ETV Bharat / state

ಮಕ್ಕಳನ್ನು ದತ್ತು ಪಡೆಯುವ ಮುನ್ನ ಎಚ್ಚರ.. ಈ ನೆಪದಲ್ಲಿ ನಡೆದಿದೆ ಸುಲಿಗೆ ದಂಧೆ! - ಮಗನನ್ನು ದತ್ತು ಕೊಡೋ ನೆಪದಲ್ಲಿ ಹಣ ಸುಲಿಗೆ

ಮಗನನ್ನು ದತ್ತು ಕೊಡೋ ನೆಪದಲ್ಲಿ ಹಣ ಸುಲಿಗೆಗೆ ಯತ್ನಿಸಿರುವ ಘಟನೆ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಮಹಿಳೆಗೆ ಇದೇ ದಂಧೆಯಾಗಿದೆ ಎನ್ನಲಾಗ್ತಿದೆ.

fraud case in the name of child adoption process
ಮಗನನ್ನು ದತ್ತು ಕೊಡೋ ನೆಪದಲ್ಲಿ ಹಣ ಸುಲಿಗೆ ಯತ್ನ!
author img

By

Published : Jul 11, 2021, 1:31 PM IST

ಬೆಂಗಳೂರು: ಸಮಾಜದಲ್ಲಿ ಅದೆಷ್ಟೋ‌ ದಂಪತಿ‌ ತಮಗೆ ಸಂತಾನವಾಗಿಲ್ಲ ಅಂತ ಮಗುವನ್ನ ದತ್ತು ಪಡೆಯುತ್ತಾರೆ. ಇನ್ನೂ ಕೆಲವರು ಅನಾಥ ಮಕ್ಕಳ ಒಳಿತಿಗಾಗಿ ಮಾನವೀಯತೆ ದೃಷ್ಟಿಯಿಂದ ಮಕ್ಕಳನ್ನು ದತ್ತು ಪಡೆಯುತ್ತಾರೆ. ಆದ್ರೆ ಮಗುವನ್ನು ದತ್ತು ಪಡೆಯೋ ಕುಟುಂಬದವರು ಎಚ್ಚರವಾಗಿರಬೇಕು.‌‌ ಯಾಕಂದ್ರೆ ಮಕ್ಕಳ‌ನ್ನು ದತ್ತು ಕೊಡುವ‌ ನೆಪದಲ್ಲಿ ಹಣ‌ ಸುಲಿಗೆ ಯತ್ನ‌ ನಡೆಯುತ್ತಿದೆ.‌

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೇ ಒಂದು ಹಣ ಸುಲಿಗೆ ಮಾಡಿರುವ ಘಟನೆ ನಡೆದಿದೆ.‌ ಲತಾ ಎನ್ನುವವರು ತನಗೆ ಕ್ಯಾನ್ಸರ್ ಇದೆ, ಹಾಗಾಗಿ ಮಗನನ್ನು ಸಾಕಲಾಗದೆ ದತ್ತು ನೀಡುವುದಾಗಿ ಹೇಳಿ, ತನ್ನ 9 ವರ್ಷದ ಮಗನನ್ನು ದತ್ತು ನೀಡಲು ಮುಂದಾಗಿದ್ದರು. ಕಸ್ತೂರಿ ಎನ್ನುವವರಿಗೆ ತನ್ನ ಮಗನನ್ನು ದತ್ತು ನೀಡಲು ಲತಾ ಮುಂದಾಗಿದ್ದರು ಎನ್ನಲಾಗ್ತಿದೆ.

