ETV Bharat / state

₹500 ಕೋಟಿ ವಂಚನೆ ಪ್ರಕರಣ: ಕರಣ್‌ ಗ್ರೂಪ್ ಬಿಲ್ಡರ್ಸ್‌ & ಡೆವಲಪರ್ಸ್‌ ಮುಖ್ಯಸ್ಥರ ಬಂಧಿಸಿದ ಇಡಿ - ಮಂಗಳೂರು

ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಕರಣ್‌ ಬಿಲ್ಡರ್ಸ್‌ ಮತ್ತು ಡೆವಲಪರ್ಸ್‌ ಮುಖ್ಯಸ್ಥರನ್ನು ಇಡಿ ಬಂಧಿಸಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆದಿದೆ.

Enforcement Directorate
ಜಾರಿ ನಿರ್ದೇಶನಾಲಯ
author img

By

Published : Jan 13, 2023, 8:06 AM IST

ಬೆಂಗಳೂರು/ಮಂಗಳೂರು: ಬಹುಕೋಟಿ ವಂಚನೆ ಮತ್ತು ಅಕ್ರಮ ಹಣಕಾಸು ವಹಿವಾಟು ಆರೋಪದಡಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಮುಂಬೈ ಮೂಲದ ಕರಣ್ ಗ್ರೂಪ್ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ ಕಂಪನಿಯ ಮುಖ್ಯಸ್ಥ ಮಹೇಶ್ ಬಿ. ಓಝ ಬಂಧಿತರು. ರಿಯಲ್ ಎಸ್ಟೇಟ್ ಉದ್ಯಮಕ್ಕಾಗಿ ಹಲವರಿಂದ 500 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಗಂಭೀರ ಆರೋಪ ಇವರ ಮೇಲಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಶ್‌ರನ್ನು ಬಂಧಿಸಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

  • ED Bangaluru has arrested Mahesh B Ojha head of M/s Karan Group Builders and Developers, Mumbai on 10.01.2023 under the provisions of PMLA, 2002 in a fraud and cheating case involving amount more than Rs.500 crore and PMLA Special Court has granted 10 days ED custody.

    — ED (@dir_ed) January 12, 2023 " class="align-text-top noRightClick twitterSection" data=" ">

ಇವರು ಕರಣ್ ಗ್ರೂಪ್ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ ಹೆಸರಿನಲ್ಲಿ ಹಲವರಿಂದ ವಿವಿಧ ಯೋಜನೆಗೆ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಹೂಡಿಕೆ ಹಣವನ್ನು ಹೂಡಿಕೆ ಮಾಡಿರುವುದಾಗಿ ಮತ್ತು ಕಮಿಷನ್ ನೀಡಿರುವುದಾಗಿಯೂ ದಾಖಲೆ ಸೃಷ್ಟಿಸಿದ್ದರು. ಈ ಬಗ್ಗೆ ಕರ್ನಾಟಕದ ವಿವಿಧೆಡೆ ಹಲವು ಎಫ್ಐಆರ್ ದಾಖಲಾಗಿದ್ದವು. ಈ ಮುಖೇನ ಒಟ್ಟಾರೆ ಅಂದಾಜು 526 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಸಿಐಡಿ ಅಧಿಕಾರಿಗಳು ಮಹೇಶ್‌ರನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ತನಿಖೆಯ ವೇಳೆ ಆರೋಪಿ ಮಹೇಶ್ ಬೋಪಕುಮಾರ್ ಓಝ ಹೆಸರಿನಲ್ಲಿ ಬೇರೆ ಕಂಪನಿಯಲ್ಲಿ 121.5 ಕೋಟಿ ರೂ. ಹೂಡಿಕೆ ಮಾಡಿ ಮತ್ತೊಂದು ಕಂಪನಿ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು. ಅಕ್ರಮ ಹಣಕಾಸು ವಹಿವಾಟು ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಶ್‌ನನ್ನು ಬಂಧಿಸಲಾಗಿದೆ ಎಂದು ಇಡಿ ಮಾಹಿತಿ ನೀಡಿದೆ.

  • The Competent Authority order dated 6th January 2023 has confirmed the seizure order u/s 37A of FEMA of the immovable properties valuing at Rs. 17.34 Crore in the case of K. Mohammed Haris of Mangaluru.

