ETV Bharat / state

ಆ್ಯಪಲ್‌ನ ಪಾಲುದಾರ ