ETV Bharat / state

ಸಾರಿಗೆ ಬಸ್​ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಮುಕ್ತ ಅವಕಾಶ: ಷರತ್ತು ವಿಧಿಸಲ್ಲ ಎಂದ ಸಚಿವ ರಾಮಲಿಂಗಾ ರೆಡ್ಡಿ

author img

By

Published : May 30, 2023, 3:31 PM IST

Updated : May 30, 2023, 4:38 PM IST

ಎಲ್ಲ ಮಹಿಳೆಯರಿಗೂ ಸಾರಿಗೆ ಬಸ್​ಗಳಲ್ಲಿ ಉಚಿತ ಪ್ರಯಾಣ ಕುರಿತು ವರದಿಯನ್ನು ಸಿಎಂಗೆ ಕೊಡುತ್ತೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಸಚಿವ ರಾಮಲಿಂಗರೆಡ್ಡಿ
ಸಚಿವ ರಾಮಲಿಂಗರೆಡ್ಡಿ

ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು : ಎಲ್ಲಾ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. ಶಾಂತಿನಗರದ ಕೆಎಸ್ಆರ್​​ಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಮಹಿಳಾ ಪ್ರಯಾಣಿಕರಿಗೆ ಬಸ್ ಪ್ರಯಾಣ ಉಚಿತ ಇರಲಿದೆ. ಎಲ್ಲ ಹೆಣ್ಣು ಮಕ್ಕಳು, ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನಾಲ್ಕು ನಿಗಮಗಳ ಒಟ್ಟು ಆದಾಯ 8,946.85 ಕೋಟಿ ರೂ.‌ ಇದೆ. ಒಟ್ಟು ಕಾರ್ಯಾಚರಣೆ ವೆಚ್ಚ 12,750.49 ಕೋಟಿ ರೂ. ಇದೆ. ನಾಲ್ಕು ನಿಗಮಗಳ ಆರ್ಥಿಕ ಪರಿಸ್ಥಿತಿ, ಕೋವಿಡ್​​ನಲ್ಲಿ ನಷ್ಟ, ಹೊಸ ಬಸ್ ಖರೀದಿ, ನೌಕರರ ನೇಮಕ ಬಗ್ಗೆ ಚರ್ಚೆ ಆಗಿದೆ. ಡಿಮ್ಯಾಂಡ್ ಇರೋ ಕಡೆ ಬಸ್ ಹಾಕಲು ಚರ್ಚೆ ಮಾಡಿದ್ದೀವಿ. ದೇಶದಲ್ಲೇ ಪ್ರತಿಷ್ಠಿತ ಸಾರಿಗೆ ಸಂಸ್ಥೆಗಳಾಗಿ ಬೆಳೆದಿವೆ ಎಂದರು.

ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಿಜೆಪಿಯವರಿಗೆ ಪ್ರತಿಭಟನೆ ಮಾಡಲು ಅವಕಾಶ ನೀಡಲ್ಲ. ಜನ ಬಿಜೆಪಿಗೆ ರೆಸ್ಟ್ ಮಾಡಲು ಹೇಳಿದ್ದಾರೆ. ಅವರು ಮನೆಯಲ್ಲಿ ರೆಸ್ಟ್ ಮಾಡಲಿ ಎಂದು ಟಾಂಗ್ ನೀಡಿದರು.

ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡುವ ಹಾಗೂ ಅದಕ್ಕೆ ತಗಲುವ ವೆಚ್ಚದ ಕುರಿತು ವರದಿ ಸಿದ್ಧವಾಗಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿ ಸಲ್ಲಿಕೆ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

  • "100% it will be implemented. All the modalities will be finalised in the cabinet meeting," says Ramalinga Reddy, Karnataka Transport Minister on providing free travel to women in government buses pic.twitter.com/teiv7qqC6s

    — ANI (@ANI) May 30, 2023 " class="align-text-top noRightClick twitterSection" data=" ">

"100% it will be implemented. All the modalities will be finalised in the cabinet meeting," says Ramalinga Reddy, Karnataka Transport Minister on providing free travel to women in government buses pic.twitter.com/teiv7qqC6s

— ANI (@ANI) May 30, 2023

ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಣೆ ಸಂಬಂಧ ಇಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ನಾಲ್ಕು ನಿಗಮಗಳ ವ್ಯವಸ್ಥಾಪಕ ಅಧಿಕಾರಿಗಳೊಂದಿಗೆ ಸುರ್ಧೀಘ ಸಭೆ ನಡೆಸಿದರು. ಈ ಸಭೆ ಬಳಿಕ ಮಾತನಾಡಿದ ಅವರು, ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಇದಕ್ಕೆ ಅಭ್ಯಂತರ ಇರುವುದಿಲ್ಲ. ಇಂದಿನ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಸಿದ್ದರಾಮಯ್ಯ ಅವರಿಗೆ ಸಭೆಯ ವರದಿ ಸಲ್ಲಿಸುತ್ತೇವೆ. ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆ ನಿನ್ನೆ ಸಿದ್ದರಾಮಯ್ಯ ಅವರು ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಇದಕ್ಕೆ ಯಾವುದೇ ಷರತ್ತುಗಳಿಲ್ಲ. ಮುಖ್ಯಮಂತ್ರಿಗಳು, ಎಲ್ಲ ಕಾರ್ಯದರ್ಶಿಗಳು ಹಾಗೂ ಎಂಡಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಎಲ್ಲ ನಿಗಮಗಳು ಒಂದಷ್ಟು ಗೈಡ್ಲೈನ್ಸ್ ನೀಡಿದ್ದಾರೆ. ಅವೆಲ್ಲವನ್ನೂ ಸಚಿವ ಸಂಪುಟದಲ್ಲಿ ಇಟ್ಟು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ರಾಮಲಿಂಗಾರೆಡ್ಡಿ ಇದೇ ವೇಳೆ ಸ್ಪಷ್ಟಪಡಿಸಿದರು.

