ETV Bharat / state

ತಡೆಯಾಜ್ಞೆ ತಂದ ಬಿಲ್ಡರ್ಸ್: ಪಂಚಾಯಿತಿಗಳ‌ ವ್ಯಾಪ್ತಿಯಲ್ಲಿ ಕಸ ಸಮಸ್ಯೆ ವಿಲೇವಾರಿ ಯೋಜನೆಗೆ ಅಡೆತಡೆ - Garbage Disposal problem in bengaluru

ಮಂಡೂರಿನ ಕಸ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದ ಜಾಗಕ್ಕೆ ಆಸುಪಾಸಿನ ಬಿಲ್ಡರ್ಸ್ ಹೈಕೋರ್ಟ್​​ನಲ್ಲಿ ದಾವೆ ಹೂಡಿ ತಡೆಯಾಜ್ಞೆಯನ್ನು ತಂದಿದ್ದಾರೆ. ಇದು ಕಸ ವಿಲೇವಾರಿಗೆ ಅಡೆತಡೆ ಉಂಟು ಮಾಡಿದೆ.

Garbage Disposal problem in bengaluru village panchayath
ಕಸ ವಿಲೇವಾರಿ ಸಮಸ್ಯೆ
author img

By

Published : Sep 13, 2021, 9:01 PM IST

ಮಹದೇವಪುರ: ಬೆಂಗಳೂರಲ್ಲಿ ಕಸದ ಸಮಸ್ಯೆ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಬೆಂಗಳೂರು ಪೂರ್ವ ತಾಲೂಕಿಗೆ ಹೊಂದಿಕೊಂಡಿರುವ ಪಂಚಾಯಿತಿಗಳು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಅಲ್ಲಿಯೂ ಸಹ ಕಸದ ಸಮಸ್ಯೆ ಹೆಚ್ಚಾಗುತ್ತಿದೆ.

ಪಂಚಾಯಿತಿಗಳ‌ ವ್ಯಾಪ್ತಿಯಲ್ಲಿಕಸ ವಿಲೇವಾರಿಗೆ ಅಡೆತಡೆ

ಕಸ ವಿಲೇವಾರಿ ಮಾಡಲು ಪಂಚಾಯಿತಿ ವ್ಯಾಪ್ತಿಯಲ್ಲೇ‌ ಕಸದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಮುಂದಾಗಿದ್ದಾರೆ. ಅದಕ್ಕಾಗಿ ಶಾಸಕ ಅರವಿಂದ ಲಿಂಬಾವಳಿಯವರ ಸಹಕಾರದಿಂದ ಮಹದೇವಪುರದ 11 ಪಂಚಾಯಿತಿಗಳಲ್ಲಿಯೂ ಕಸ ವಿಲೇವಾರಿ ಘಟಕಗಳನ್ನು‌ ಮಾಡಲು ಸರ್ಕಾರಿ ಜಾಗವನ್ನು ಗುರ್ತಿಸಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಕೆಲವು ಪಂಚಾಯಿತಿಗಳಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳು ನಿರ್ಮಾಣ ಮಾಡಲಾಗುತ್ತಿದೆ.

Garbage Disposal problem in bengaluru village panchayath
ಕಸ ವಿಲೇವಾರಿ ಸಮಸ್ಯೆ

ಹೈಕೋರ್ಟ್​ನಿಂದ ತಡೆಯಾಜ್ಞೆ ತಂದ ಬಿಲ್ಡರ್ಸ್​​:

