ETV Bharat / state

ಚುನಾವಣೆ ಹೊಸ್ತಿಲಲ್ಲಿ ಉಚಿತ ವಿದ್ಯುತ್ ಆಶ್ವಾಸನೆ: ಎಸ್ಕಾಂಗಳ ಆರ್ಥಿಕ ಸ್ಥಿತಿಗತಿ ಹೇಗಿದೆ ನೋಡಿ!

ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಚಿತ ವಿದ್ಯುತ್ ಯೋಜನೆಯನ್ನೇನೋ ಘೋಷಿಸಿದೆ. ಆದ್ರೆ ಎಸ್ಕಾಂಗಳ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬುದರ ಕುರಿತ ವರದಿ ಇಲ್ಲಿದೆ.

ಎಸ್ಕಾಂಗಳ ಆರ್ಥಿಕತೆ
ಎಸ್ಕಾಂಗಳ ಆರ್ಥಿಕತೆ
author img

By

Published : Jan 17, 2023, 8:23 AM IST

Updated : Jan 17, 2023, 10:10 AM IST

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಋತು ಕಾವೇರಲು ಶುರುವಾಗಿದೆ. ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹೊಸ ಹೊಸ ತಂತ್ರಗಾರಿಕೆಗಳನ್ನು ರೂಪಿಸುತ್ತಿವೆ. ಉಚಿತ ಯೋಜನೆಗಳ ಆಶ್ವಾಸನೆ ನೀಡುತ್ತಿವೆ. ತಾನು ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್‌ ಪಕ್ಷ ಈಗಾಗಲೇ ಭರವಸೆ ಕೊಟ್ಟಿದೆ. ಎಎಪಿ ಸರ್ಕಾರಗಳಿರುವ ಪಂಜಾಬ್ ಹಾಗೂ ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ಉಚಿತ ವಿದ್ಯುತ್ ನೀಡುವ ಬಗ್ಗೆ ಕೈ ಪಕ್ಷ ಘೋಷಿಸಿದೆ. ಈ ಉಚಿತ ವಿದ್ಯುತ್ ಇದೀಗ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿದೆ. ಕಾಂಗ್ರೆಸ್​​ನ ಈ ಆಶ್ವಾಸನೆಯ ಮಧ್ಯೆ ಸದ್ಯ ರಾಜ್ಯದಲ್ಲಿನ ವಿದ್ಯುತ್ ಸರಬರಾಜು ಕಂಪೆನಿಗಳ (ಎಸ್ಕಾಂ)ಗಳ ಸ್ಥಿತಿಗತಿ, ವಾಸ್ತವತೆ ಹೇಗಿದೆ ಎಂಬುದನ್ನು ನೋಡೋಣ.

ಎಸ್ಕಾಂಗಳ ಮೇಲಿನ ಸಾಲದ ಹೊರೆ ಏನು?: ರಾಜ್ಯದ ಐದು ಎಸ್ಕಾಂಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಪ್ರತಿ ವರ್ಷ ಸಾವಿರಾರು ಕೋಟಿ ರೂ. ಸಾಲ ಮಾಡಿ ಸಾಲದ ಚಕ್ರವ್ಯೂಹದಲ್ಲಿ ಸಿಲುಕುತ್ತಿವೆ. ಡಿಸೆಂಬರ್ 2022ರ ವರೆಗೆ ಐದು ಎಸ್ಕಾಂ ಹಾಗೂ ಕೆಪಿಟಿಸಿಎಲ್, ಕೆಪಿಸಿಎಲ್ ಸುಮಾರು 72,169 ಕೋಟಿ ರೂ. ಸಾಲ ಮಾಡಿದೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಂದರೆ 2013-2018 ವರೆಗೆ ಎಸ್ಕಾಂ ಹಾಗೂ ಕೆಪಿಸಿಎಲ್ ಮತ್ತು ಕೆಪಿಟಿಸಿಎಲ್ ಸುಮಾರು 33,414.20 ಕೋಟಿ ರೂ. ಸಾಲ ಮಾಡಲಾಗಿತ್ತು. ಇತ್ತ ಮೈತ್ರಿ ಸರ್ಕಾರದ ವೇಳೆ ಎಸ್ಕಾಂಗಳ ಸಾಲದ ಮೊತ್ತ 27,178.88 ಕೋಟಿ ರೂ. ಆಗಿತ್ತು. ಪ್ರಸಕ್ತ ಬಿಜೆಪಿ ಸರ್ಕಾರದಲ್ಲಿ ಈವರೆಗೆ 56,111.35 ಕೋಟಿ ರೂ. ಸಾಲ ಮಾಡಲಾಗಿದೆ.

ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಎಸ್ಕಾಂಗಳು ಮಾಡಿದ ಸಾಲದ ಪೈಕಿ 23,988.44 ಕೋಟಿ ಸಾಲ ಮರುಪಾವತಿ ಮಾಡಲಾಗಿದೆ. ಅದೇ ಮೈತ್ರಿ ಸರ್ಕಾರದ ವೇಳೆ ಮಾಡಿದ ಸಾಲದ ಪೈಕಿ ಸುಮಾರು 17,550 ಕೋಟಿ ರೂ. ಮರುಪಾವತಿ ಮಾಡಲಾಗಿದೆ. ಪ್ರಸಕ್ತ ಬಿಜೆಪಿ ಸರ್ಕಾರ ಈವರೆಗೆ 45,550.63 ಕೋಟಿ ರೂ. ಸಾಲ ಮರು ಪಾವತಿ ಮಾಡಿರುವುದಾಗಿ ಇಲಾಖೆ ಅಂಕಿಅಂಶ ನೀಡಿದೆ.

ಇಂಧನ ಸಚಿವರ ಕಚೇರಿ ನೀಡಿದ ಮಾಹಿತಿ ಪ್ರಕಾರ, ರಾಜ್ಯದ ಎಲ್ಲಾ ಎಸ್ಕಾಂಗಳು ಸುಮಾರು 29,329 ಕೋಟಿ ರೂ. ಸಾಲದ ಸುಳಿಯಲ್ಲಿವೆ. ಇನ್ನು ವಿದ್ಯುತ್ ಉತ್ಪಾದನಾ ನಿಗಮವಾದ ಕೆಪಿಸಿಎಲ್ 31,259 ಕೋಟಿ ರೂ. ಸಾಲದಲ್ಲಿ ಮುಳುಗಿದೆ. ಇತ್ತ ಕೆಪಿಟಿಸಿಎಲ್ ಸುಮಾರು 10,302 ಕೋಟಿ ರೂ. ಸಾಲದ ಸುಳಿಯಲ್ಲಿದೆ.

ಸಹಾಯಧನದ ಹೊರೆ ಏನು?: ಇಂಧನ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿವಿಧ ಯೋಜನೆಗಳಿಗೆ ಸರ್ಕಾರ ನೀಡುವ ಸಬ್ಸಿಡಿ ಹೊರೆಯೇ ಹೆಚ್ಚಾಗಿದೆ. ಕೃಷಿ ಪಂಪ್ ಸೆಟ್, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳಿಗೆ ಲಕ್ಷಾಂತರ ಕೋಟಿ ಸಬ್ಸಿಡಿ ಹೊರೆ ಬೀಳುತ್ತಿದೆ. ರೈತರ ಐಪಿ ಸೆಟ್​​ಗಳಿಗೆ ವಾರ್ಷಿಕ ಸುಮಾರು 12,000 ಕೋಟಿ ರೂ‌. ಸಬ್ಸಿಡಿ ಕೊಡಲಾಗುತ್ತಿದೆ. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿಯಿಂದ ವಾರ್ಷಿಕ 700 ಕೋಟಿ ರೂ. ಸಬ್ಸಿಡಿ ಹೊರೆ ಬೀಳುತ್ತಿದ್ದರೆ, ಇತ್ತೀಚೆಗೆ ಬೊಮ್ಮಾಯಿ‌ ಸರ್ಕಾರ ಕೊಡುತ್ತಿರುವ ಎಸ್​​ಸಿ/ಎಸ್​ಟಿ ಬಿಪಿಎಲ್​​ದಾರರಿಗೆ 75 ಯುನಿಟ್​​ವರೆಗಿನ ಉಚಿತ ವಿದ್ಯುತ್ ಯೋಜನೆಗೆ ವಾರ್ಷಿಕ 976 ಕೋಟಿ ರೂ‌. ಸಬ್ಸಿಡಿ ಹೊರೆಯಾಗುತ್ತಿದೆ. ಆ ಮೂಲಕ ಉಚಿತ ವಿದ್ಯುತ್ ಯೋಜನೆಗಳಿಂದ ವಾರ್ಷಿಕ ಸುಮಾರು 14,000 ಕೋಟಿ ರೂ. ಭಾರ ಸರ್ಕಾರದ ಮೇಲೆ ಬೀಳುತ್ತಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಬಿಜೆಪಿ ಸರ್ಕಾರಾವಧಿಯಲ್ಲಿ ಈವರೆಗೆ ಉಚಿತ ವಿದ್ಯುತ್ ಸಂಬಂಧಿತ ಯೋಜನೆಗಳಿಗೆ ಸುಮಾರು 36,289.91 ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. ಅದೇ ಸಿದ್ದರಾಮಯ್ಯ ಸರ್ಕಾರದ ಐದು ವರ್ಷಗಳಲ್ಲಿ ಸುಮಾರು 36,927.51 ಕೋಟಿ ರೂ. ಸಬ್ಸಿಡಿ ನೀಡಲಾಗಿತ್ತು. ಮೈತ್ರಿ ಸರ್ಕಾರದ ವೇಳೆ 20,154 ಕೋಟಿ ರೂ. ಸಬ್ಸಿಡಿ ಹೊರೆ ಬಿದ್ದಿತ್ತು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಐಪಿ ಸೆಟ್​​ಗಳಿಗೆ ಸುಮಾರು 35,506 ಕೋಟಿ ರೂ. ಸಬ್ಸಿಡಿ ಬಿಡುಗಡೆ ಮಾಡಿತ್ತು. ಸದ್ಯ ಬಿಜೆಪಿ ಸರ್ಕಾರದಲ್ಲಿ ಈವರೆಗೆ ಸುಮಾರು 37,049.66 ಕೋಟಿ ರೂ. ಮತ್ತು ಮೈತ್ರಿ ಸರ್ಕಾರದ ವೇಳೆ 19,324 ಕೋಟಿ ರೂ‌. ಸಬ್ಸಿಡಿ ಬಿಡುಗಡೆ ಮಾಡಲಾಗಿತ್ತು.

