ಬೆಂಗಳೂರು : ನಗರದಲ್ಲಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಹೆಸರು ಹೇಳಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಡಿಕೆಶಿ ಆಪ್ತನೆಂದು ಹೇಳಿಕೊಂಡು ಸುನಿಲ್ ಎಂಬಾತ ವೆಂಕಟೇಶ್ ಎಂಬವರನ್ನು ಪರಿಚಯಿಸಿಕೊಂಡಿದ್ದಾನೆ. ತಾನು ಡಿಕೆಶಿ ಬಳಿ ಗನ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದೇನೆ. ಹೀಗಾಗಿ ಡಿಕೆಶಿ ಅವರಿಗೆ ಆಪ್ತನಾಗಿದ್ದು, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 4 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.
![fraud-claiming-to-be-close-to-dk-sivakumar](https://etvbharatimages.akamaized.net/etvbharat/prod-images/4973388_295_4973388_1572995724850.png)
ಇದನ್ನು ನಂಬಿದ್ದ ವೆಂಕಟೇಶ್, ಸರ್ಕಾರಿ ಕೆಲಸ ಸಿಗುತ್ತೆ ಅನ್ನೋ ಆಸೆಯಲ್ಲಿ ಸುನೀಲ್ಗೆ ಮೊದಲು 25 ಸಾವಿರ ಹಾಗೂ ಎರಡನೇ ಬಾರಿ 50 ಸಾವಿರ ರೂ. ಗಳನ್ನು ಎರಡು ಹಂತದಲ್ಲಿ ನೀಡಿದ್ದಾನೆ. ಮತ್ತೆ ಸಂಪರ್ಕಕ್ಕೆ ಹೋದಾಗ ಹಣ ಪಡೆದ ವ್ಯಕ್ತಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಸದ್ಯ ವೆಂಕಟೇಶ್ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆದಿದೆ.
![fraud-claiming-to-be-close-to-dk-sivakumar](https://etvbharatimages.akamaized.net/etvbharat/prod-images/4973388_1036_4973388_1572995703250.png)