ETV Bharat / state

ಸಚಿವ ಜಾರ್ಜ್​ ಜೊತೆ ತೆಗೆಸಿಕೊಂಡಿದ್ದ ಪೋಟೋ ತೋರಿಸಿ ವಂಚನೆ: ಆರೋಪಿ ಅರೆಸ್ಟ್

ನನಗೆ ಪ್ರಭಾವಿ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ಗೊತ್ತು ಎಂದು ನಂಬಿಸಿ ಅಮಾಯಕರೊಬ್ಬರಿಗೆ 50 ಸಾವಿರಕ್ಕೆ ಆರೋಪಿ ಡಿಮ್ಯಾಂಡ್ ಮಾಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ
author img

By

Published : Jun 8, 2019, 5:20 PM IST

ಬೆಂಗಳೂರು: ಸಚಿವ ಕೆ.ಜೆ.ಜಾರ್ಜ್ ಜೊತೆಗೆ ತೆಗೆಸಿಕೊಂಡಿದ್ದ ಪೋಟೋಗಳನ್ನು ತೋರಿಸಿ ಅಮಾಯಕರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುಧಾಕರ್ ಕಣ್ಣನ್ ಎಂಬಾತನೇ ವಂಚಕನಾಗಿದ್ದು, ಸಚಿವರೊಂದಿಗೆ ಈ ಹಿಂದೆ ಸಮಾರಂಭವೊಂದರಲ್ಲಿ ತೆಗೆಸಿಕೊಂಡಿದ್ದ ಪೋಟೋಗಳನ್ನು ನಾಗರಾಜ್ ಎಂಬಾತನಿಗೆ ತೋರಿಸಿ ನಿಮ್ಮ ಮಗನಿಗೆ ಕ್ರಿಶ್ಚಿಯನ್ ಮಿಷನರಿ ಕಾಲೇಜಲ್ಲಿ ಡೊನೇಷನ್ ಇಲ್ಲದೇ ಸೀಟು ಕೊಡಿಸ್ತೀನಿ. ನನಗೆ ಪ್ರಭಾವಿ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ಗೊತ್ತು ಎಂದು ನಂಬಿಸಿ 50 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದಾನೆ‌.

ಸೀಟು ಕೊಡಿಸದೆ ಇದ್ದಾಗ, ನಿಮ್ಮ ಮಗನ ಸೀಟಿಗಾಗಿ ನಾನು ಸಾಕಷ್ಟು ಓಡಾಡಿದ್ದೇನೆ. ಕನಿಷ್ಠ 25,000 ರೂ. ನೀಡಿ ಎಂದಿದ್ದಾನೆ‌. ಕೊಡಲು ನಿರಾಕರಿಸಿದಾಗ ಮನೆಗೆ ಬಂದು 26 ಗ್ರಾಂ ಚಿನ್ನದ ಸರ ಎಗರಿಸಿಕೊಂಡು ಹೋಗಿದ್ದಾನೆ‌ ಎಂದು ಆರೋಪಿಸಿರುವ ನಾಗರಾಜ್, ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ಹಳೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬಯಲಿಗೆ ಬಂದಿದೆ.

Intro:Body:ಸಚಿವ ಜಾರ್ಜ್ ತೆಗೆಸಿಕೊಂಡಿದ್ದ ಪೋಟೊ ತೋರಿಸಿ ಅಮಾಯಕರಿಗೆ ವಂಚಿಸುತ್ತಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಪಾನ್ ಕಾರ್ಡ್ ವಿಚಾರಕ್ಕೆ ಪರಿಚಿತನಾದವನೊಬ್ಬ ಸಚಿವ ಕೆ.ಜೆ ಜಾರ್ಜ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋಗಳನ್ನ ತೋರಿಸಿ ನಿಮ್ಮ ಮಗನಿಗೆ ಖಾಸಗಿ ಕಾಲೇಜಿನಲ್ಲಿ ಸೀಟು ಕೊಡಿಸ್ತೀನಿ ಅಂತಾ ಅಮಾಯಕನನ್ನ ನಂಬಿಸಿ ವಂಚಿಸಿದ್ದಾನೆ.
ಸುಧಾಕರ್ ಕಣ್ಣನ್ ಎಂಬಾತನೇ ವಂಚಕನಾಗಿದ್ದು ಸಚಿವರೊಂದಿಗೆ ಈ ಹಿಂದೆ ಸಮಾರಂಭವೊಂದರಲ್ಲಿ ತೆಗೆಸಿಕೊಂಡಿದ್ದ ಪೋಟೋಗಳನ್ನ ನಾಗರಾಜ್ ಎಂಬಾತನಿಗೆ ತೋರಿಸಿ ನಿಮ್ಮ ಮಗನಿಗೆ ಕ್ರಿಶ್ವಿಯನ್ ಮಿಷನರಿ ಕಾಲೇಜುಗಳಲ್ಲಿ ಡೊನೆಷನ್ ಇಲ್ಲದೇ ಸೀಟು ಕೊಡಿಸ್ತೀನಿ, ನನಗೆ ಪ್ರಭಾವಿ ಸಚಿವರು ಪೋಲಿಸ್ ಅಧಿಕಾರಿಗಳು ಗೊತ್ತು ಅಂತಾ ನಂಬಿಸಿ 50 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದಾನೆ‌.
ಸೀಟು ಕೊಡಿಸದೇ ಇದ್ದಾಗ ಹಣ ನೀಡದ್ದಕ್ಕೆ ನಿಮ್ಮ ಮಗನ ಸೀಟಿಗಾಗಿ ನಾನು ಸಾಕಷ್ಟು ಓಡಾಡಿದ್ದೇನೆ ಕನಿಷ್ಠ 25,000 ರೂ ನೀಡಿ ಎಂದಿದ್ದಾನೆ‌. ಕೊಡಲು ನಿರಾಕರಿಸಿದಾಗ ಮನೆಗೆ ಬಂದು 26 ಗ್ರಾಂ ಚಿನ್ನದ ಸರ ಎಗರಿಸಿಕೊಂಡು ಹೋಗಿದ್ದಾನೆ‌ ಅಂತಾ ಆರೋಪಿಸಿರುವ ನಾಗರಾಜ್ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಆರೋಪಿಯನ್ನ ಬಂಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿ ವಿಚಾರಣೆ ವೇಳೆ ಹಳೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನ ಪತ್ತೆ ಹಚ್ಚಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.