ಮಂಡೂರು ಗ್ರಾಮ ಪಂಚಾಯಿತಿಯಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕ ಮಾಡಲು ವನಜೇನಹಳ್ಳಿಯ ಸರ್ವೇ ನಂಬರ್ 11ರಲ್ಲಿ 5.ಎಕರೆ 35 ಗುಂಟೆ ಜಾಗವನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಈ ಜಾಗದ ಪಕ್ಕ ಹೊರ ರಾಜ್ಯ‌ ಆಂಧ್ರಪ್ರದೇಶದಿಂದ ಬಂದಿರುವ ಬಿಲ್ಡರ್​ಗಳಾದ ಸುಧಾಕರ್ ಮತ್ತು ಎಂ.ವಿ.ವೆಂಕಟೇಶ್ ಎಂಬುವರು ಜಮೀನನ್ನು ಖರೀದಿ ಮಾಡಿದ್ದು ಸರ್ಕಾರಿ ಖರಾಬು ಭೂಮಿಯನ್ನು ಕಬಳಿಸಲು ಹುನ್ನಾರ ಹಾಕಿದೆ. ಕಸ ವಿಲೇವಾರಿ ಘಟಕ‌ದ ಸುತ್ತಮುತ್ತ ಯಾವುದೇ ಬಡಾವಣೆಗಳು ಇಲ್ಲದಿದ್ದರೂ ಹೈಕೋರ್ಟ್​​ನಲ್ಲಿ ಬಡಾವಣೆಗಳಿದ್ದು ನಿವಾಸಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಹೈಕೋರ್ಟ್​ನಿಂದ ತಡೆಯಾಜ್ಞೆಯನ್ನು ತಂದಿದ್ದಾರೆ.

ತಡೆಯಾಜ್ಞೆ ತಂದ ಬಿಲ್ಡರ್ಸ್

ಬಿಲ್ಡರ್​ಗಳಾದ ಸುಧಾಕರ್ ಮತ್ತು ಎಂ.ವಿ.ವೆಂಕಟೇಶ್​​ ಜಮೀನು ‌ನಂತರ ಬರುವ ಕಸ ವಿಲೇವಾರಿ ಜಾಗಕ್ಕೆ ಹೋಗಲು ದಾರಿಯನ್ನು ಬಿಡದೆ ಅಡ್ಡಾಲಾಗಿ ಕಾಂಪೌಂಡ್ ಕಟ್ಟಲು ಮುಂದಾಗಿದ್ದಾರೆ.ಕಸದ ವಿಲೇವಾರಿ ಘಟಕ ಇಲ್ಲದೇ ಇಲ್ಲಿನ ಕಸವನ್ನು ಬಿಬಿಎಂಪಿಯವರ ಮೂಲಕ ದೊಡ್ಡ‌ಬಳ್ಳಾಪುರಕ್ಕೆ ರವಾನೆ ಮಾಡಲಾಗುತ್ತದೆ.ಈ ಸಮಸ್ಯೆಯಿಂದ ತಪ್ಪಿಸಲು ಪಂಚಾಯಿತಿ ವ್ಯಾಪ್ತಿಯಲ್ಲಿ ವಿಲೇವಾರಿ ಘಟಕ ನಿರ್ಮಾಣ ಮಾಡಲು ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಮುಂದಾಗಿದ್ದಾರೆ.

ಈ ಬಗ್ಗೆ ಈಟಿ‌ವಿ ಭಾರತ ಜೊತೆ ಮಾತನಾಡಿದ ಮಂಜುನಾಥ್, ಮೊಟ್ಟ ಮೊದಲಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಜ್ಞಾನಿಕ ಕಸ ವಿಂಗಡನೆ ಘಟಕವನ್ನು ಪ್ರಾರಂಭಿಸಲಾಗುತ್ತಿದೆ. ಮಹದೇವಪುರದ 11 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲೂ ವೈಜ್ಞಾನಿಕ ಕಸ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಮೂರು ಗ್ರಾಮ ಪಂಚಾಯಿತಿ ಘಟಕಗಳ ನಿರ್ಮಾಣಕ್ಕೆ ಅಡೆತಡೆಗಳು‌ ಬಂದಿದ್ದವು ನ್ಯಾಯಲದಲ್ಲಿ ನಮ್ಮ ಕಡೆ ನ್ಯಾಯ ಬಂದಿದೆ ಎಂದರು.

