ETV Bharat / state

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆ: ಈವರೆಗೆ ಸರ್ಕಾರದ ಮೇಲೆ ಬಿದ್ದ ಚಿಕಿತ್ಸಾ ವೆಚ್ಚದ ಹೊರೆ ಎಷ್ಟು? - ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದಿಂದ ಉಚಿತ ಕೋವಿಡ್ ಚಿಕಿತ್ಸೆ

ರಾಜ್ಯದ ಜನರ ಆರೋಗ್ಯ ಮೊದಲ ಆದ್ಯತೆಯಾಗಿರುವುದರಿಂದ ಸರ್ಕಾರ ಈ ಭಾರಿ ಹೊರೆಯನ್ನು ಭರಿಸಲೇಬೇಕಾದ ಅನಿವಾರ್ಯ. ಹೀಗಾಗಿನೇ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ಚಿಕಿತ್ಸೆ ಪಡೆದ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆ

author img

By

Published : Sep 5, 2021, 10:14 PM IST

ಬೆಂಗಳೂರು: ಕೋವಿಡ್ ರೋಗಿಗಳಿಗೆ ರಾಜ್ಯ ಸರ್ಕಾರ ಉಚಿತ ಚಿಕಿತ್ಸೆ ನೀಡುತ್ತಿದೆ. ಸರ್ಕಾರಿ‌ ಕೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಚಿಕಿತ್ಸೆ ಸಂಬಂಧ ಖಾಸಗಿ ಆಸ್ಪತ್ರೆಗಳಿಗೆ ನಿಗದಿತ ದರದಲ್ಲಿ ವೆಚ್ಚ ಭರಿಸುತ್ತಿದೆ. ಮೊದಲ ಅಲೆಯಿಂದ ಹಿಡಿದು ಎರಡನೇ ಅಲೆವರೆಗೆ ಕೋವಿಡ್ ಸೋಂಕಿತರಿಗೆ ಸರ್ಕಾರಿ ಕೋಟಾದಡಿ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳಿಗೆ ಕೋಟ್ಯಂತರ ರೂ. ಚಿಕಿತ್ಸಾ ವೆಚ್ಚವನ್ನು ಸರ್ಕಾರ ಪಾವತಿಸಬೇಕಾಗಿದೆ.

ಕೋವಿಡ್ ಮಹಾಮಾರಿ ರಾಜ್ಯವನ್ನು ಸಂಪೂರ್ಣವಾಗಿ ಮಂಡಿಯೂರುವಂತೆ ಮಾಡಿತ್ತು.‌ ಮೊದಲ ಅಲೆಯಿಂದ ಚೇತರಿಸಿ ನಿಟ್ಟುಸಿರುಬಿಡುತ್ತಿದ್ದ ಹಾಗೆಯೇ, ಎರಡನೇ ಅಲೆ ರಾಜ್ಯವನ್ನು ಸಂಪೂರ್ಣವಾಗಿ ನೆಲಕಚ್ಚುವಂತೆ ಮಾಡಿತು.‌ ಕೋವಿಡ್​​ನ ಭೀಕರತೆ ರಾಜ್ಯವನ್ನು ಕಂಗೆಡಿಸಿಬಿಟ್ಟಿತ್ತು. ಕೋವಿಡ್ ಮಹಾಮಾರಿಗೆ ಸೋಂಕಿತರಾದ ರಾಜ್ಯದ ಜನರಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿತ್ತು. ಅದರಂತೆ ಬಿಬಿಎಂಪಿ, ಸ್ಥಳೀಯ ಆಡಳಿತದಿಂದ ರೆಫರ್ ಮಾಡಲಾದ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ನೀಡಲು ಸರ್ಕಾರ ನಿರ್ಧರಿಸಿತ್ತು.‌ ಹೀಗಾಗಿ ರಾಜ್ಯಲ್ಲಿ ಕೋವಿಡ್ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆ
ಚಿಕಿತ್ಸೆ ಪಡೆದ ರೋಗಿಗಳ ಜಿಲ್ಲಾವಾರು ವಿವರ..