ಅದೇ ರೀತಿ ಮಗನನ್ನು ಕಸ್ತೂರಿ ಮನೆಯಲ್ಲಿ ಬಿಟ್ಟು ಹೋಗಿದ್ದರು. ನಾಲ್ಕು ತಿಂಗಳ ಬಳಿಕ ದತ್ತು ಸ್ವೀಕಾರ ಪ್ರಕ್ರಿಯೆ ಮುಗಿಸುವುದಾಗಿ ಲತಾ ತಿಳಿಸಿದ್ದರು. ಇನ್ನೊಂದೆಡೆ ಮಗುವನ್ನು ತನ್ನ ಸ್ವಂತ ಮಗನಂತೆ ದತ್ತು ಪಡೆದ ಕಸ್ತೂರಿ ನೋಡಿಕೊಂಡಿದ್ದರು.‌ ಮೂರು ತಿಂಗಳ ಬಳಿಕ ಇದ್ದಕ್ಕಿದ್ದಂತೆ 9 ವರ್ಷದ ಬಾಲಕ ಕಣ್ಮರೆಯಾಗಿದ್ದು, ಮನೆಯಲ್ಲಿದ್ದ ತನ್ನ ದಾಖಲಾತಿ ಸಮೇತ ಬಾಲಕ ಪರಾರಿಯಾಗಿದ್ದ. ಬಾಲಕನನ್ನು ಎಷ್ಟು ಹುಡುಕಿದ್ರೂ ಎಲ್ಲೂ ಸಿಗದ ಹಿನ್ನೆಲೆ ಕಸ್ತೂರಿ ದೂರು ನೀಡಿದ್ದರು. ಜೊತೆಗೆ ಬಾಲಕ ಕಾಣೆಯಾದ ವಿಚಾರನ್ನು ತಾಯಿ ಲತಾಗೂ ಸಹ ತಿಳಿಸಿದ್ದರು.

ಇದನ್ನೂ ಓದಿ: ಬೈಕ್​ನಲ್ಲಿ ಸ್ಫೋಟಕ ವಸ್ತು ಸಾಗಿಸುತ್ತಿದ್ದ ವ್ಯಕ್ತಿ ಅಂದರ್.. ಇಬ್ಬರು ಪರಾರಿ

15 ದಿನಗಳ ಬಳಿಕ ತಾಯಿ ಲತಾ ಬಳಿ ಬಾಲಕ ಪತ್ತೆಯಾಗಿದ್ದ. ಬಾಲಕ ಪತ್ತೆಯಾಗುತ್ತಿದ್ದಂತೆ ಲತಾಳು ದತ್ತು‌ ಪಡೆದ ಕಸ್ತೂರಿಗೆ ಹಣದ ಡಿಮ್ಯಾಂಡ್ ಇಟ್ಟಿದ್ದಾರೆ.‌ ಮೊದಲಿಗೆ 20 ಸಾವಿರ ಹಣ ನೀಡಬೇಕೆಂದು ಕಸ್ತೂರಿಗೆ ಲತಾ ಡಿಮ್ಯಾಂಡ್ ಮಾಡಿದ್ದರು. ಈ ಬಗ್ಗೆ ದೂರು ನೀಡಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಸ್ತೂರಿ ದೂರು ನೀಡಿದ್ದು, ಹೈಡ್ರಾಮಾನೇ ನಡೆದಿದೆ. ಇಬ್ಬರನ್ನು ಕೂರಿಸಿ ಮಾಹಿತಿ ಪಡೆದ ಪೊಲೀಸರಿಗೆ ದೊಡ್ಡ ಶಾಕ್ ಕಾದಿತ್ತು.

ವಿಚಾರಣೆ ವೇಳೆ ಲತಾ ಇದೇ ರೀತಿ ಮೂರು ಕಡೆ ಮಾಡಿರುವ ಪ್ರಕರಣಗಳು ಪತ್ತೆಯಾಗಿವೆ. ಮಗನನ್ನು ದತ್ತು ನೀಡುವುದಾಗಿ ಹೇಳಿ ಬಳಿಕ ವಾಪಸ್​ ಮನೆಯಿಂದ ಓಡಿ ಬರುವಂತೆ ಮಗನಿಗೆ ಸೂಚನೆ ನೀಡುತ್ತಿದ್ದಳಂತ ಈ ಚಾಲಾಕಿ ಲತಾ. ತಾಯಿಯ ಮಾತಿನಂತೆ 9 ವರ್ಷದ ಬಾಲಕ ನಡೆದುಕೊಳ್ಳುತ್ತಿದ್ದ.

ಲತಾಳ ಸಂಪೂರ್ಣ ಮಾಹಿತಿ ಪಡೆದ ಅನ್ನಪೂರ್ಣೇಶ್ವರಿನಗರ ಪೊಲೀಸರು ಆ ಬಾಲಕನ‌ ಒಳಿತಿಗಾಗಿ ಲತಾಳಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.