ಎಸ್ಕಾಂಗಳು ನೀಡಬೇಕಾದ ಬಾಕಿ ಹಣ ಎಷ್ಟು?: ಎಸ್ಕಾಂಗಳು ಸುಮಾರು 16,322 ಕೋಟಿ ರೂ ಬಾಕಿ ಬಿಲ್ ಪಾವತಿಸಬೇಕಿದೆ. ಕೆಪಿಸಿಎಲ್​​ಗೆ 9,936 ಕೋಟಿ ರೂ., ಕೇಂದ್ರ ಗ್ರಿಡ್​​ಗೆ 1,316 ಕೋಟಿ ರೂ., ಆರ್ ಇ ಜನರೇಟರ್​​ಗೆ ಸುಮಾರು 2,621 ಕೋಟಿ ರೂ., ಕೆಪಿಟಿಸಿಎಲ್​ಗೆ 1,905 ಕೋಟಿ ರೂ., ಯುಪಿಸಿಎಲ್​​ಗೆ 282 ಕೋಟಿ ರೂ. ಸೇರಿ ಸುಮಾರು 16,322 ಕೋಟಿ ರೂ. ಬಾಕಿಯನ್ನು ಎಸ್ಕಾಂ ಉಳಿಸಿಕೊಂಡಿದೆ.

ಇತ್ತ ಆರ್​ಡಿಪಿಆರ್, ನಗರಾಭಿವೃದ್ಧಿ ಇಲಾಖೆ ಮತ್ತು ಇತರೆ ಸರ್ಕಾರಿ ಇಲಾಖೆಗಳು ವಿದ್ಯುತ್ ಬಿಲ್ ರೂಪದಲ್ಲಿ 8,125 ಕೋಟಿ ರೂ. ಎಸ್ಕಾಂಗಳಿಗೆ ಪಾವತಿಸಬೇಕಾಗಿದೆ. ಈಗಾಗಲೇ ಎಸ್ಕಾಂಗಳು ಆರ್ಥಿಕವಾಗಿ ದುರ್ಬಲವಾಗಿದ್ದು, ಸಾಲದ ಸುಳಿಯಲ್ಲಿ ಸಿಲುಕಿವೆ. ಮತ್ತೆ ಉಚಿತ ವಿದ್ಯುತ್ ಯೋಜನೆ ಜಾರಿಗೊಳಿಸಿದ್ರೆ ಎಸ್ಕಾಂಗಳ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಅನುಮಾನ ಇಲ್ಲ.

ಇದನ್ನೂ ಓದಿ: ಇಂಧನ ಇಲಾಖೆ ನಷ್ಟಕ್ಕೆ ತಳ್ಳಿದವರಿಂದ ಉಚಿತ ವಿದ್ಯುತ್ ಭರವಸೆ: ಇಂಧನ ಸಚಿವ ಸುನೀಲ್ ಕುಮಾರ್ ವ್ಯಂಗ್ಯ

Last Updated : Jan 17, 2023, 10:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.