ಬೆಂಗಳೂರು: ಗಂಡ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿದ್ದರೆ, ಹೆಂಡತಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿ. ಇಬ್ಬರು ಬೆಳಗ್ಗೆ ತಮ್ಮ ಕೆಲಸಗಳಿಗೆ ತೆರಳಿದ ಮೇಲೆ ಮನಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ 60 ಸಾವಿರ ನಗದು ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ.
ಈ ಘಟನೆ ನಡೆದಿರೋದು ಬೆಂಗಳೂರಿನ ಕೆ.ಆರ್.ಪುರದ ಜೆಸಿ ಲೇಔಟ್ನಲ್ಲಿ. ಬಾಲಚಂದ್ರ ಎಂಬುವರ ಮನೆಯ ಬೀಗ ಕಳೆದು ಹೋಗಿದ್ದರಿಂದ ತಾತ್ಕಾಲಿಕವಾಗಿ ಹೊರ ಭಾಗದ ಡೋರ್ ಲಾಕ್ಗೆ ಚಿಕ್ಕ ಬೀಗ ಹಾಕಿದ್ದರು. ಇದನ್ನು ಮನಗಂಡ ಕಳ್ಳರು ಅಕ್ಕ ಪಕ್ಕದ ಮನೆಯವರಿಗೂ ಸದ್ದು ಕೇಳಿಸಿದಂತೆ ಮನೆಯ ಬೀಗ ತೆರೆದು ಒಳಗಡೆ ಬಂದು ತಮ್ಮ ಕೆಲಸ ಮುಗಿಸಿಕೊಂಡು ಎಸ್ಕೇಪ್ ಆಗಿದ್ದಾರೆ. ಮನೆಯೊಡತಿ ಮಾಲತಿ ಸಂಜೆ ಕೆಲಸ ಮುಗಿಸಿ ಶಾಲೆಯಿಂದ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೆ ಕೆ.ಆರ್.ಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಮಾಲತಿ, ಮನೆಯ ಮಾಲೀಕರು ಮಾತನಾಡಿ, ನಿನ್ನೆ ಡೊರ್ ಲಾಕ್ ಕೀ ಕಳೆದು ಹೋಗಿತ್ತು. ಆದ್ದರಿಂದ ಇವತ್ತು ಒಂದು ಬೀಗ ಹಾಕಿ ಕೆಲಸಕ್ಕೆ ಹೊಗಿದ್ದೆವು. ಆದರೆ ಕೆಲಸ ಮುಗಿಸಿ ಬಂದಾಗ ಬಾಗಿಲಿಗೆ ಬೀಗ ಹಾಕಿರಲಿಲ್ಲ. ಮನೆ ಒಳಗೆ ಎಲ್ಲಾ ವಸ್ತುಗಳು ಛಿದ್ರ ಛಿದ್ರವಾಗಿ ಬಿದ್ದಿದ್ದವು. ಸೂಮಾರು ಆರು ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ಹಾಗೂ ಅರವತ್ತು ಸಾವಿರ ರೂಪಾಯಿ ಹಣವನ್ನು ಕಳ್ಳರು ದೋಚಿದ್ದಾರೆ ಎಂದರು.