ETV Bharat / state

ಕಾಳಹಸ್ತಿಯ ದೇವಾಲಯ ಚೇರ್ಮನ್ ಹುದ್ದೆ ಕೊಡಿಸುವುದಾಗಿ 1.5 ಕೋಟಿ ವಂಚಿಸಿದ್ದನಂತೆ 'ಯುವರಾಜ'! - ಇತಿಹಾಸವುಳ್ಳ ನೆರೆಯ ಆಂಧ್ರಪ್ರದೇಶದಲ್ಲಿರುವ ಪ್ರಸಿದ್ದ ದೇವಾಲಯ

ಹಲವು ಕೇಸ್​​ಗೆ ಸಂಬಂಧಿಸಿ ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಅಧಿಕಾರಿಗಳಿಗೆ ಆತನ ವಿಚಾರಣೆ ಅಂತ್ಯಗೊಳಿಸೋದಕ್ಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಒಂದು ವಿಚಾರಣೆ ಮುಗಿಸುತ್ತಿದ್ದಂತೆ ಮತ್ತೆ ಹಲವು ಕೇಸ್​​​ಗಳು ಆತನ ಮೇಲೆ ದಾಖಲಾಗುತ್ತಿವೆ. ಕೇವಲ ಬೆಂಗಳೂರು ಮಾತ್ರವಲ್ಲ, ಆಂಧ್ರ ಪ್ರದೇಶದಲ್ಲೂ ಆತನ ವಂಚನೆ ಬುದ್ಧಿ ತೋರಿಸಿದ್ದಾನೆ.

fraudster-yuvaraja-froud-case-in-bengaluru-news
ವಂಚಕ ಯುವರಾಜ ಅಲಿಯಾಸ್ ಸ್ವಾಮಿ
author img

By

Published : Jan 30, 2021, 9:07 PM IST

ಬೆಂಗಳೂರು: ಅದು ಹಲವು ವರ್ಷಗಳ ಇತಿಹಾಸವುಳ್ಳ ನೆರೆಯ ಆಂಧ್ರ ಪ್ರದೇಶದಲ್ಲಿರುವ ಪ್ರಸಿದ್ಧ ದೇವಾಲಯ. ಇಲ್ಲಿಗೆ ಒಮ್ಮೆ ಭೇಟಿ ಕೊಟ್ಟಿದ್ದ ವಂಚಕ ಯುವರಾಜ ಅಲ್ಲೂ ತನ್ನ ವಂಚನೆ ಬುದ್ಧಿ ತೋರಿಸಿದ್ದಾನೆ. ಅಷ್ಟಕ್ಕೂ ಏನಿದು ಕಥೆ, ಯುವರಾಜಗೂ ಈ ದೇವಸ್ಥಾನಕ್ಕೂ ಏನ್ ಸಂಬಂಧ ಅಂತೀರಾ?

ಓದಿ: ಹೆಲಿಕಾಪ್ಟರ್​ನಲ್ಲಿ ಬರೋಕೆ ಪ್ಲ್ಯಾನ್ ಮಾಡಿದ್ದು ಈಗ ಸಮಸ್ಯೆಯಾಗಿದೆ: ಶಾಸಕ ಪ್ರಿತಂ ಗೌಡ

ವಂಚಕ ಯುವರಾಜ ಅಲಿಯಾಸ್ ಸ್ವಾಮಿಯ ಕರ್ಮಕಾಂಡ ಅಗೆದಷ್ಟು ಬಗೆದಷ್ಟು ಬಯಲಾಗುತ್ತಿದೆ. ಹಲವು ಕೇಸ್​​ಗೆ ಸಂಬಂಧಿಸಿ ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಅಧಿಕಾರಿಗಳಿಗೆ ಆತನ ವಿಚಾರಣೆ ಅಂತ್ಯಗೊಳಿಸೋದಕ್ಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಒಂದು ವಿಚಾರಣೆ ಮುಗಿಸುತ್ತಿದ್ದಂತೆ ಮತ್ತೆ ಹಲವು ಕೇಸ್​​​ಗಳು ಆತನ ಮೇಲೆ ದಾಖಲಾಗುತ್ತಿವೆ. ಕೇವಲ ಬೆಂಗಳೂರು ಮಾತ್ರವಲ್ಲ, ಆಂಧ್ರ ಪ್ರದೇಶದಲ್ಲೂ ಆತನ ವಂಚನೆ ಬುದ್ಧಿ ತೋರಿಸಿದ್ದಾನೆ.

ಆಂಧ್ರ ಪ್ರದೇಶದ ಚಿತ್ತೂರಿನಲ್ಲಿರುವ ಪ್ರಸಿದ್ಧ ಕಾಳಹಸ್ತಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ಯುವರಾಜ್ ಅಲ್ಲಿನ ಆಡಳಿತ ಮಂಡಳಿಯ ಮುಖ್ಯಸ್ಥನಿಗೆ ಯಾಮಾರಿಸಿ ನಾಮ‌ ಹಾಕಿದ್ದಾನೆ. ದಿನನಿತ್ಯ ಸಾವಿರಾರು ಜನರು ಬರುವ ಈ ಸನ್ನಿಧಾನದ ಔದಾರ್ಯ ನೋಡಿ ಕರಗಿ ಹೋಗಿದ್ದ. ಜನರ ಕಷ್ಟ, ದೋಷಗಳನ್ನು ನಿವಾರಿಸುವ ಕಾಳಹಸ್ತಿಗೆ ಈ ಯುವರಾಜ ಒಂದೆರಡು ಬಾರೀ ವಿಸಿಟ್ ಮಾಡಿದ್ದನಂತೆ. ಬಳಿಕ ತಾನೊಬ್ಬ ದೊಡ್ಡ ವಿಐಪಿ ರೀತಿ ಪರಿಚಯ ಕೂಡ ಮಾಡಿಕೊಂಡಿದ್ದ. ಆತನನ್ನ ನಂಬಿ ಕಾಳಹಸ್ತಿ ದೇವಸ್ಥಾನದ ಮುಖ್ಯಸ್ಥ ಆನಂದಕಾಳ ಅವರು ಆತನಿಗೆ ಹೈಫೈ ಟ್ರೀಟ್ ಕೊಟ್ಟು ವಾಪಸ್ ಕಳುಹಿಸುತ್ತಿದ್ದರಂತೆ.

ಓದಿ: ಯುವರಾಜನ ಮತ್ತೊಂದು ಪ್ರಕರಣ ಬಯಲು: ಗವರ್ನರ್ ಹುದ್ದೆಗಾಗಿ ಮೋಸಹೋದ ನಿವೃತ್ತ ನ್ಯಾಯಮೂರ್ತಿ!

ತನಗೆ ಎಲ್ಲರೂ ಪರಿಚಯ ಇದ್ದಾರೆ, ನಿಮಗೆ ಏನೇ ಸಹಾಯ ಬೇಕಾದರೂ ನನ್ನನ್ನ ಕೇಳಿ ಎಂದಿದ್ದಾನೆ. ಅದನ್ನ ನಂಬಿ ಯಾರೋ ದೊಡ್ಡ ವ್ಯಕ್ತಿ ಇರಬಹುದು ಅಂತ ಯುವರಾಜನನ್ನ ಸಂಪರ್ಕಿಸಿದ್ದ ಆನಂದ್, ದೇವಸ್ಥಾನದ ಸೆಂಟ್ರಲ್ ಬೋರ್ಡ್ ಚೇರ್ಮೆನ್ ಆಗೋ ಆಸೆ ವ್ಯಕ್ತಪಡಿಸಿದ್ದರಂತೆ.

ಬಳಿಕ ಬೋರ್ಡ್ ಚೇರ್ಮನ್ ಮಾಡುವುದಾಗಿ ಬೆಂಗಳೂರಿಗೆ ಕರೆಸಿದ್ದ ಸ್ವಾಮಿ, ಸ್ಟಾರ್ ಹೋಟೆಲ್​ನಲ್ಲಿ ಡೀಲ್ ಮಾಡಿ ಹಣ ಪಡೆದಿದ್ದ. ಹಂತ ಹಂತವಾಗಿ ಬರೋಬ್ಬರಿ 1.5 ಕೋಟಿ ಹಣ ಪಡೆದು ನಂಬಿಸಿದ್ದ. ಬಳಿಕ ಏನೇನೋ ನೆಪ ಹೇಳಿ ಅವರ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದ. ಯಾವಾಗ ವಂಚಕ ಯುವರಾಜನ ಬಗ್ಗೆ ಗೊತ್ತಾಯಿತೋ ತಕ್ಷಣ ಎಚ್ಚೆತ್ತ ಆನಂದ ಕಾಳ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಾಗಾಗಿ ಆರೋಪಿ ಸ್ವಾಮಿಯ ವಿಚಾರಣೆ ನಡೆಸಲು ಫೆಬ್ರವರಿ 2ರವರೆಗೂ ಆತನನ್ನು ಸಿಸಿಬಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.