ETV Bharat / state

ಮ್ಯಾರಿಯೆಟ್​ ಹೋಟೆಲ್​ ನಿರ್ವಾಹಕರ ವಿರುದ್ಧ ಮಾಲೀಕರಿಂದ ವಂಚನೆಯ ದೂರು - ಸರ್ಕಾರಕ್ಕೆ ಜಿಎಸ್​​ಟಿ ಪಾವತಿಸದೆ ವಂಚನೆ

ಸಿಲಿಕಾನ್​ ಸಿಟಿಯಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಸರ್ಕಾರಕ್ಕೆ ಜಿಎಸ್​​ಟಿ ಪಾವತಿಸದೆ ವ್ಯವಹಾರ ನಡೆಸುತ್ತಿದ್ದ ಆರೋಪದಡಿ ಖಾಸಗಿ ಹೋಟೆಲ್ ಮಾಲೀಕರು ತಮ್ಮದೇ ಹೋಟೆಲ್ ನಿರ್ವಾಹಕರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರುವ ಪ್ರಕರಣ ನಡೆದಿದೆ.

ಬೆಂಗಳೂರಲ್ಲಿ ವಂಚನೆ ಪ್ರಕರಣ
fraud case in bangalore
author img

By

Published : Jan 1, 2021, 5:08 PM IST

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಜಿಎಸ್​​ಟಿ ಪಾವತಿಸದೆ ವ್ಯವಹಾರ ನಡೆಸುತ್ತಿದ್ದ ಆರೋಪದಡಿ ಖಾಸಗಿ ಹೋಟೆಲ್ ಮಾಲೀಕರೊಬ್ಬರು ತಮ್ಮದೇ ಹೋಟೆಲ್ ನಿರ್ವಹಣೆಯ ಜವಾಬ್ದಾರಿ ನೋಡಿಕೊಳ್ಳುತ್ತಿರುವವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜೆಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್ ಮಾಲೀಕ ಆದಿತ್ಯ ದೀಪಕ್ ರಹೇಜಾ ಎಂಬುವವರು ನೀಡಿದ ದೂರಿನ ಮೇರೆಗೆ‌ ಹೋಟೆಲ್ ನಿರ್ವಹಣೆ ಜವಾಬ್ದಾರಿ ಹೊತ್ತಿಕೊಂಡಿದ್ದ ರಾಜ್ ಮೆನನ್, ಕ್ರಿಸ್ಟಿನಾ ಚಾನ್, ನೀರಜ್ ಗೋವಿಲ್‌ ಸೇರಿದಂತೆ ಒಟ್ಟು 10 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2013ರಲ್ಲಿ ಹೋಟೆಲ್ ಆರಂಭಿಸಿದ್ದ ಮಾಲೀಕ ಆದಿತ್ಯ, ಹೋಟೆಲ್​ ನಿರ್ವಹಣೆಗಾಗಿ ಆರೋಪಿಗಳೊಂದಿಗೆ ವ್ಯವಹಾರ ನಡೆಸಿದ್ದರು. ಈ ದಿಸೆಯಲ್ಲಿ ಲಿಖಿತ ಒಪ್ಪಂದವಾಗಿತ್ತು‌‌. ಒಪ್ಪಂದದಂತೆ 2013-14 ರಿಂದ ಆರೋಪಿಗಳು ಹೋಟೆಲ್ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಕಳೆದ ಆರೇಳು ವರ್ಷಗಳಿಂದ ಜಿಎಸ್​ಟಿ ಪಾವತಿಸಿದ್ದ ಆರೋಪಿಗಳು 2020ರ ಸಾಲಿನಲ್ಲಿ ಸರ್ಕಾರಕ್ಕೆ‌ ಜಿಎಸ್​​ಟಿ ಪಾವತಿಸಿರಲಿಲ್ಲ. ಹೀಗಾಗಿ ಕಳೆದ‌ ಏಪ್ರಿಲ್​​ನಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಮಾಲೀಕರಿಗೆ ನೋಟಿಸ್​ ಬಂದಿತ್ತು. ನೋಟಿಸ್​ ಹಾಗೂ ವ್ಯವಹಾರದ ಅಂಕಿ ಅಂಶ ನೀಡುವಂತೆ ಆದಿತ್ಯ ಕೇಳಿದರೂ ಆರೋಪಿಗಳು ಯಾವುದೇ ಲೆಕ್ಕ ಕೊಟ್ಟಿರಲಿಲ್ಲ.

ಓದಿ: ಜನವರಿಯಲ್ಲಿ ಒಂದಲ್ಲ, 16 ದಿನ ರಜೆ.. ಬ್ಯಾಂಕ್‌ಗಳಿ​ಗೆ ತೆರಳುವ ಮೊದಲು ಡೇಟ್‌ಗಳು ನೆನಪಿರಲಿ!

ಅಷ್ಟೇ ಅಲ್ಲದೆ ಲೆಕ್ಕ ಪರಿಶೋಧನೆ ಮಾಡಲು ಸರಿಯಾದ ಮಾಹಿತಿ ನೀಡದೆ ಸತಾಯಿಸುತ್ತಿದ್ದರು‌‌. ಹೀಗಾಗಿ ಜಿಎಸ್​ಟಿ ಪಾವತಿಸದೆ ಅಗ್ರಿಮೆಂಟ್ ಷರತ್ತು ಉಲ್ಲಂಘಿಸುವುದಲ್ಲದೆ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್​ಟಿ ಹಣ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಹೋಟೆಲ್ ಮಾಲೀಕ ಆದಿತ್ಯ ದೀಪಕ್ ಪೊಲೀಸರಿಗೆ ದೂರು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.