ಬೆಂಗಳೂರು: ನಗರದ ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ ರೋಗಿಗಳಿಗೆ ಬಿಬಿಎಂಪಿ ಉತ್ತಮ ಸೌಲಭ್ಯ ಕಲ್ಪಿಸಿರುವ ಬಗ್ಗೆ ಇಲ್ಲಿನ ರೋಗಿಗಳು ವಿಡಿಯೋ ಮಾಡಿದ್ದಾರೆ.
ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಇಲ್ಲದೇ ಇರುವವರನ್ನು ಇಲ್ಲಿ ದಾಖಲಿಸಿ ಉತ್ತಮ ಹಾಸಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಹಾಗೆಯೇ ಉತ್ತಮ ಆಹಾರ, ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದು ಇಲ್ಲಿನ ರೋಗಿಗಳು ತಿಳಿಸಿದ್ದಾರೆ.
ಅಲ್ಲದೆ ಸಮಯಕ್ಕೆ ಸರಿಯಾಗಿ ತಿಂಡಿ, ಎರಡು ಹೊತ್ತು ಊಟ ಹಾಗೂ ರಾಗಿ ಗಂಜಿ, ಹಣ್ಣು ಸಹ ನೀಡಲಾಗುತ್ತಿದೆ. ಅಲ್ಲದೆ ಸ್ವಚ್ಛತೆಯ ವಿಷಯಕ್ಕೆ ಬಂದರೆ ಆವರಣವನ್ನು ತುಂಬಾ ಚೆನ್ನಾಗಿ ನಿರ್ವಹಣೆ ಮಾಡಲಾಗಿದೆ. ಒಂದು ವಾರ್ಡ್ನಲ್ಲಿ ಹತ್ತು ಬೆಡ್, ಟಿವಿ ಕೂಡಾ ಇದೆ. ಆದರೆ ಸ್ವಲ್ಪ ಮಟ್ಟಿಗೆ ಸೊಳ್ಳೆ ಸಮಸ್ಯೆ ಇದೆ ಎಂದು ವಿವರಿಸಿದ್ದಾರೆ.