ಬೆಂಗಳೂರು/ಯಲಹಂಕ : ಬೆಂಗಳೂರು ಕೃಷಿ ವಿಶ್ವವಿದ್ಯಾಲಯ(ಜಿಕೆವಿಕೆ) ಆವರಣದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟೀಯ ಸಭಾಂಗಣದಲ್ಲಿ ನಡೆದ 55ನೇ ಘಟಿಕೋತ್ಸವದಲ್ಲಿ 2019-20ರ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ 1012 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಯ್ತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೃಷಿ ಸಚಿವ ಬಿ ಸಿ ಪಾಟೀಲ್ ಭಾಗವಹಿಸಿದ್ದರು. ಒಟ್ಟು 1012 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಇದರಲ್ಲಿ 659 ವಿದ್ಯಾರ್ಥಿಗಳು ವಿವಿಧ ಸ್ನಾತಕ ಪದವಿಗಳನ್ನು, 279 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹಾಗೂ 74 ವಿದ್ಯಾರ್ಥಿಗಳು ಡಾಕ್ಟೋರಲ್ ಪದವಿಗಳನ್ನ ಪಡೆದರು.
ಇದೇ ಸಮಾರಂಭದಲ್ಲಿ ಡಾಕ್ಟರ್ ಆಫ್ ಫಿಲಾಸಫಿ(PhD) ಪದವಿಯಲ್ಲಿ ಒಟ್ಟು 21 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ ಐವರು ವಿದ್ಯಾರ್ಥಿನಿಯರು ಹಾಗೂ 7 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯದ 12 ಚಿನ್ನದ ಪದಕಗಳನ್ನು, 8 ದಾನಿಗಳ ಚಿನ್ನದ ಪದಕಗಳು ಹಾಗೂ ಒಂದು ದಾನಿಯ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನ ಪಡೆದರು.
ಪದವಿ ಪಡೆದ ಒಟ್ಟು ವಿದ್ಯಾರ್ಥಿಗಳು : 1012
ಸ್ನಾತಕ ಪದವಿ : 659ವಿದ್ಯಾರ್ಥಿಗಳು
ಸ್ನಾತಕೋತ್ತರ : 279ವಿದ್ಯಾರ್ಥಿಗಳು
ಡಾಕ್ಟೊರಲ್ : 74 ವಿದ್ಯಾರ್ಥಿಗಳು
ಚಿನ್ನದ ಪದಕಗಳನ್ನ ಪಡೆದವರು : ಡಾಕ್ಟರ್ ಆಫ್ ಫಿಲಾಸಫಿ - 21 (ಕೃಷಿ ವಿಶ್ವವಿದ್ಯಾನಿಲಯ ನೀಡುವ 12 ಚಿನ್ನದ ಪದಕಗಳು, 08 ದಾನಿಗಳ ಚಿನ್ನದ ಪದಕಗಳು ಹಾಗೂ 01 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳು)
ವಿದ್ಯಾರ್ಥಿನಿಯರು – 5
ವಿದ್ಯಾರ್ಥಿಗಳು – 7
ಚಿನ್ನದ ಪದಕಗಳು:
ಮಾಸ್ಟರ್ ಪದವಿ- 74
ಕೃಷಿ ವಿಶ್ವವಿದ್ಯಾನಿಲಯ ನೀಡುವ 22 ಚಿನ್ನದ ಪದಕಗಳು ಹಾಗೂ 05 ಆವರಣದ ಚಿನ್ನದ ಪದಕಗಳು, 37 ದಾನಿಗಳ ಚಿನ್ನದ ಪದಕಗಳು ಹಾಗೂ 10 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳು:
ವಿದ್ಯಾರ್ಥಿನಿಯರು – 17
ವಿದ್ಯಾರ್ಥಿಗಳು – 16
ಚಿನ್ನದ ಪದಕಗಳು:
ಸ್ನಾತಕ ಪದವಿ - 55
ಕೃಷಿ ವಿಶ್ವವಿದ್ಯಾನಿಲಯ ನೀಡುವ 06 ಚಿನ್ನದ ಪದಕಗಳು, 03 ಆವರಣದ ಚಿನ್ನದ ಪದಕಗಳು, 37 ದಾನಿಗಳ ಚಿನ್ನದ ಪದಕಗಳು, 01 ಕೃಷಿ ವಿವಿಯ ಕ್ರೀಡಾ ಚಿನ್ನದ ಪದಕ ಹಾಗೂ 08 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳು:
ವಿದ್ಯಾರ್ಥಿನಿಯರು – 11
ವಿದ್ಯಾರ್ಥಿಗಳು – 5