ETV Bharat / state

ಪಿಎಸ್​ಐ ಆಯ್ತು ಈಗ ಅಸಿಸ್ಟೆಂಟ್ ಪ್ರೊಫೆಸರ್ ಪರೀಕ್ಷೆಯಲ್ಲೂ ಗೋಲ್ಮಾಲ್!?

ನಿರ್ದಿಷ್ಟ ಪತ್ರಿಕೆಯ ಪ್ರಶ್ನೆಗಳು ಲೀಕ್ ಆಗಿದ್ವು ಎಂಬ ಆರೋಪ ಕೇಳಿ ಬಂದಿದೆ. ಪರೀಕ್ಷೆ ಮುನ್ನವೇ ಅಭ್ಯರ್ಥಿಗಳ ಮೊಬೈಲ್​​ನಲ್ಲಿ ಪ್ರಶ್ನೆಗಳು ಹರಿದಾಡಿವೆ ಎನ್ನಲಾದ ಸ್ಕ್ರೀನ್ ಶಾಟ್ ವೈರಲ್‌ ಆಗಿದೆ‌..

ಪಿಎಸ್​ಐ ಆಯ್ತು ಈಗ ಅಸಿಸ್ಟೆಂಟ್ ಫ್ರೊಫೆಸರ್ ಪರೀಕ್ಷೆಯಲ್ಲೂ ಗೋಲ್ಮಾಲ್?

author img

By

Published : Apr 24, 2022, 1:36 PM IST

ಬೆಂಗಳೂರು : ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮ ಸಿಐಡಿ ತನಿಖೆ ಬೆನ್ನಲ್ಲೇ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ‌ ಎಂಬ ಶಂಕೆ ವ್ಯಕ್ತವಾಗಿದೆ. ಪರೀಕ್ಷೆ ನಡೆಯುವ ಕೆಲವೇ ಗಂಟೆಗಳ ಹಿಂದೆ ವಾಟ್ಸ್ಆ್ಯಪ್​​ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಗುಮಾನಿ ವ್ಯಕ್ತವಾಗಿದೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದೆ.

ನಿರ್ದಿಷ್ಟ ಪತ್ರಿಕೆಯ ಪ್ರಶ್ನೆಗಳು ಲೀಕ್ ಆಗಿದ್ವು ಎಂಬ ಆರೋಪ ಕೇಳಿ ಬಂದಿದೆ. ಪರೀಕ್ಷೆ ಮುನ್ನವೇ ಅಭ್ಯರ್ಥಿಗಳ ಮೊಬೈಲ್​​ನಲ್ಲಿ ಪ್ರಶ್ನೆಗಳು ಹರಿದಾಡಿವೆ ಎನ್ನಲಾದ ಸ್ಕ್ರೀನ್ ಶಾಟ್ ವೈರಲ್‌ ಆಗಿದೆ‌. 20ಕ್ಕೂ ಹೆಚ್ಚು ಪ್ರಶ್ನೆಗಳು ಅಭ್ಯರ್ಥಿಯೊಬ್ಬನ ಮೊಬೈಲ್​​ನಲ್ಲಿ ನೋಡಿದ್ದಾಗಿ ಸ್ಪರ್ಧಾಕಾಂಕ್ಷಿ ಅಭ್ಯರ್ಥಿಗಳು ದೂರು ನೀಡಿದ್ದಾರೆ.

ಪಿಎಸ್​ಐ ಆಯ್ತು ಈಗ ಅಸಿಸ್ಟೆಂಟ್ ಫ್ರೊಫೆಸರ್ ಪರೀಕ್ಷೆಯಲ್ಲೂ ಗೋಲ್ಮಾಲ್?
ಪಿಎಸ್​ಐ ಆಯ್ತು ಈಗ ಅಸಿಸ್ಟೆಂಟ್ ಫ್ರೊಫೆಸರ್ ಪರೀಕ್ಷೆಯಲ್ಲೂ ಗೋಲ್ಮಾಲ್?

ಇದನ್ನೂ ಓದಿ: ದೇಶದಲ್ಲಿ ಕೋವಿಡ್​​ ಉಲ್ಬಣ : 2,593 ಹೊಸ ಪ್ರಕರಣ ಪತ್ತೆ, 44 ಮಂದಿ ಸಾವು

ಕೆಇಎ 1,242 ಅಸಿಸ್ಟೆಂಟ್ ಪ್ರೊಫೆಸರ್ ಪೋಸ್ಟ್‌ಗಳಿಗೆ ನೋಟಿಫಿಕೇಷನ್ ಹೊರಡಿಸಿತ್ತು. ಈ ಹಿನ್ನೆಲೆ ಕಳೆದ ತಿಂಗಳು ಮಾರ್ಚ್‌ನಲ್ಲಿ 12 ರಿಂದ 15ರವರೆಗೆ ನಡೆದಿದ್ದ ಪರೀಕ್ಷೆ ಕೂಡ ನಡೆದಿತ್ತು.

ಆ್ಯಪ್ಷನಲ್ ಸಬ್ಜೆಕ್ಟ್ 125 ಪ್ರಶ್ನೆಗಳಿದ್ದು, ಇದಕ್ಕೆ 250 ಮಾರ್ಕ್ಸ್ ಇತ್ತು. ಸಾಮಾನ್ಯ ಜ್ಞಾನ ಪೇಪರ್ 50 ಪ್ರಶ್ನೆ 50 ಅಂಕ ಒಳಗೊಂಡಿತ್ತು. ಪರೀಕ್ಷೆಗೂ ಮೊದಲು ಭೂಗೋಳ ಶಾಸ್ತ್ರದ ಪೇಪರ್ ಲೀಕ್ ಆಗಿರುವ ಬಗ್ಗೆ ದೂರು ದಾಖಲಾಗಿದೆ.

ಸೌಮ್ಯ ಆರ್ ಎಂಬುವರ ಮೊಬೈಲ್‌ನಿಂದ 18 ಪ್ರಶ್ನೆಗಳು ಹರಿದಾಡಿವೆ. ಯಾರಿಗೆಲ್ಲಾ ವಾಟ್ಸ್‌ಆ್ಯಪ್​ನಲ್ಲಿ ಪ್ರಶ್ನೆಗಳು ಹರಿದಾಡಿವೆ? ಎಲ್ಲಿಂದ ಪ್ರಶ್ನೆಗಳು ಲೀಕ್ ಆಗಿವೆ ಎಂಬ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಲಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.