ETV Bharat / state

ಡ್ರಗ್ಸ್​ ಸಾಗಾಟ, ಮಾರಾಟ ನಿಯಂತ್ರಿಸುವಲ್ಲಿ ಪೊಲೀಸರಿಂದ ಉತ್ತಮ ಕೆಲಸ : ಸಚಿವ ಬೊಮ್ಮಾಯಿ - ಬೆಂಗಳೂರು ಲೇಟೆಸ್ಟ್ ನ್ಯೂಸ್

ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಈ ವರ್ಷ ಜಪ್ತಿಯಾದ ಮಾದಕ ವಸ್ತುಗಳ ವಿಲೇವಾರಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಿಜಿ ಐಜಿಪಿ ಪ್ರವೀಣ್ ಸೂದ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸರಬರಾಜು ಆಗುತ್ತಿದ್ದ ಮಾದಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು..

ಸಚಿವ ಬೊಮ್ಮಾಯಿ
ಸಚಿವ ಬೊಮ್ಮಾಯಿ
author img

By

Published : Jun 26, 2021, 3:17 PM IST

ಬೆಂಗಳೂರು : ಮಾದಕ ವಸ್ತುಗಳ ಸಾಗಾಟ, ಮಾರಾಟ ನಿಯಂತ್ರಿಸುವಲ್ಲಿ ಬೆಂಗಳೂರು ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ ಪ್ರಯುಕ್ತ ಮಾತನಾಡಿದ ಅವರು, ಪೊಲೀಸರು ವಶಪಡಿಸಿಕೊಂಡಿದ್ದ ಶೇ.60ರಷ್ಟು ಮಾದಕ ವಸ್ತುವನ್ನು ನಾಶಪಡಿಸಿದ್ದೇವೆ. ಇನ್ನು, 40ರಷ್ಟು ಎಫ್‌ಎಸ್​ಎಸ್​ ಪರೀಕ್ಷಾ ಹಂತದಲ್ಲಿದೆ. ಕೋವಿಡ್​​ ಬಿಕ್ಕಟ್ಟಿನಲ್ಲಿಯೂ ನಮ್ಮ ಸಮರ ನಿಂತಿಲ್ಲ ಎಂದರು.

ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಈ ವರ್ಷ ಜಪ್ತಿಯಾದ ಮಾದಕ ವಸ್ತುಗಳ ವಿಲೇವಾರಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಿಜಿ, ಐಜಿಪಿ ಪ್ರವೀಣ್ ಸೂದ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸರಬರಾಜು ಆಗುತ್ತಿದ್ದ ಮಾದಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಬೆಂಗಳೂರಿನ 8 ವಿಭಾಗ ಮತ್ತು ಸಿಸಿಬಿ ಪೊಲೀಸರಿಂದ ಲಾಕ್​ಡೌನ್ ಸಂದರ್ಭದಲ್ಲಿ 3 ಸಾವಿರ ಕೆಜಿ ಡ್ರಗ್ಸ್​ ಜಪ್ತಿ ಮಾಡಲಾಗಿದೆ. ಈ ಸಂಬಂಧ ಒಟ್ಟು 382 ಪ್ರಕರಣ ದಾಖಲಾಗಿವೆ. 2,500 ಕೆಜಿ ಗಾಂಜಾ, 960 ಗ್ರಾಂ ಅಫೀಮು, 872 ಗ್ರಾಂ ಹೆರಾಯಿನ್, 82 ಗ್ರಾಂ ಎಂಡಿಎಂಎ ಮಾತ್ರೆ, 9.4 ಕೆಜಿ ಚರಸ್, 90 ಕೆಜಿ ಮೆಥಾಕ್ಲೀನ್, 10.2 ಕೆಜಿ ಹ್ಯಾಶಿಶ್ ಆಯಿಲ್, 96.43 ಗ್ರಾಂ ಕೊಕೇನ್ ಸೇರಿ 50 ಕೋಟಿ ರೂ.ಮೌಲ್ಯದ ಡ್ರಗ್ಸ್​ ವಶಕ್ಕೆ ಪಡೆಯಲಾಗಿದೆ.

ಈ ವೇಳೆ ಡಿಜಿ ಐಜಿಪಿ ಪ್ರವೀಣ್ ಸೂದ್ ಮಾತನಾಡಿ, ಪ್ರತಿ ಸಂದರ್ಭದಲ್ಲಿಯೂ ಡ್ರಗ್ಸ್ ವಿರುದ್ಧ ಸಮರ ಮಾಡುತ್ತಿದ್ದೇವೆ. ಮಾದಕ ವಸ್ತು ಜಾಲವನ್ನು ಕಿತ್ತೆಸೆಯಲು ನಾವು ಸಿದ್ಧ ಎಂದರು. ಕೇವಲ ಡ್ರಗ್ ಪೆಡ್ಲರ್ಸ್ ಬಂಧನವಷ್ಟೇ ನಮ್ಮ ಜವಾಬ್ದಾರಿಯಲ್ಲ. ಇಡೀ ಸಪ್ಲೈ ಚೈನ್ ಬಯಲಿಗೆಳೆಯುವ ಕೆಲಸ ಮಾಡಬೇಕಿದೆ ಹಾಗೂ ಮಾಡಲಾಗುತ್ತಿದೆ. ಜಪ್ತಿಯಾಗುವ ಮಾದಕ ವಸ್ತು, ಆರೋಪಿಗಳ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಎಂದು ತಿಳಿಸಿದರು. ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಹ ಪೊಲೀಸರು ಮಾಡಲಿದ್ದಾರೆ. ಮುಂದಿನ ವರ್ಷಗಳಲ್ಲಿಯೂ ಇದೇ ರೀತಿ ಕಾರ್ಯಾಚರಣೆ ಮುಂದುವರೆಸಲಿದ್ದೇವೆ ಎಂದು ಹೇಳಿದರು.

ಬೆಂಗಳೂರು ಪೊಲೀಸರನ್ನು ಶ್ಲಾಘಿಸಿದ ಬೊಮ್ಮಾಯಿ

ರೇಖಾ ಕದಿರೇಶ್ ಹತ್ಯೆ ಆರೋಪಿಗಳ ಬಂಧನ ವಿಚಾರ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಹಾಡಹಗಲೇ ಹತ್ಯೆ ನಡೆದಿರುವಂಥದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣವುಂಟಾಗಿತ್ತು. ಆರೋಪಿಗಳ ಬಂಧನಕ್ಕೆ ನಾವು ಆದೇಶಿಸಿದ್ದೆವು. ಅತ್ಯಂತ ವೇಗವಾಗಿ ದಕ್ಷತೆಯಿಂದ ಬೆಂಗಳೂರು ಪೊಲೀಸರು ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಈವರೆಗೂ 5 ಆರೋಪಿಗಳನ್ನ ಬಂಧಿಸಲಾಗಿದೆ. ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದರು.

ಸಿಎಂ ಬದಲಾವಣೆ ಕುರಿತು ಸಚಿವ ಸಿ ಪಿ ಯೋಗೇಶ್ವರ್ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿರುತ್ತಾರೆ, ಎಲ್ಲದಕ್ಕೂ ನಾನು ಪ್ರತಿಕ್ರಿಯೆ ನೀಡಲು‌ ಸಾಧ್ಯವಾಗುವುದಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.