ETV Bharat / state

ಪಿಯು ಮೌಲ್ಯಮಾಪಕರಿಗೆ ಇನ್ನೂ ಸಿಗದ ಸಂಭಾವನೆ: ಉಪನ್ಯಾಸಕರಿಂದ ಪ್ರತಿಭಟನೆ

ಪಿಯು ಮೌಲ್ಯಮಾಪಕರಿಗೆ ಇನ್ನೂ ಸಂಭಾವನೆ ನೀಡದ ಹಿನ್ನೆಲೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.

author img

By

Published : Jun 25, 2019, 7:45 PM IST

ಪಿಯು ಮೌಲ್ಯಮಾಪಕರಿಗೆ ಇನ್ನೂ ಸಂಭಾವನೆ ಕೊಡದ ಸರ್ಕಾರ

ಬೆಂಗಳೂರು: ಪಿಯು ಮೌಲ್ಯಮಾಪಕರಿಗೆ ಸಂಭಾವನೆ ನೀಡದ ಹಿನ್ನೆಲೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ನೂರಾರು ಉಪನ್ಯಾಸಕರು ಬೆಂಗಳೂರು ನಗರದ ಮೌರ್ಯ ಸರ್ಕಲ್​​ನಲ್ಲಿ ಇಂದು ಪ್ರತಿಭಟನೆ ನಡೆಸಿದ್ರು.

ಕಳೆದ 10 ವರ್ಷಗಳಿಂದ ಹಲವಾರು ಹೋರಾಟ ನಡೆಸುತ್ತ ಬಂದಿದ್ದೇವೆ.. ಹಾಗೆಯೇ ಕರ್ನಾಟಕದಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಮಕ್ಕಳಲ್ಲಿ ಗುಣಾತ್ಮಕ ಹಾಗೂ ಪರಿಣಾಮಾತ್ಮಕ ಬದಲಾವಣೆ ತರುವ ರೂವಾರಿಯಾಗಿದ್ದೇವೆ. ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ 2018-19ನೇ ಸಾಲಿನ ಮೌಲ್ಯಮಾಪನದ ಸಂಭಾವನೆಯನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ ಅಂತ ಆರೋಪಿಸಿದರು.‌ ಉಪನ್ಯಾಸಕರ ಸಮಸ್ಯೆಗಳ ಪರಿಹಾರಕ್ಕಾಗಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಹೀಗಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಪರಿಸ್ಥಿತಿ ಎದುರಾಗಿದೆ ಅಂತಾ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.

ಪಿಯು ಮೌಲ್ಯಮಾಪಕರಿಗೆ ಇನ್ನೂ ಸಿಗದ ಸಂಭಾವನೆ

ಉಪನ್ಯಾಸಕರ ಬೇಡಿಕೆಗಳೇನು..?

2019 -20ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂಭಾವನೆ ಇದುವರೆಗೂ ಬಿಡುಗಡೆಯಾಗಿಲ್ಲ. ಮೌಲ್ಯಮಾಪನ ಸಂಭಾವನೆಯನ್ನು ಚೆಕ್ ಮೂಲಕ ವಿತರಿಸಬೇಕು..
2008ರ ನಂತರ ಆಯ್ಕೆಯಾದ ಉಪನ್ಯಾಸಕರಿಗೆ ನೀಡುತ್ತಿದ್ದ 500 ರೂ. ಎಕ್ಸ್​​ಗ್ರೇಷಿಯಾವನ್ನ ಕೂಡಲೇ ಮೂಲ ವೇತನಕ್ಕೆ ವಿಲೀನಗೊಳಿಸಬೇಕು. ವರ್ಗಾವಣೆ ಪ್ರಕ್ರಿಯೆ ಸಂಬಂಧ ಅಧಿಸೂಚನೆ ಹೊರಡಿಸಬೇಕು.‌
600 ಪದವಿ ಪೂರ್ವ ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರು ಇಲ್ಲದಿರುವುದರಿಂದ ಆಡಳಿತಾತ್ಮಕ ಸಮಸ್ಯೆಯಾಗಿದ್ದು, ಕೂಡಲೇ‌ ಪ್ರಾಂಶುಪಾಲರ ನೇಮಕಾತಿ ಮಾಡಬೇಕು ಸೇರಿದಂತೆ ಇತರ ಬೇಡಿಕೆಗಳನ್ನು ಉಪನ್ಯಾಸಕರು ಮುಂದಿಟ್ಟಿದ್ದಾರೆ.

