ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಕನಸಿನ 'ಗಂಧದಗುಡಿ' ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಯೂಟ್ಯೂಬ್ನಲ್ಲಿ ಇಂದು ಬಿಡುಗಡೆಯಾಗಿದ್ದು, ರಿಲೀಸ್ ಆದ ಆರು ಗಂಟೆಗಳಲ್ಲಿ 16 ಲಕ್ಷ ಮಂದಿ ವೀಕ್ಷಿಸಿದ್ದಾರೆ.
ಪಿಆರ್ಕೆ ಪ್ರೊಡಕ್ಷನ್ನಲ್ಲಿ ಮೂಡಿ ಬಂದಿರುವ ಸಾಕ್ಷ್ಯಚಿತ್ರ ಇದಾಗಿದ್ದು, ಪಾರ್ವತಮ್ಮ ರಾಜಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಗೊಳಿಸಲಾಗಿತ್ತು. ಈ ಚಿತ್ರ 2022ರಲ್ಲಿ ರಿಲೀಸ್ ಆಗಲಿದೆ ಎಂದು ಟೀಸರ್ನಲ್ಲಿ ತಿಳಿಸಲಾಗಿದೆ.
ಒಂದು ನಿಮಿಷ 20 ಸೆಕೆಂಡಿನ ವಿಡಿಯೋ:
ಡಾ.ರಾಜ್ ಕುಮಾರ್ 1973ರಲ್ಲಿ ತಮ್ಮ ಅಭಿನಯದ ಚಲನಚಿತ್ರ ಗಂಧದಗುಡಿಯಲ್ಲಿ ಕಾಡೊಳಗಿನ ಪ್ರಾಣಿ- ಪಕ್ಷಿಗಳ ಸಂರಕ್ಷಣೆ ಮಾಡುವಂತೆ ಕರೆ ಕೊಟ್ಟ ಧ್ವನಿಯನ್ನೇ ಈ ಟೀಸರ್ನಲ್ಲಿ ಬಳಸಿಕೊಳ್ಳಲಾಗಿದೆ. ನಮ್ಮ ರಾಜ್ಯದಲ್ಲಿರುವ ವನ್ಯಜೀವಿಗಳು ಹಾಗೂ ಅರಣ್ಯ ಸಂಪತ್ತಿನ ಲೋಕವನ್ನು ಅನಾವರಣ ಮಾಡುವ ದೃಶ್ಯಗಳನ್ನು ಒಂದು ನಿಮಿಷ ಇಪ್ಪತ್ತು ಸೆಕೆಂಡಿನ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.
-
ಈ 'ಗಂಧದ ಗುಡಿ'ಯನ್ನು ನಾಡಿನ ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದು. ಈ ನಿಟ್ಟಿನಲ್ಲಿ ನೀವು ನೀಡುತ್ತಿರುವ ಸಹಕಾರ ಮತ್ತು ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿ. https://t.co/A5tyr355zm
— Ashwini Puneeth Rajkumar (@ashwinipuneet) December 6, 2021 " class="align-text-top noRightClick twitterSection" data="
">ಈ 'ಗಂಧದ ಗುಡಿ'ಯನ್ನು ನಾಡಿನ ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದು. ಈ ನಿಟ್ಟಿನಲ್ಲಿ ನೀವು ನೀಡುತ್ತಿರುವ ಸಹಕಾರ ಮತ್ತು ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿ. https://t.co/A5tyr355zm
— Ashwini Puneeth Rajkumar (@ashwinipuneet) December 6, 2021ಈ 'ಗಂಧದ ಗುಡಿ'ಯನ್ನು ನಾಡಿನ ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದು. ಈ ನಿಟ್ಟಿನಲ್ಲಿ ನೀವು ನೀಡುತ್ತಿರುವ ಸಹಕಾರ ಮತ್ತು ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿ. https://t.co/A5tyr355zm
— Ashwini Puneeth Rajkumar (@ashwinipuneet) December 6, 2021
ಅಶ್ವಿನಿ ಟ್ವೀಟ್:
ಸಾಕ್ಷ್ಯಚಿತ್ರದ ಟೀಸರ್ ಕುರಿತಂತೆ ಪುನೀತ್ ಪತ್ನಿ ಅಶ್ವಿನಿ, ಅಪ್ಪು ಕನಸಿದು. ಅದ್ಭುತ ಪಯಣ, ನೆಲದ ಘನತೆಯನ್ನು ಮೆರೆಸುವ ಕಥನ ಮರುಕಳಿಸಿದ ಚರಿತ್ರೆಯೇ ಈ 'ಗಂಧದ ಗುಡಿ' ಎಂದು ಟ್ವೀಟ್ ಮಾಡಿದ್ದಾರೆ.
