ETV Bharat / state

ರಾಜಧಾನಿಯಲ್ಲಿ ಸೆಪ್ಟೆಂಬರ್ 1 ರಂದು 45 ಸಾವಿರ ಗಣೇಶ ಮೂರ್ತಿಗಳ ನಿಮಜ್ಜನ: ಬಿಬಿಎಂಪಿ - ಮಣ್ಣಿನ ಗಣೇಶ ಮೂರ್ತಿಗಳು

ಬೆಂಗಳೂರು ನಗರದಲ್ಲಿ ಗಣೇಶ ಚತುರ್ಥಿ ಬಳಿಕ ಜನರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಗದಿಪಡಿಸಿದ್ದ ತಾತ್ಕಾಲಿಕ ನೀರಿನ ಟ್ಯಾಂಕರ್, ಕಲ್ಯಾಣಿ, ಮೊಬೈಲ್‌ ಟ್ಯಾಂಕರ್‌ ಹಾಗೂ ಇನ್ನಿತರ ನೀರಿನ ತೊಟ್ಟಿಗಳಲ್ಲಿ ಗಣೇಶನ ಮೂರ್ತಿಗಳನ್ನು ನಿಮಜ್ಜನ ಮಾಡಿದ್ದಾರೆ.

ಗಣೇಶ ಮೂರ್ತಿಗಳ ನಿಮಜ್ಜನ
ಗಣೇಶ ಮೂರ್ತಿಗಳ ನಿಮಜ್ಜನ
author img

By

Published : Sep 2, 2022, 11:00 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಲ್ಯಾಣಿ, ಮೊಬೈಲ್‌ ಟ್ಯಾಂಕರ್‌ ಹಾಗೂ ತಾತ್ಕಾಲಿಕ ನೀರಿನ ತೊಟ್ಟಿಗಳಲ್ಲಿ ಸೆಪ್ಟಂಬರ್ 1 (ಗುರುವಾರ)ರಂದು ರಾಜಧಾನಿಯಲ್ಲಿ 45,722 ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ನಗರದಲ್ಲಿ ಗಣೇಶ ಚತುರ್ಥಿ ಬಳಿಕ ಜನರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಗದಿಪಡಿಸಿದ್ದ ತಾತ್ಕಾಲಿಕ ನೀರಿನ ಟ್ಯಾಂಕರ್, ಕಲ್ಯಾಣಿ, ಮೊಬೈಲ್‌ ಟ್ಯಾಂಕರ್‌ ಹಾಗೂ ಇನ್ನಿತರ ನೀರಿನ ತೊಟ್ಟಿಗಳಲ್ಲಿ ಗಣೇಶನನ್ನು ನಿಮಜ್ಜನ ಮಾಡಿದ್ದಾರೆ. ಇದರಲ್ಲಿ ಅತಿ ಕಡಿಮೆ ಪ್ಲಾಸ್ಟರ್ ಆಫ್‌ ಪ್ಯಾರಿಸ್ ಗಣೇಶ ಮೂರ್ತಿಗಳಿವೆ ಎಂದು ಹೇಳಿದೆ.

ಪೂರ್ವ ವಲಯದಲ್ಲಿ 5,898 ಮಣ್ಣಿನ ಗಣೇಶ ಮೂರ್ತಿಗಳು. ರಾಜರಾಜೇಶ್ವರಿ ನಗರದಲ್ಲಿ ಸಹ 2,975 ಮಣ್ಣಿನ ಗಣಪನನ್ನು ವಿಸರ್ಜಿಸಲಾಗಿದೆ. ಇಲ್ಲಿ
ಯಲಹಂಕ ವ್ಯಾಪ್ತಿಯಲ್ಲಿ 2,136 ಮಣ್ಣಿನ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲಾಗಿದೆ. ಮಹದೇವಪುರ ವಲಯದಲ್ಲಿ 1,686, ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಗುರುವಾರ 1,286 ಮಣ್ಣಿನ ಗಣಪನ ಮೂರ್ತಿಗಳನ್ನು ಸೇರಿದಂತೆ 44 ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಸಿದ್ದಗೊಂಡಿದ್ದ ಮೂರ್ತಿಗಳ ನಿಮಜ್ಜನ ಮಾಡಲಾಗಿದೆ ಎಂದು ತಿಳಿಸಿದೆ.

ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ವಿಸರ್ಜನೆ: ಪಶ್ಚಿಮ ವಲಯದಲ್ಲಿ ಗುರುವಾರ ಒಂದೇ ದಿನ 10,557 ಮಣ್ಣಿನ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲಾಗಿದೆ. 43 ಪಿಒಪಿ ಗಣೇಶ ಮೂರ್ತಿಗಳು, ದಕ್ಷಿಣ ವಲಯದಲ್ಲಿ 19,359 ಮಣ್ಣಿನ ಗಣೇಶ ಮೂರ್ತಿಗಳನ್ನು ಹಾಗೂ 1,555 ಪ್ಲಾಸ್ಟರ್ ಆಫ್‌ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ 175 ಮಣ್ಣಿನ ಗಣೇಶ ಮೂರ್ತಿ ಮತ್ತು 5 ಪಿಓಪಿ ಮೂರ್ತಿಗಳನ್ನು ಜನರು ವಿಸರ್ಜಿಸಿದ್ದಾರೆ ಎಂದು ಮಾಹಿತಿ ನೀಡಿದೆ.

ಓದಿ: ಹುಬ್ಬಳ್ಳಿಯಲ್ಲಿ ಈದ್ಗಾ ಗಣಪನಿಗೆ ಸಂಭ್ರಮದ ವಿದಾಯ: ಕುಣಿದು ಕುಪ್ಪಳಿಸಿದ ಕಾರ್ಯಕರ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.