ETV Bharat / state

ಕಡಿಮೆ ಖರ್ಚಿನಲ್ಲಿ ಹಜ್ ಯಾತ್ರೆ ಭರವಸೆ: ನಂಬಿದವರಿಗೆ ದೇವರ ಹೆಸರಲ್ಲಿ ಪಂಗನಾಮ

ಆರೋಪಿ ಅದ್ನಾನ್ ಖಾನ್ ಶ್ಯಾಂಪುರ 1 ಮುಖ್ಯರಸ್ತೆಯಲ್ಲಿ ಅತಿಮಾ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಕಚೇರಿ ತೆರೆದಿದ್ದ. ಕಡಿಮೆ ಖರ್ಚಿನಲ್ಲಿ ಹಜ್ ಯಾತ್ರೆ ಹಾಗೂ ವಿದೇಶಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಪರಿಚಯಿಸಿಕೊಂಡಿದ್ದ. ವೀಸಾ, ಪಾಸ್‌ಪೋರ್ಟ್ ಹೊಂದಿರುವ ಒಬ್ಬ ಪ್ರವಾಸಿಗನಿಗೆ 38 ಸಾವಿರ ರೂ. ಖರ್ಚಾಗಲಿದೆ ಎಂದು ನಂಬಿಸಿದ್ದ.

ಆರೋಪಿ ಅದ್ನಾನ್
author img

By

Published : Oct 5, 2019, 8:28 AM IST

ಬೆಂಗಳೂರು : ಕಡಿಮೆ ಖರ್ಚಿನಲ್ಲಿ ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಲಕ್ಷಾಂತರ ರೂ. ಹಣ ಪಡೆದು ನೂರಾರು ಜನರಿಗೆ ವಂಚಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ನೀಲಸಂದ್ರದ ಸೈಯ್ಯದ್ ಎಂಬುವವರ ಕುಟುಂಬಕ್ಕೆ 1.62 ಲಕ್ಷ ರೂ. ವಂಚಿಸಿದ್ದಾರೆ. ಈ ಸಂಬಂಧ ಸೈಯ್ಯದ್ ನೀಡಿದ ದೂರಿನ ಮೇರೆಗೆ ಟ್ರಾವೆಲ್ಸ್ ಕಂಪನಿಯ ಮಾಲೀಕ ಅದ್ನಾನ್ ಮತ್ತು ಕಂಪನಿಯಲ್ಲಿ ಕೆಲಸಕ್ಕಿದ್ದ ರಿಯಾಜ್ ಖಾನ್, ಯೂಸೂಫ್ ಖಾನ್ ಹಾಗೂ ಇಮ್ದಾದ್ ಎಂಬುವವನ ವಿರುದ್ಧ ಕೆ.ಜಿ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಅದ್ನಾನ್ ಖಾನ್ ಶ್ಯಾಂಪುರ 1 ಮುಖ್ಯರಸ್ತೆಯಲ್ಲಿ ಅತಿಮಾ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಕಚೇರಿ ತೆರೆದಿದ್ದ. ಕಡಿಮೆ ಖರ್ಚಿನಲ್ಲಿ ಹಜ್ ಯಾತ್ರೆ ಹಾಗೂ ವಿದೇಶಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಪರಿಚಯಿಸಿಕೊಂಡಿದ್ದ. ವೀಸಾ, ಪಾಸ್‌ಪೋರ್ಟ್ ಹೊಂದಿರುವ ಒಬ್ಬ ಪ್ರವಾಸಿಗನಿಗೆ 38 ಸಾವಿರ ರೂ. ಖರ್ಚಾಗಲಿದೆ ಎಂದು ನಂಬಿಸಿದ್ದ.

ಇದನ್ನು ನಂಬಿದ್ದ ನೀಲಸಂದ್ರದ ಸೈಯ್ಯದ್ ಅವರು ಜೂ.23ರಂದು ಟ್ರಾವೆಲ್ಸ್ ಕಂಪನಿಯ ಕಚೇರಿಗೆ ಹೋಗಿ ಅದ್ನಾನ್ ಖಾನ್ನನ್ನು ಭೇಟಿ ಮಾಡಿ, ಕುಟುಂಬದ ಜತೆ ಉಮ್ರ ಯಾತ್ರೆ ಬಗ್ಗೆ ವಿಚಾರಿಸಿದ್ದರು. ಇದೇ ವೇಳೆ, ಸೆಪ್ಟೆಂಬರ್‌ನಲ್ಲಿ ಉಮ್ರ ಯಾತ್ರೆಗೆ ಕರೆದೊಯ್ಯುವುದಾಗಿ ತಿಳಿಸಿದ್ದ. ಕುಟುಂಬದ ನಾಲ್ವರಿಗೆ ಪ್ರವಾಸದ ಪ್ಯಾಕೇಜ್‌ನಲ್ಲಿ 1.62 ಲಕ್ಷ ರೂ. ಹಾಗೂ ಪಾಸ್‌ಪೋರ್ಟ್ ಪಡೆದುಕೊಂಡಿದ್ದ.

