ.

ಹಳೆ ಪಿಂಚಣಿ ಯೋಜನೆ (OPS) ಜಾರಿಗೆ ತಂದರೆ ರಾಜ್ಯ ಬೊಕ್ಕಸದ ಮೇಲೆ ಭಾರೀ ಹೊರೆ ಬೀಳಲಿದೆ. ಈ ಹೊಸ ಪಿಂಚಣಿ ಯೋಜನೆ (NPS)ಯಿಂದ ಸುಮಾರು 2.60 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರ ಮೇಲೆ ಪರಿಣಾಮ ಬೀರಿದೆ. OPS ನಿಂದ ಒಟ್ಟು ವೇತನ ವೆಚ್ಚ ಸುಮಾರು 90,000 ಕೋಟಿ ರೂ. ಆಗುತ್ತದೆ. ಇದರಲ್ಲಿ ಪಿಂಚಣಿ ರೂಪದಲ್ಲಿ ಸುಮಾರು 24,000 ಕೋಟಿ ರೂ. ಹೊರೆ ಬೀಳುತ್ತಿತ್ತು ಎಂದು ಆರ್ಥಿಕ ಇಲಾಖೆ ತಿಳಿಸಿದೆ.

ಇತ್ತ 7ನೇ ವೇತನ ಪರಿಷ್ಕರಣೆಯೂ ಸರ್ಕಾರದ ಬೊಕ್ಕಸದ ಮೇಲೆ ದೊಡ್ಡ ಹೊರೆ ಹಾಕಲಿದೆ. ಇದರಿಂದ ಬೊಕ್ಕಸದ ಮೇಲೆ ವಾರ್ಷಿಕವಾಗಿ 16,000-18,000 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ 7ನೇ ಪರಿಷ್ಕೃತ ವೇತನ ಜಾರಿ ಸಂಬಂಧ ಆಯೋಗವನ್ನು ಬೊಮ್ಮಾಯಿ‌ ಸರ್ಕಾರ ರಚಿಸಿದೆ. ಆದರೆ, ಜಾರಿ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡದೇ ಇರುವುದು ಸರ್ಕಾರಿ ನೌಕರರನ್ನು ಕೆರಳಿಸಿದೆ.

ಬಿಜೆಪಿ ಸರ್ಕಾರದ ಕಾರ್ಯತಂತ್ರ ಏನು?: ಚುನಾವಣೆ ಹೊಸ್ತಿಲಲ್ಲಿ ಸರ್ಕಾರಿ ನೌಕರರ ವಿರೋಧ ಕಟ್ಟಲು ಇಚ್ಚಿಸದ ಬಿಜೆಪಿ ಸರ್ಕಾರ ಈ ಎರಡು ಪ್ರಮುಖ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಎನ್ ಪಿಎಸ್ ನಿಂದ ಚುನಾವಣೆ ವೇಳೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿತ್ತು.‌ ಇತ್ತ ದಿಲ್ಲಿ, ರಾಜಸ್ತಾನ, ಛತ್ತೀಸಗಡ ಸರ್ಕಾರಗಳು ಹಳೆ ಪಿಂಚಣಿ ಯೋಜನೆ ಜಾರಿಗೆ ನಿರ್ಧರಿಸಿದೆ. ಇತ್ತ ರಾಜ್ಯ ಕಾಂಗ್ರೆಸ್ ಕೂಡ ಸರ್ಕಾರಿ ನೌಕರರ ಮತ ಸೆಳೆಯಲು ಅಧಿಕಾರಕ್ಕೆ ಬಂದರೆ OPS ಜಾರಿ ಗೊಳಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಗುಜರಾತ್ ಚುನಾವಣೆಯಲ್ಲಿ NPS ವಿಚಾರ ಬಿಜೆಪಿ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರಿರಲ್ಲ. ಇದೆಲ್ಲವನ್ನೂ ಗಮನಿಸಿರುವ ಬಿಜೆಪಿ ಸರ್ಕಾರ ಈ ಸಂಬಂಧ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚಿಸುತ್ತಿದೆ.

ಏಳನೇ ಪರಿಷ್ಕೃತ ವೇತನ ಜಾರಿಗೊಳಿಸುವುದಾಗಿ ತಿಳಿಸಿರುವ ಸಿಎಂ ಬೊಮ್ಮಾಯಿ‌, ಈಗಾಗಲೇ ಈ‌ ಸಂಬಂಧ 6,000 ಕೋಟಿ ರೂ. ಮೀಸಲಿಡಲಾಗಿದೆ. ಹೆಚ್ಚುವರಿ ಹಣ ಬೇಕಾದರೆ ಪೂರಕ ಅಂದಾಜಿನಲ್ಲಿ ಸೇರಿಸಲಾಗುವುದು. 7ನೇ ಪರಿಷ್ಕೃತ ವೇತನ ಆಯೋಗದ ಮಧ್ಯಂತರ ವರದಿ ಆಧಾರದ ಮೇರೆಗೆ ಏಳನೇ ಪರಿಷ್ಕೃತ ವೇತನವನ್ನು ಆದಷ್ಟು ಬೇಗ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಈ ಸಂಬಂಧ ಚುನಾವಣೆ ಘೋಷಣೆಯ ಮುಂಚೆಯೇ ಅಧಿಕೃತ ಆದೇಶ ಹೊರಡಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗ್ತಿದೆ.

ಇತ್ತ OPS ಸಂಬಂಧವೂ ಬಿಜೆಪಿ ಸರ್ಕಾರ ಒಂದು ನಿರ್ಧಾರಕ್ಕೆ ಬರುವ ಚಿಂತನೆಯಲ್ಲಿದೆ. ಅನೇಕ ಬಿಜೆಪಿ ಶಾಸಕರುಗಳೇ ಚುನಾವಣೆ ಹಿನ್ನೆಲೆ OPS ಮರುಜಾರಿಗೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸುವ ಬಗ್ಗೆನೂ ಚರ್ಚೆ ನಡೆದಿದೆ. ಆ ಮೂಲಕ ಚುನಾವಣೆ ವೇಳೆ ಸರ್ಕಾರಿ ನೌಕರರ ಕೋಪದಿಂದ ಪಾರಾಗಲು ಕಾರ್ಯತಂತ್ರ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ರೋಹಿಣಿ ಸಿಂಧೂರಿಗೆ ಪ್ರಶ್ನೆಗಳ ಸುರಿಮಳೆ ಹರಿಸಿದ ಡಿ. ರೂಪಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.