-
Appu’s dream, an incredible journey. It's time for the return - "Gandhada Gudi"
— Ashwini Puneeth Rajkumar (@ashwinipuneet) December 6, 2021 " class="align-text-top noRightClick twitterSection" data="
ಅಪ್ಪು ಅವರ ಕನಸಿದು, ಅದ್ಭುತ ಪಯಣ
ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನ
ಮರುಕಳಿಸಿದ ಚರಿತ್ರೆಯಿದು – “ಗಂಧದ ಗುಡಿ”https://t.co/uHe5gL8eiX#GandhadaGudi @PuneethRajkumar @amoghavarsha @PRK_Productions
">Appu’s dream, an incredible journey. It's time for the return - "Gandhada Gudi"
— Ashwini Puneeth Rajkumar (@ashwinipuneet) December 6, 2021
ಅಪ್ಪು ಅವರ ಕನಸಿದು, ಅದ್ಭುತ ಪಯಣ
ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನ
ಮರುಕಳಿಸಿದ ಚರಿತ್ರೆಯಿದು – “ಗಂಧದ ಗುಡಿ”https://t.co/uHe5gL8eiX#GandhadaGudi @PuneethRajkumar @amoghavarsha @PRK_ProductionsAppu’s dream, an incredible journey. It's time for the return - "Gandhada Gudi"
— Ashwini Puneeth Rajkumar (@ashwinipuneet) December 6, 2021
ಅಪ್ಪು ಅವರ ಕನಸಿದು, ಅದ್ಭುತ ಪಯಣ
ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನ
ಮರುಕಳಿಸಿದ ಚರಿತ್ರೆಯಿದು – “ಗಂಧದ ಗುಡಿ”https://t.co/uHe5gL8eiX#GandhadaGudi @PuneethRajkumar @amoghavarsha @PRK_Productions
ಪಾಸಿಟಿವ್ ಕಾಮೆಂಟ್ಸ್:
ಟೀಸರ್ ವೀಕ್ಷಿಸಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಅಪ್ಪು ಇಲ್ಲದೇ ಬಹಳ ಬೇಸರವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ವನ್ಯಜೀವಿಗಳು ಹಾಗೂ ಪರಿಸರ ಪ್ರೇಮದ ಬಗೆಗಿನ ಅಪ್ಪುಗಿದ್ದ ಕಾಳಜಿಯನ್ನು ಪ್ರಶಂಸಿದ್ದಾರೆ.
-
ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ. 2/2https://t.co/Tb4cF5LJkW
— Basavaraj S Bommai (@BSBommai) December 6, 2021 " class="align-text-top noRightClick twitterSection" data="
">ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ. 2/2https://t.co/Tb4cF5LJkW
— Basavaraj S Bommai (@BSBommai) December 6, 2021ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ. 2/2https://t.co/Tb4cF5LJkW
— Basavaraj S Bommai (@BSBommai) December 6, 2021
ಸಿಎಂ ಬೊಮ್ಮಾಯಿ ಮೆಚ್ಚುಗೆ:
ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
ಇದನ್ನೂ ಓದಿ: Karnataka Covid: ಇಂದು 301 ಹೊಸ ಕೇಸ್ ಪತ್ತೆ.. 7 ಸೋಂಕಿತರು ಕೋವಿಡ್ಗೆ ಬಲಿ