ETV Bharat / state

ರಕ್ಷಣಾ ಪಡೆಗಳಲ್ಲಿ ಬದಲಾವಣೆ, ಸಶಸ್ತ್ರ ಪಡೆಗಳಲ್ಲಿ ಸಹ ವಿಕಾಸ ಅನಿವಾರ್ಯ: ಜನರಲ್ ಅನಿಲ್ ಚೌಹಾಣ್​ - 14th Air Chief Marshal LM Katre Memorial

14ನೇ ಏರ್ ಚೀಫ್​ ಮಾರ್ಷಲ್​ ಎಲ್​ ಎಂ ಕತ್ರೆ ಸ್ಮಾರಕ ಉಪನ್ಯಾಸದಲ್ಲಿ ರಕ್ಷಣಾ ಪಡೆಗಳಲ್ಲಿನ ಬದಲಾವಣೆಗಳು ಅನಿವಾರ್ಯ ಎಂದು ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಜನರಲ್​​ ಅನಿಲ್​ ಚೌಹಾಣ್ ಹೇಳಿದ್ದಾರೆ

ಜನರಲ್ ಅನಿಲ್ ಚೌಹಾಣ್​
ಜನರಲ್ ಅನಿಲ್ ಚೌಹಾಣ್​
author img

By ETV Bharat Karnataka Team

Published : Oct 15, 2023, 9:33 AM IST

ಬೆಂಗಳೂರು: ರಕ್ಷಣಾ ಪಡೆಗಳಲ್ಲಿ ಬದಲಾವಣೆಗಳು ಅನಿವಾರ್ಯತೆಯಾಗಿದೆ ಎಂದು ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಜನರಲ್​​ ಅನಿಲ್​ ಚೌಹಾಣ್ ಹೇಳಿದ್ದಾರೆ. ನಗರದಲ್ಲಿನ ಏರ್​ ಫೋರ್ಸ್ ಅಸೋಸಿಯೇಷನ್ ​​ಆಯೋಜಿಸಿದ್ದ 14ನೇ ಏರ್ ಚೀಫ್​ ಮಾರ್ಷಲ್​ ಎಲ್​ ಎಂ ಕತ್ರೆ ಸ್ಮಾರಕ ಉಪನ್ಯಾಸದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅನಿಲ್ ಚೌಹಾಣ್, ಜಾಗತಿಕ ಬದಲಾವಣೆಗಳಿಂದ ಸಶಸ್ತ್ರ ಪಡೆಗಳಲ್ಲಿ ಸಹ ವಿಕಾಸ ಮತ್ತು ಹೊಂದಾಣಿಕೆ ಬಹಳ ಮುಖ್ಯ. ರಕ್ಷಣಾ ಪಡೆಗಳಲ್ಲಿ ಸುಧಾರಣೆಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿ ಮತ್ತು ವೇಗದಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ವಿಶ್ವದಲ್ಲಿ ಅವಕಾಶಗಳು ಸಹ ಅನಿಶ್ಚಿತವಾದ ವಾತಾವರಣ ಸೃಷ್ಟಿಸಿ ಬದಲಾವಣೆಯ ಅಗತ್ಯತೆಯನ್ನು ಸೂಚಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.