ಮುಕ್ಕ ಗ್ರೂಪ್ ಆಫ್ ಕಂಪೆನೀಸ್‌ನ ಮಾಲಕನ ಸ್ಥಿರಾಸ್ತಿ ಜಪ್ತಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಹಿನ್ನೆಲೆಯಲ್ಲಿ ಮುಕ್ಕ ಗ್ರೂಪ್ ಆಫ್ ಕಂಪೆನೀಸ್‌ನ ಮಾಲಕ ಮೊಹಮ್ಮದ್ ಹ್ಯಾರಿಸ್ ಅವರ ಹೆಸರಿನಲ್ಲಿದ್ದ ಸ್ಥಿರಾಸ್ತಿಗಳನ್ನು ಇಡಿ ವಶಪಡಿಸಿಕೊಂಡಿದೆ. ಮೊಹಮ್ಮದ್ ಹ್ಯಾರಿಸ್‌ಗೆ ಸೇರಿರುವ 17.34 ಕೋಟಿ ರೂ. ಮೌಲ್ಯದ ಮಂಗಳೂರಿನಲ್ಲಿರುವ ಎರಡು ಫ್ಲ್ಯಾಟ್‌ಗಳು ಮತ್ತು ಒಂದು ಕೈಗಾರಿಕಾ ನಿವೇಶನವನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ. ಮಾತ್ರವಲ್ಲದೇ, 'ಫೆಮಾ' ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಮೊಹಮ್ಮದ್ ಹ್ಯಾರಿಸ್ ಫೆಮಾ ನಿಬಂಧನೆಗಳನ್ನು ಉಲ್ಲಂಘಿಸಿ ವಿದೇಶದಲ್ಲಿ ಸ್ಥಿರಾಸ್ತಿ, ವ್ಯಾಪಾರ ಘಟಕಗಳನ್ನು ಹೊಂದಿದ್ದರು. ಈ ನಿಯಮ ಉಲ್ಲಂಘಿಸಿ ವಿದೇಶಿ ವಿನಿಮಯ ವ್ಯವಹಾರಗಳನ್ನು ಮಾಡಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಇಡಿ ದಾಳಿ ನಡೆಸಿತ್ತು. ತನಿಖೆಯ ವೇಳೆ ಹ್ಯಾರಿಸ್ ಯುಎಇಯಲ್ಲಿ ಫ್ಲಾಟ್‌ ಹೊಂದಿರುವುದು, ವಿದೇಶಿ ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಮತ್ತು ಯುಎಇಯಲ್ಲಿ ವಿದೇಶಿ ವ್ಯಾಪಾರ ಘಟಕದಲ್ಲಿ ಹೂಡಿಕೆ ಹೊಂದಿರುವುದು ಬೆಳಕಿಗೆ ಬಂದಿತ್ತು. ಅದರ ಒಟ್ಟು ಆಸ್ತಿ ಭಾರತೀಯ ಲೆಕ್ಕಾಚಾರದ ಪ್ರಕಾರ 17.34 ಕೋಟಿ ರು. ಆಗಿದೆ. ಇದು, ಫೆಮಾ ಕಾಯ್ದೆಯ ಸೆ. 4ರ ಅನ್ವಯ ಕಾನೂನು ಉಲ್ಲಂಘನೆಯಾಗಿದೆ. ಕಾಯ್ದೆ ಪ್ರಕಾರ ವಿದೇಶದಲ್ಲಿ ಮಾಡಿದ ನಿಯಮ ಉಲ್ಲಂಘನೆಯ ಮೊತ್ತದ ಆಸ್ತಿಯನ್ನು ಭಾರತದೊಳಗೆ ವಶಪಡಿಸಿಕೊಳ್ಳಲು ಇಡಿಗೆ ಅಧಿಕಾರವಿರುವಿದ್ದು ಈ ಸ್ಥಿರಾಸ್ತಿ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ₹158 ಕೋಟಿ ಭ್ರಷ್ಟಾಚಾರ ಆರೋಪ: ಮಾಜಿ ಸಚಿವನಿಗೆ ಇಡಿ, ಐಟಿ ಡಬಲ್​ ಶಾಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.