ಸೆ.15ರಂದು ಪ್ರವಾಸದ ಬಗ್ಗೆ ವಿಚಾರಿಸಲು ಕಚೇರಿ ಹೋದಾಗ ಬಾಗಿಲು ಬಂದ್ ಮಾಡಿಕೊಂಡು ಹೋಗಿದ್ದಾನೆ. ಲಕ್ಷಾಂತರ ರೂ. ಹಣ ಕೊಟ್ಟಿದ್ದ ನೂರಾರು ಜನರು, ಅದೇ ದಿನ ಕಚೇರಿ ಮುಂದೆ ಜಮಾಯಿಸಿದಾಗ ವಂಚನೆಯಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Intro:Body:
ಕಡಿಮೆ ಬೆಲೆಯಲ್ಲಿ ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲಕ್ಷಾಂತರ ರೂ. ಟೋಪಿ

ಬೆಂಗಳೂರು: ಕಡಿಮೆ ಖರ್ಚಿನಲ್ಲಿ ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಜನರನ್ನು ನಂಬಿಸಿದ್ದ ವ್ಯಕ್ತಿಯೊಬ್ಬ ಲಕ್ಷಾಂತರ ರೂ. ಪಡೆದು ನೂರಾರು ಜನರಿಗೆ ವಂಚಿಸಿದ್ದಾನೆ.
ನೀಲಸಂದ್ರದ ಸೈಯ್ಯದ್ ಎಂಬುವರ ಕುಟುಂಬಕ್ಕೆ 1.62 ಲಕ್ಷ ರೂ. ವಂಚಿಸಿದ್ದಾರೆ. ಈ ಸಂಬಂಧ ಸೈಯ್ಯದ್ ನೀಡಿದ ದೂರಿನ ಮೇರೆಗೆ ಟ್ರಾವೆಲ್ಸ್ ಕಂಪನಿಯ ಮಾಲೀಕ ಅದ್ನಾನ್ ಮತ್ತು ಕಂಪೆನಿಯಲ್ಲಿ ಕೆಲಸಕ್ಕಿದ್ದ ಖಾನ್, ರಿಯಾಜ್ ಖಾನ, ಯೂಸೂಫ್ ಖಾನ್ ಹಾಗೂ ಇಮ್ದಾದ್ ಎಂಬುವನ ವಿರುದ್ಧ ಕೆ.ಜಿ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಅದ್ನಾನ್ ಖಾನ್ ಶ್ಯಾಂಪುರ ಮುಖ್ಯರಸ್ತೆಯಲ್ಲಿ ಅತಿಮಾ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಕಚೇರಿ ತೆರೆದಿದ್ದ. ಕಡಿಮೆ ಖರ್ಚಿನಲ್ಲಿ ಹಜ್ ಯಾತ್ರೆ ಹಾಗೂ ವಿದೇಶಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಪರಿಚಯಿಸಿಕೊಂಡಿದ್ದ. ವೀಸಾ, ಪಾಸ್‌ಪೋರ್ಟ್ ಹೊಂದಿರುವ ಒಬ್ಬ ಪ್ರವಾಸಿಗನಿಗೆ 38 ಸಾವಿರ ರೂ. ಖರ್ಚಾಗಲಿದೆ ಎಂದು ನಂಬಿಸಿದ್ದ.
ಇದನ್ನು ನಂಬಿದ್ದ ನೀಲಸಂದ್ರದ ಸೈಯ್ಯದ್ ಅವರು ಜೂ.23ರಂದು ಟ್ರಾವೆಲ್ಸ್ ಕಂಪೆನಿಯ ಕಚೇರಿಗೆ ಹೋಗಿ ಅದ್ನಾನ್ ಖಾನ್ನನ್ನು ಭೇಟಿ ಮಾಡಿ, ಕುಟುಂಬದ ಜತೆ ಉಮ್ರ ಯಾತ್ರೆ ಬಗ್ಗೆ ವಿಚಾರಿಸಿದ್ದರು. ಇದೇ ವೇಳೆ ಸೆಪ್ಟೆಂಬರ್‌ನಲ್ಲಿ ಉಮ್ರ ಯಾತ್ರೆಗೆ ಕರೆದೊಯ್ಯುವುದಾಗಿ ತಿಳಿಸಿದ್ದ. ಕುಟುಂಬದ ನಾಲ್ವರಿಗೆ ಪ್ರವಾಸದ ಪ್ಯಾಕೇಜ್‌ನಲ್ಲಿ 1.62 ಲಕ್ಷ ರೂ. ಹಾಗೂ ಪಾಸ್‌ಪೋರ್ಟ್ ಪಡೆದುಕೊಂಡಿದ್ದ.
ಸೆ.15ರಂದು ಪ್ರವಾಸದ ಬಗ್ಗೆ ವಿಚಾರಿಸಲು ಕಚೇರಿ ಹೋದಾಗ ಬಾಗಿಲು ಬಂದ್ ಮಾಡಿಕೊಂಡು ಹೋಗಿದ್ದಾನೆ. ಲಕ್ಷಾಂತರ ರೂ. ಹಣ ಕೊಟ್ಟಿದ್ದ ನೂರಾರು ಜನರು, ಅದೇ ದಿನ ಕಚೇರಿ ಮುಂದೆ ಜಮಾಯಿಸಿದಾಗ ವಂಚನೆಯಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.