Intro:ಪಿಯು ಮೌಲ್ಯಮಾಪನ ನಡೆದು ತಿಂಗಳಾದರು ಸಂಭಾವನೆಯಿಲ್ಲ; ಸರ್ಕಾರದ ವಿರುದ್ಧ ಶಿಕ್ಷಕರ ಹೋರಾಟ...

ಬೆಂಗಳೂರು: ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಇಂದು ಬೀದಿಗಿಳಿದು‌ ಪ್ರತಿಭಟನೆ ನಡೆಸಿದರು..‌ ಕಳೆದ 10 ವರ್ಷಗಳಿಂದ ಹಲವಾರು ಹೋರಾಟ ಗಳನ್ನು ನಡೆಸುತ್ತ ಬಂದಿದ್ದೇವೆ.. ಹಾಗೆಯೇ ಕರ್ನಾಟಕದಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಮಕ್ಕಳಲ್ಲಿ ಗುಣಾತ್ಮಕ ಹಾಗೂ ಪರಿಣಾಮಾತ್ಮಕ ಬದಲಾವಣೆ ತರುವ ರೂವಾರಿಯಾಗಿದ್ದೇವೆ. ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ 2018-19 ನೇ ಸಾಲಿನ ಮೌಲ್ಯಮಾಪನದ ಸಂಭಾವನೆಯನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ ಅಂತ ಆರೋಪಿಸಿದರು..‌

ಉಪನ್ಯಾಸಕರ ಸಮಸ್ಯೆಗಳ ಪರಿಹಾರಕ್ಕಾಗಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.. ಹೀಗಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಪರಿಸ್ಥಿರಿ ಎದುರಾಗಿದೆ ಅಂತ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದರು..‌ ನಗರದ ಮೌರ್ಯ ಸರ್ಕಲ್ ನಲ್ಲಿ ನೂರಾರು ಉಪನ್ಯಾಸಕರು ಪ್ರತಿಭಟಿಸಿದರು..

ಉಪನ್ಯಾಸಕರ ಬೇಡಿಕೆಗಳೇನು??

* 2019 -20 ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂಭಾವನೆ ಇದುವರೆಗೂ ಬಿಡುಗಡೆಯಾಗಿಲ್ಲ..ಇದು ಕಳೆದ ವರ್ಷದಿಂದ ಸಮಸ್ಯೆಯಾಗಿದ್ದು, ಮೌಲ್ಯಮಾಪನ ಸಂಭಾವನೆಯನ್ನು ಚೆಕ್ ಮೂಲಕ ವಿತರಿಸಬೇಕು..
* 2008ರ ನಂತರ ಆಯ್ಕೆಯಾದ ಉಪನ್ಯಾಸಕರಿಗೆ ನೀಡುತ್ತಿದ್ದ 500ರೂ. ಎಕ್ಸ್ ಗ್ರೇಷಿಯಾವನ್ನ ಕೂಡಲೇ ಮೂಲ ವೇತನಕ್ಕೆ ವಿನ ಗೊಳಿಸಬೇಕು..
* ವರ್ಗಾವಣೆ ಪ್ರಕ್ರಿಯೆಯ ಸಂಬಂಧ ಅಧಿಸೂಚನೆ ಹೊರಡಿಸುವುದು..‌
* 600 ಪದವಿಪೂರ್ಣ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರು ಇಲ್ಲದಿರುವುದರಿಂದ ಆಡಳಿತ್ಮಾಕ ಸಮಸ್ಯೆಯಾಗಿದ್ದು, ಕೂಡಲೇ‌ ಪ್ರಾಂಶುಪಾಲರ ನೇಮಕಾತಿ ಮಾಡಬೇಕು...

Byte; ತಿಮ್ಮಯ್ಯ ಪುರ್ಲೆ- ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ

KN_BNG_02_25_TEACHERS_PROTEST_SCRIPT_7201801

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.