ಕಸ ವಿಲೇವಾರಿಗೆ ಅಡೆತಡೆ

ಆದರೆ ಮಂಡೂರಿನ ಕಸ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದ ಜಾಗಕ್ಕೆ ಆಸುಪಾಸಿನ ಬಿಲ್ಡರ್ಸ್ ಉಚ್ಚನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ತಡೆಯಾಜ್ಞೆಯನ್ನು ತಂದಿದ್ದಾರೆ.ಇದಕ್ಕೆ ಪ್ರತಿಯಾಗಿ ನಾವು ಮತ್ತು ಪಂಚಾಯಿತಿ ಕಡೆಯಿಂದ ಮೇಲ್ಮನವಿ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದ್ದು ನಮ್ಮ ಯೋಜನೆಗಳ ಬಗ್ಗೆ ನ್ಯಾಯಲಯಕ್ಕೆ ವಿವರವಾದ ಮಾಹಿತಿಯನ್ನು ಸಲ್ಲಿಸಲಿದ್ದೆವೆ ಎಂದರು.

ಮಂಡೂರು ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿಗೆ ಪೂರಕವಾದ ಸ್ಥಳ:

ಮಂಡೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಕಸ ವಿಂಗಡನೆಗೆ ವನಜೇನಹಳ್ಳಿಯ ಸರ್ಕಾರಿ ಖರಾಬು ಜಾಗ ಬಿಟ್ಟರೆ ಬೇರೆ ಯಾವ ಸ್ಥಳವು ಸೂಕ್ತವಾಗಿಲ್ಲ.ಈ ಸ್ಥಳ ಜನ ವಾಸಿಸುವ ಪ್ರದೇಶದಿಂದ ಸೂಮಾರು ದೂರದಲ್ಲಿರುವ ನಿರ್ಜನ ಪ್ರದೇಶವಾಗಿದ್ದು ಕಸ ವಿಲೇವಾರಿ ಮಾಡಲು ಪೂರಕವಾದ ಜಾಗವಾಗಿದೆ.ಮಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಇದ್ದರು ಜನವಾಸ ಸ್ಥಳ ಪ್ರದೇಶವಾಗಿರುವುದರಿಂದ ಇಲ್ಲಿ ಕಸ ವಿಂಗಡನೆ ಮಾಡಲು ಸೂಕ್ತವಾಗಿಲ್ಲ.

ವೈಜ್ಞಾನಿಕ ಕಸ ವಿಲೇವಾರಿ ಘಟಕದ‌ ವಿಶೇಷತೆ:

ಕಸ ವಿಲೇವಾರಿ ಘಟಕ ವಿಸ್ತೀರ್ಣ ಸೂಮಾರು 5 ಎಕರೆ 35 ಗುಂಟೆ ಜಾಗವಿದ್ದು ಅದರಲ್ಲಿ ಅರ್ಧ ಎಕರೆ ಜಾಗದಲ್ಲಿ ವಿಲೇವಾರಿ ಘಟಕವನ್ನು ಮಾಡಿ ಇನ್ನೂಳಿದ 5 ಎಕರೆ ಜಾಗದಲ್ಲಿ ಕಾಡು ಬೆಳೆಸಲು ಯೋಜನೆ ಮಾಡಿಕೊಳ್ಳಲಾಗಿದೆ.

ಉತ್ತಮ ಕಸ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿದ ತಂಡ:

ಬೆಂಗಳೂರಿನ ಹೊರವಲಯದಲ್ಲಿ ಉತ್ತಮ ಗುಣಮಟ್ಟದ ಕಸ ವಿಲೇವಾರಿ ಮಹದೇವಪುರದ 11 ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಪಂಚಾಯಿತಿ ಅಧಿಕಾರಿಗಳು ನಾಲ್ಕು ಕಡೆ ಫೀಲ್ಡ್ ವಿಸಿಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.