ETV Bharat / state

ಕೇರಳ ಮೂಲದ ಯುವತಿ ಮೇಲೆ ಬೆಂಗಳೂರಲ್ಲಿ ಗ್ಯಾಂಗ್ ರೇಪ್: ಕೃತ್ಯಕ್ಕೆ ಆರೋಪಿಗಳ ಗೆಳತಿಯಿಂದಲೂ ಸಾಥ್​ ​ - ಕೇರಳ ಮೂಲದ ಯುವತಿ ಮೇಲೆ ಬೆಂಗಳೂರಲ್ಲಿ ಗ್ಯಾಂಗ್ ರೇಪ್

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅತ್ಯಾಚಾರಕ್ಕೆ ಸಹಕರಿಸಿದ ಆತನ ಸ್ನೇಹಿತೆಯನ್ನೂ ಸೇರಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ​

Electronic City Police Station
ಎಲೆಕ್ಟ್ರಾನಿಕ್​ ಸಿಟಿ ಪೊಲೀಸ್​ ಠಾಣೆ
author img

By

Published : Nov 29, 2022, 1:51 PM IST

ಬೆಂಗಳೂರು: ಎಲೆಕ್ಟ್ರಾನಿಕ್​ ಸಿಟಿ ನಿಲಾದ್ರಿ ನಗರದಲ್ಲಿ ಗುರುವಾರ ರಾತ್ರಿ ಕೇರಳ ಮೂಲದ ಯುವತಿಯ ಮೇಲೆ ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅತ್ಯಾಚಾರಕ್ಕೆ ಸಹಕರಿಸಿದ ಆತನ ಸ್ನೇಹಿತೆಯನ್ನೂ ಸೇರಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ​

ಬಿಟಿಎಂ ಲೇಔಟ್​ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಗುರುವಾರ ರಾತ್ರಿ ಬಿಟಿಎಂ ಲೇಔಟ್​ನಿಂದ ನಿಲಾದ್ರಿ ನಗರಕ್ಕೆ ಖಾಸಗಿ ಕಂಪನಿಯೊಂದರ ಬೈಕ್ ಬುಕ್​ ಮಾಡಿದ್ದಳು. ಬೈಕ್ ಹುಡುಗ ಪಿಕ್​ ಮಾಡಲು ಬಂದಾಗ ಯುವತಿ ಮದ್ಯಪಾನ ಮಾಡಿದ್ದಳು. ನಿಲಾದ್ರಿ ನಗರಕ್ಕೆ ತಲುಪುವ ಹೊತ್ತಿಗೆ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದಳು ಎಂದು ತಿಳಿದುಬಂದಿದೆ.

ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಡ್ರಾಪ್​ ಪಾಯಿಂಟ್​ಗೆ ತಲುಪಿಸದೆ ಬೈಕ್​ನಲ್ಲಿದ್ದ ಯುವಕ ತನ್ನ ಸ್ನೇಹಿತ ಹಾಗೂ ಸ್ನೇಹಿತೆಯ ನೆರವಿನಿಂದ ನಿಲಾದ್ರಿ ನಗರದ ತನ್ನ ರೂಮ್​ಗೆ ಕರೆದೊಯ್ದು ಇಬ್ಬರು ಅತ್ಯಾಚಾರ​ ಮಾಡಿದ್ದಾರೆ. ಪ್ರಜ್ಞೆ ಬಂದ ಬಳಿಕ ಯುವತಿಯನ್ನು ಆರೋಪಿಗಳು ಬಿಟ್ಟು ಕಳುಹಿಸಿದ್ದಾರೆ. ಜತೆಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಘಟನೆ ಬಳಿಕ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್​ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದರು. ಈ ದೂರು ಆಧರಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ಐವರು ಸಹಪಾಠಿಗಳಿಂದ ವಿದ್ಯಾರ್ಥಿನಿ ಮೇಲೆ ಎರಡೆರಡು ಬಾರಿ ಸಾಮೂಹಿಕ ಅತ್ಯಾಚಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.