ಬೆಂಗಳೂರು : ಕೊರೊನಾ ಸೋಂಕಿನ ಪರೀಕ್ಷೆ ನಡೆಸಲು ಖಾಸಗಿ ಆಸ್ಪತ್ರೆಯಲ್ಲಿ ಅಧಿಕ ಹಣ ತೆಗೆದುಕೊಳ್ಳುತ್ತಾರೆ. ಇದರಿಂದ ಜನರಿಗೆ ಸಹಾಯವಾಗಲಿ ಎಂದು ಸೌಥ್ ಝೋನ್ನಲ್ಲಿ ಮೊಬೈಲ್ ವ್ಯಾನ್ ಮೂಲಕ ಉಚಿತ ಕೋವಿಡ್ ಟೆಸ್ಟ್ ಮಾಡಲು ಮುಂದಾಗಿದೆ.
ನಗರದ ಬಿಬಿಎಂಪಿ ವಾರ್ ರೂಂ ಮುಖ್ಯಸ್ಥ ಐಎಎಸ್ ಮನೀಷ್ ಮೌದ್ಗಿಲ್ ಅವರ ತಂಡದ ವ್ಯಾನ್ ಇದಾಗಿದ್ದು, ಇದಕ್ಕೆ ಪ್ಯಾಬ್ ತಂಡ ಸಾಥ್ ನೀಡಿದೆ.
ಡಿ.ರೂಪಾ ಅವರು ಮಾಡಿದ ಟ್ವೀಟ್ ಇದೊಂದು ಕ್ಯೂ ಆರ್ ಕೋಡ್ ತರ ಲಿಂಕ್ ಆಗಿದ್ದು, ಕೊರೊನಾ ಸೋಂಕಿನ ಲಕ್ಷಣ ಇರುವವರು ಈ ಲಿಂಕ್ ಕ್ಲೀಕ್ ಮಾಡಿದರೆ ಉಚಿತವಾಗಿ ಮನೆ ಬಳಿ ಬಂದು ಕೊರೊನಾ ಟೆಸ್ಟ್ ನಡೆಸುತ್ತಾರೆ. ಒಂದು ವೇಳೆ ಆರೋಗ್ಯ ತೀವ್ರ ಗಂಭೀರವಾಗಿದ್ದರೆ ಅಂತಹವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಿದ್ದಾರೆ. ಒಂದು ವೇಳೆ ಕೊರೊನಾ ಸೋಂಕಿನ ಲಕ್ಷಣ ಮಾತ್ರ ಇದ್ದರೆ, 14 ದಿನ ಹೋಮ್ ಐಷೋಲೇಷನ್ ಇರುವಂತೆ ತಿಳಿಸಲಿದ್ದಾರೆ. ಇನ್ನು ಈ ವಿಚಾರವನ್ನು ಗೃಹ ಇಲಾಖೆಯ ಕಾರ್ಯದರ್ಶಿ ಡಿ. ರೂಪಾ ಅವರು ತಮ್ಮ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಡಿ ರೂಪಾ ಅವರ ಪತಿ ಮನೀಶ್ ಮೌದ್ಗಿಲ್ ಏನೇ ಕೆಲಸ ಮಾಡಿದರೂ ಅದಕ್ಕೆ ಸಪೋರ್ಟ್ ಮಾಡಿ ಜನರಿಗೆ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ.