ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಇಂದಿನಿಂದ G20 ಶೃಂಗಸಭೆ ರಾಜ್ಯದಲ್ಲಿ ಆರಂಭವಾಗಿದೆ. ಇನ್ನು, ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ಜೆಡಬ್ಲ್ಯೂ ಮೆರೆಯಿಟ್ ಹೋಟೆಲ್ಗೆ ಡೆಲಿಗೇಟ್ಸ್ ಆಗಮಿಸುತ್ತಿದ್ದಾರೆ. ಗಣ್ಯರನ್ನು ನಮ್ಮ ದೇಶದ ಸಂಪ್ರದಾಯದಂತೆ ಸ್ವಾಗತ ಮಾಡಲಾಯಿತು.
ದ್ವಾರದಲ್ಲಿ ಆನೆಗಳು ಗಣ್ಯರನ್ನು ಸ್ವಾಗತಿಸಿದವು. ಸಭೆ ನಡೆಯುವ ಹಾಲ್ಗೆ ಯಕ್ಷಗಾನ ಕಲಾವಿದರಿಂದ ಸ್ವಾಗತ ಕೋರಲಾಯಿತು. ಈ ವೇಳೆ ಮೈಸೂರು ಪೇಟ ಹಾಕಿ ಶಾಲು ಹೊದಿಸಿ ಗೌರವಿಸಲಾಯಿತು.
ಕಬ್ಬು ಬೆಳಗಾರರ ಧರಣಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಶೃಂಗಸಭೆಯ ವೇಳೆ ಕಪ್ಪುಪಟ್ಟಿ ಪ್ರದರ್ಶನ ಮಾಡಲು ಬರ್ತಿದ್ದ ರೈತರನ್ನು ತಡೆದು ವಶಕ್ಕೆ ಪಡೆಯಲಾಗಿದೆ. ಯಲಹಂಕ ಬಳಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೇರಿದಂತೆ ಹಲವು ರೈತರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ನಾಳೆಯಿಂದ 3 ದಿನ ಜಿ20 ಶೃಂಗಸಭೆ