14ನೇ ಏರ್ ಚೀಫ್​ ಮಾರ್ಷಲ್​ ಎಲ್​ ಎಂ ಕತ್ರೆ ಸ್ಮಾರಕ ಉಪನ್ಯಾಸ ಕಾರ್ಯಕ್ರಮ

ಹೊಸ ತಂತ್ರಜ್ಞಾನಗಳ ಪರಿಚಯದಿಂದಾಗಿ ಯುದ್ಧದ ಗುಣಲಕ್ಷಣಗಳು ಬದಲಾಗುತ್ತಿವೆ. ಆದ್ದರಿಂದ ಸದ್ಯ ರಕ್ಷಣಾ ಪಡೆಗಳು ಮತ್ತು ಸಂಶೋಧನಾ ಸಂಸ್ಥೆಗಳು ತೆಗೆದುಕೊಳ್ಳುವ ಕ್ರಮಗಳು ಮುಂದಿನ 25 ವರ್ಷಗಳಲ್ಲಿ ಭಾರತದ ಸ್ಥಾನಮಾನವನ್ನು ನಿರ್ಧರಿಸಲಿದೆ. ಸದ್ಯ ಭಾರತ ದಕ್ಷಿಣ ದೇಶಗಳ ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದು, ಜಿ-20 ಯಶಸ್ವಿಯಾಗಿ ನಡೆದಿರುವುದು ಅದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಪ್ರಸ್ತುತ ಜಾಗತಿಕ ಭೌಗೋಳಿಕ ರಾಜಕೀಯ ಪರಿಸರವು ತುಂಬಾ ವೇಗವಾಗಿ ಬದಲಾಗುತ್ತಿದೆ. ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮತ್ತು ರಷ್ಯಾ ಉಕ್ರೇನ್ ಮಧ್ಯ ಇನ್ನೂ ಮುಗಿಯದ ಶಸ್ತ್ರಾಸ್ತ್ರ ಹೋರಾಟ ಈಗಿನ ವೇಗದ ಮತ್ತು ಅನಿಶ್ಚಿತ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ರಷ್ಯಾ ಜಾಗತಿಕವಾಗಿ ಪ್ರಮುಖ ಪರಮಾಣು ಶಕ್ತಿಯಾಗಿದ್ದರೂ, ಮುಂದಿನ ದಿನಗಳಲ್ಲಿ ಅದರ ಭೌಗೋಳಿಕ ರಾಜಕೀಯ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ವ್ಯಾಗ್ನರ್ ದಂಗೆಯು ಅದರ ಆಂತರಿಕ ದೌರ್ಬಲ್ಯವನ್ನು ಸೂಚಿಸಿದೆ ಎಂದು ವ್ಯಾಖ್ಯಾನಿಸಿದರು.

ಏರ್‌ ಫೋರ್ಸ್‌ ಅಸೋಸಿಯೇಷನ್‌ (ಎಎಫ್‌ಎ) ಅಧ್ಯಕ್ಷ ಏರ್‌ ಮಾರ್ಷಲ್‌ ಎಚ್‌ಬಿ ರಾಜಾರಾಮ್ ವಾರ್ಷಿಕ ಕತ್ರೆ ಸ್ಮಾರಕ ಉಪನ್ಯಾಸದ ಪ್ರಾಮುಖ್ಯತೆಯನ್ನು ವಿವರಿಸಿದರು. 42 ವರ್ಷಗಳ ತಮ್ಮ ವಿಶಿಷ್ಟ ವೃತ್ತಿಜೀವನದ ಅವಧಿಯಲ್ಲಿ ಭಾರತದಲ್ಲಿ ವಾಯುಯಾನದ ಬೆಳವಣಿಗೆಯಲ್ಲಿ ಅವರ ಅಪಾರ ಕೊಡುಗೆಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಏರ್ ಚೀಫ್ ಮಾರ್ಷಲ್​ ಎಲ್ ಎಂ ಕತ್ರೆ ನೆನಪಿಸುವ ಸ್ಮರಣಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆ, ಡಿಆರ್‌ಡಿಒ, ಎಚ್‌ಎಎಲ್ ಸೇರಿದಂತೆ ಹಲವು ರಕ್ಷಣಾ ವಲಯದ ಪ್ರಮುಖರು ಭಾಗವಹಿಸಿದ್ದರು.

ಇದನ್ನೂ ಓದಿ: ದೇಶಾದ್ಯಂತ 16 ದಿನ 5000 ಕಿ.ಮೀ ಕಾರು ಚಾಲನೆ : ಬೇಟಿ ಪಡಾವೋ, ಬೇಟಿ ಬಚಾವೋ ಜಾಗೃತಿ.. ಹುಬ್ಬಳ್ಳಿಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾಧನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.