ಬೆಂಗಳೂರು: ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ವತಿಯಿಂದ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಸ್ಮರಣಾರ್ಥವಾಗಿ ಸುಮಧರ್ ಹೋಟೆಲ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಲೋಕೇಶ್, ಕರ್ನಾಟಕದ ಕಾಫಿಯನ್ನು ಅಂತಾರಾಷ್ಟೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಸಿದ್ಧಾರ್ಥ್ ಅವರಿಗೆ ಸಲ್ಲತ್ತದೆ. 50,000 ಜನರಿಗೆ ಉದ್ಯೋಗ, ಕಾಫಿ ಬೆಳೆಗಾರರಿಗೆ ಉತ್ತಮ ಬೆಲೆ, ಕಾಫಿ ಉದ್ಯಮಕ್ಕೆ ವಿಶ್ವಮಟ್ಟದಲ್ಲಿ ಮಾನ್ಯತೆ ದೊರೆಯುವಂತೆ ಸಿದ್ಧಾರ್ಥ್ ಮಾಡಿದ್ದಾರೆ. ಕುಗ್ರಾಮದಲ್ಲಿ ವಾಸಿಸುವ ನಿರುದ್ಯೋಗವಂತ ಕನ್ನಡನಾಡಿನ ಯುವಕರಿಗೆ ಹೆಚ್ಚಿನ ಉದ್ಯೋಗ ನೀಡಿ, ಅವರ ಬಾಳಿನಲ್ಲಿ ಬೆಳಕು ಮೂಡಿಸಿದ್ದಾರೆ. ಎಲ್ಲರಂತೆ ಸರಳ ವ್ಯಕ್ತಿತ್ವದ ಸಿದ್ಧಾರ್ಥ್ ಅವರ ಅಗಲಿಕೆ ರಾಷ್ಟ, ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಸಿದ್ಧಾರ್ಥ್ ಅವರ ಕೆಫೆ ಕಾಫಿ ಡೇ, ವಿಶ್ವ ಮಟ್ಟದಲ್ಲಿ ಮತ್ತಷ್ಟು ಹೆಸರು, ಕೀರ್ತಿಗಳಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ಅಧ್ಯಕ್ಷ ಲೋಕೇಶ್, ನಾಗರಾಜ್ ಭಂಡಾರಿ ಶ್ರೀನಿವಾಸ್ ಸುರೇಶ್, ಎ ಟಿ ಚಂದ್ರಶೇಖರ್, ವಿಶ್ವ ಉಪಸ್ಥಿತರಿದ್ದು ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಿಸಿದರು.