ETV Bharat / state

ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹಣ ಪಡೆದು ವಂಚನೆ: ಮೂವರನ್ನು ಬಂಧಿಸಿದ ಸಿಸಿಬಿ - ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹಣ ಪಡೆದು ವಂಚನೆ

ವೈದ್ಯರೊಬ್ಬರ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿ, ಲಕ್ಷಾಂತರ ರೂಪಾಯಿ‌ ವೈದ್ಯನಿಂದ ವಂಚಕರು ಪಡೆದಿದ್ದಾರೆ. ಬಳಿಕ ಸೀಟು ಕೂಡ ಕೊಡಿಸದೇ, ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ್ದ ಖತರ್ ನಾಕ್ ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

CBI arrests three accuses
ಮೂವರನ್ನು ಬಂಧಿಸಿದ ಸಿಸಿಬಿ
author img

By

Published : May 25, 2022, 10:08 PM IST

Updated : May 25, 2022, 10:34 PM IST

ಬೆಂಗಳೂರು: ರಾಜಧಾನಿಯ ಖಾಸಗಿ ಕಾಲೇಜಿನಲ್ಲಿ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ವೈದ್ಯರೊಬ್ಬರನ್ನು ನಂಬಿಸಿದ ವಂಚಕರು, ಅವರಿಂದ 66 ಲಕ್ಷ ರೂ. ಪಡೆದಿದ್ದಾರೆ. ಬಳಿಕ ವಂಚಕರು ಸೀಟು ಕೊಡಿಸದೇ, ಹಣ ವಾಪಸ್ ಸಹ ನೀಡದೇ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ್ದಾರೆ.‌ ಮತ್ತೆ 50 ಲಕ್ಷ ರೂ. ಪಡೆದು ವಂಚಿಸಿರುವ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ವೈದ್ಯರು ನೀಡಿದ ದೂರಿನ ಮೇರೆಗೆ ನಾಗರಾಜ್ ಹಾಗೂ ಮಧು ಸೇರಿದಂತೆ‌ ಮೂವರನ್ನು ಸಿಸಿಬಿ ಪೊಲೀಸರು ವಶಕ್ಕೆ‌ ಪಡೆದಿದ್ದಾರೆ. ವೈದ್ಯರೊಬ್ಬರು ತಮ್ಮ ಮಗನಿಗೆ ಬೆಂಗಳೂರಿನ ಕಾಲೇಜೊಂದರಲ್ಲಿ ಎಂಬಿಬಿಎಸ್ ಸೀಟು ಪಡೆಯಲು ಓಡಾಟ ನಡೆಸುತ್ತಿದ್ದರು. ಹಲವು ಸಲ ತಿರುಗಾಡಿದರೂ ಸೀಟು ಸಿಕ್ಕಿರಲಿಲ್ಲ. ಈ ವೇಳೆ ಎಂಟು ವರ್ಷಗಳಿಂದ‌ ಪರಿಚಿತನಾಗಿದ್ದ, ಆರೋಪಿ ನಾಗರಾಜ್ ಸೀಟು ಕೊಡಿಸುತ್ತೇನೆ ಎಂದು ಹೇಳಿದ್ದಾನೆ. ಪರಿಚಯಸ್ಥರಾಗಿದ್ದರಿಂದ‌ ನಂಬಿಕೆ ಮೇರೆಗೆ ಕಳೆದ ವರ್ಷ ಹಂತ ಹಂತವಾಗಿ 66 ಲಕ್ಷ ಕೊಟ್ಟಿದ್ದಾರೆ. ಬಳಿಕ ಎಂಬಿಎಸ್ ಸೀಟು ಕೊಡಿಸದೇ ಹಣ ನೀಡದೆ ನಾಗರಾಜ್ ಆಟ ಆಡಿಸಿದ್ದಾನೆ. ಕೆಲ ತಿಂಗಳ ಬಳಿಕ ಹಣ ನೀಡುವುದಾಗಿ ನಗರಕ್ಕೆ ವೈದ್ಯರನ್ನು ಆರೋಪಿ ಕರೆಯಿಸಿಕೊಂಡಿದ್ದಾನೆ.

ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ ಆರೋಪಿಗಳು: ಗಾಂಧಿನಗರದ ಲಾಡ್ಜ್ ನಲ್ಲಿ‌ ವೈದ್ಯ ಪ್ರತ್ಯೇಕ ರೂಮ್ ಬುಕ್ ಮಾಡಿದ್ದರು. ಮಧ್ಯರಾತ್ರಿ ಆರೋಪಿಯ ಅಣತಿಯಂತೆ ಇಬ್ಬರು ಯುವತಿಯರು ಅವರು ಉಳಿದುಕೊಂಡಿದ್ದ ರೂಮಿಗೆ‌ ನುಗ್ಗಿದ್ದಾರೆ. ಬಳಿಕ ಆತನ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ.‌ ಕೆಲ ಹೊತ್ತಿನ ಬಳಿಕ ನಕಲಿ ಪೊಲೀಸರು ರೂಮ್​ಗೆ ಎಂಟ್ರಿ ಕೊಟ್ಟಿದ್ದಾರೆ. ವೇಶ್ಯಾವಾಟಿಕೆ ಜಾಲ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು ರೈಡ್ ಮಾಡಲಾಗಿದೆ ಎಂದಿದ್ದಾರೆ.‌ ಪಕ್ಕದ‌ ರೂಮಿನಲ್ಲಿ ವಾಸ್ತವ್ಯ ಹೂಡಿದ್ದ ನಾಗರಾಜ್ ಹುಡುಗಿಯರ ಜೊತೆ ವೈದ್ಯ ಇರುವ ಪೋಟೋವನ್ನು‌ ತೆಗೆದಿದ್ದಾನೆ. ಬಳಿಕ ಅವರ ಬಳಿ ಇದ್ದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಮಗನ ಪಬ್​ಜಿ ಹುಚ್ಚಿಗೆ ಅಮ್ಮನೇ ಬಲಿ.. ಗುಂಡಿಟ್ಟ ಗಂಡ ಅಂದರ್​​​

ರೈಡ್ ಮಾಡಿರುವ ಪೊಲೀಸರಿಗೆ ಪ್ರಕರಣ ದಾಖಲಿಸಿಕೊಳ್ಳದಂತೆ 50 ಲಕ್ಷಕ್ಕೆ ಡೀಲ್ ಮಾಡಿಕೊಂಡಿರುವುದಾಗಿ ಹೇಳಿ, ಹಣ ನೀಡುವಂತೆ ಆರೋಪಿಯು ವೈದ್ಯರಿಗೆ ತಾಕೀತು ಮಾಡಿದ್ದಾನೆ‌. ಹಣ ನೀಡದೇ ಹೋದರೆ ನಿನ್ನನ್ನ ಬಂಧಿಸುತ್ತಾರೆ. ಆಗ ನಿನ್ನ ಮಾನ - ಮಾರ್ಯಾದೆ ಹೋಗಲಿದೆ ಎಂದು ಬೆದರಿಸಿದ್ದಾರೆ. ಮರ್ಯಾದೆಗೆ ಅಂಜಿದ‌ ವೈದ್ಯ ಊರಿಗೆ ಹೋಗಿ ಹಣ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಊರಿಗೆ ಬಂದು ಮನೆ ಪತ್ರದ ಆಧಾರದ ಮೇಲೆ ಖಾಸಗಿ ಬ್ಯಾಂಕ್​ನಲ್ಲಿ 50 ಲಕ್ಷ ಹಣ ಸಾಲ ಪಡೆದು ಆರೋಪಿಗಳ ಕೈಗೆ ಕೊಟ್ಟಿದ್ದಾರೆ.

ನಕಲಿ ಬೇಲ್ ಕೊಡಿಸಲು 20 ಲಕ್ಷ ರೂ.ಕೊಡಿ ಎಂದ ಆರೋಪಿಗಳು: 50 ಲಕ್ಷ ಪಡೆದ ಆರೋಪಿಗಳು‌‌ ಕೆಲ ದಿನ ಸುಮ್ಮನಿದ್ದು, ಬಳಿಕ‌ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾರೆ. ದಾಳಿ ವೇಳೆ ಬಂಧಿತರಾಗಿರುವ ಯುವತಿಯರಿಗೆ ಬೇಲ್‌ ಕೊಡಿಸಲು 20 ಲಕ್ಷ ಕೊಡುವಂತೆ ತಾಕೀತು ಮಾಡಿದ್ದಾರೆ. ಹಣ ನೀಡದಿದ್ದರೆ ಯುವತಿಯರ ಸಮೇತ ನಿನ್ನ ಮನೆಗೆ ಬಂದು ಮಾನಮಾರ್ಯಾದೆ ಹರಾಜು ಹಾಕುವೆ ಎಂದು ವಂಚಕರು ಬೆದರಿಸಿದ್ದಾರೆ. ಇದರಿಂದ ಕಂಗಲಾದ ವೈದ್ಯ ಉಪ್ಪಾರಪೇಟೆ‌‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌. ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು‌ ಪ್ರಕರಣವನ್ನ ಸಿಸಿಬಿ ಹಸ್ತಾಂತರಿಸಿದ್ದರು. ಇದೀಗ ಮೂವರನ್ನು ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ಹೆಚ್ಚಿನ ತನಿಖೆ ನಡೆಸುತ್ತಿದೆ.

Last Updated : May 25, 2022, 10:34 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.