ವಿಧಾನಸಭಾ ಚುನಾವಣೆ 2023ರ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಜಾರಿ ಮಾಡುವುದಾಗಿ ಘೋಷಣೆ ಮಾಡಿತ್ತು. ಐದು ಗ್ಯಾರಂಟಿಗಳಲ್ಲಿ ಎಲ್ಲ ಮಹಿಳೆಯರಿಗೂ ಸಾರಿಗೆ ಬಸ್​ಗಳಲ್ಲಿ ಉಚಿತ ಪ್ರಯಾಣ ಎಂದು ಹೇಳಿದ್ದೇವೆ. ಹೀಗಾಗಿ ಅದನ್ನು ಜಾರಿ ಮಾಡುತ್ತೇವೆ. ಪ್ರಣಾಳಿಕೆಯಲ್ಲಿ ಬಿಪಿಎಲ್, ಎಪಿಎಲ್ ಎಂದು ಹೇಳಿಲ್ಲ. ಅದಕ್ಕಾಗಿ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ.

ಸಾರಿಗೆ ಸಂಸ್ಥೆಗೆ ಉಚಿತ ಪ್ರಯಾಣ ಸೌಲಭ್ಯದಿಂದ ದೈನಂದಿನ ಆದಾಯ 23 ಕೋಟಿ ರೂಪಾಯಿಯಲ್ಲಿ ಅರ್ಧದಷ್ಟು ಕಡಿಮೆಯಾಗಬಹುದು. ಸುಮಾರು 13 ಕೋಟಿ ಹೊರೆಯಾಗಬಹುದು. ಸಾರಿಗೆ ಸಂಸ್ಥೆಗಳು ದೈನಂದಿನ ಡಿಸೇಲ್‍ಗೆ 15 ಕೋಟಿ ರೂಪಾಯಿ ಖರ್ಚು ಮಾಡುತ್ತಿವೆ. ಡಿಸೇಲ್ ಬಿಲ್ ಅನ್ನು ಹದಿನೈದು ದಿನಕ್ಕೊಮ್ಮೆ ಪಾವತಿಸಲಾಗುತ್ತಿದೆ. ಉಚಿತ ಪ್ರಯಾಣದಿಂದ ಹೊರೆಯಾಗುವ ಮೊತ್ತವನ್ನು ಭರಿಸಲು ಸರ್ಕಾರದೊಂದಿಗೆ ಲಿಖಿತ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಸಾರಿಗೆ ಬಸ್‍ಗಳಲ್ಲಿ ಪ್ರತಿದಿನ 85,051 ಮಂದಿ ಪ್ರಯಾಣ ಮಾಡುತ್ತಾರೆ. ಪ್ರತಿ ದಿನ 23.13 ಕೋಟಿ ರೂಪಾಯಿ ಆದಾಯ ಬರುತ್ತಿದ್ದು, ವಾರ್ಷಿಕ ಆದಾಯ 8946 ಕೋಟಿ ರೂಪಾಯಿಗಳಾಗಿದೆ. ನಾಲ್ಕು ಸಾರಿಗೆ ನಿಗಮಗಳಲ್ಲಿನ ಕಾರ್ಯಾಚರಣೆ ವೆಚ್ಚ ಹಾಗೂ ಆದಾಯದ ನಡುವೆ 100 ಕೋಟಿ ರೂಪಾಯಿ ನಷ್ಟವಾಗಬಹುದು. ನಾಲ್ಕು ಸಾರಿಗೆ ಸಂಸ್ಥೆಗಳ ವಿಭಾಗಗಳಿಂದ 240 ಘಟಕಗಳಿವೆ. 23,978 ವಾಹನಗಳಿವೆ, 1 ಲಕ್ಷ 4,450 ಸಿಬ್ಬಂದಿ ಇದ್ದಾರೆ ಎಂಬ ಮಾಹಿತಿತನ್ನು ರಾಮಲಿಂಗಾ ರೆಡ್ಡಿ ನೀಡಿದರು.

ಇದನ್ನೂ ಓದಿ : ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿನ ಅಕ್ರಮಗಳ ತನಿಖೆಗೆ ಸಿಎಸ್​ಗೆ ಸಿಎಂ ಸೂಚನೆ: 15 ದಿನದಲ್ಲಿ ವರದಿ ನೀಡಲು ಗಡುವು

Last Updated : May 30, 2023, 4:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.