ಇದರಿಂದ ಸರ್ಕಾರದ ಮೇಲೆ ಭಾರಿ ಹೊರೆ ಬೀಳುತ್ತಿದೆ. ರಾಜ್ಯದ ಜನರ ಆರೋಗ್ಯ ಮೊದಲ ಆದ್ಯತೆಯಾಗಿರುವುದರಿಂದ ಸರ್ಕಾರ ಈ ಭಾರಿ ಹೊರೆಯನ್ನು ಭರಿಸಲೇಬೇಕಾದ ಅನಿವಾರ್ಯ. ಹೀಗಾಗಿನೇ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ಚಿಕಿತ್ಸೆ ಪಡೆದ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಚಿಕಿತ್ಸಾ ವೆಚ್ಚವನ್ನು ಸರ್ಕಾರ ನಿಗದಿ ಮಾಡಿದೆ. ಅದರನ್ವಯ ಕೋವಿಡ್ ಸೋಂಕಿತರಿಗೆ ನೀಡಿದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಕೋಟಿ ಕೋಟಿ ಹಣವನ್ನು ಪಾವತಿಸಬೇಕಾಗಿದೆ.

ಸರ್ಕಾರದ ಮೇಲೆ ಬಿದ್ದ ಕೋವಿಡ್ ಚಿಕಿತ್ಸಾ ವೆಚ್ಚ ಎಷ್ಟು?:

ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಸರ್ಕಾರ ಉಚಿತವಾಗಿನೇ ಚಿಕಿತ್ಸೆ ನೀಡಿದೆ. ಹೀಗಾಗಿ ಸರ್ಕಾರದ‌ ಮೇಲೆ ಭರಿಸಬೇಕಾದ ಚಿಕಿತ್ಸಾ ವೆಚ್ಚದ ಹೊರೆ ದೊಡ್ಡ ಪ್ರಮಾಣದಲ್ಲಿದೆ.

ಕಳೆದ ವರ್ಷ ಜುಲೈ 2020 ರಿಂದ ಈ ವರ್ಷ ಆಗಸ್ಟ್‌ವರೆಗೆ ಸರ್ಕಾರದ ಕೋಟಾದಡಿ ಲಕ್ಷಾಂತರ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯ ಇಲಾಖೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ನೀಡಿದ ಅಂಕಿಅಂಶದಂತೆ 1,34,789 ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡಿದ್ದಾರೆ. ಅದರಂತೆ ಈವರೆಗೆ ಒಟ್ಟು 1006 ಕೋಟಿ ರೂ. ಚಿಕಿತ್ಸಾ ವೆಚ್ಚ ಆಗಿದೆ.

1,30,486 ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಸುಮಾರು 772.44 ಕೋಟಿ ರೂ. ಮೊತ್ತದ ಕ್ಲೈಮ್‌ಗಳನ್ನು ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳು ಸಲ್ಲಿಕೆ ಮಾಡಿದೆ. ಈ ಪೈಕಿ 496.39 ಕೋಟಿ ರೂ. ವೆಚ್ಚವನ್ನು ಖಾಸಗಿ ಆಸ್ಪತ್ರೆಗಳಿಗೆ ಪಾವತಿಸಲಾಗಿದೆ. ಉಳಿದಂತೆ 140.52 ಕೋಟಿ ರೂ.‌ಹಣ ಖಾಸಗಿ ಆಸ್ಪತ್ರೆಗಳಿಗೆ ಇನ್ನೂ ಪಾವತಿಯಾಗದೇ ಬಾಕಿ ಉಳಿದುಕೊಂಡಿದೆ.

ಯಾವ ಜಿಲ್ಲೆಯಲ್ಲಿ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ:

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯ ಇಲಾಖೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿದ ಅಂಕಿಅಂಶದಂತೆ ಬೆಂಗಳೂರು ನಗರದಲ್ಲಿ ಸುಮಾರು 75,362 ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ 20,279 ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಉಳಿದಂತೆ ದ.ಕನ್ನಡದಲ್ಲಿ 6,319, ಮೈಸೂರು 5,129, ಉಡುಪಿ 4,011, ತುಮಕೂರು 3,480, ಕೋಲಾರದಲ್ಲಿ 3,262, ಧಾರವಾಡದಲ್ಲಿ 2,253 ಕೋವಿಡ್ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ಚಿಕಿತ್ಸೆ ಪಡೆದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿಂದು 1,117 ಮಂದಿಗೆ ಕೋವಿಡ್‌ ಸೋಂಕು; ಬೆಂಗಳೂರಿನಲ್ಲಿ ಗುಣಮುಖರ ಸಂಖ್ಯೆ ಹೆಚ್ಚು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.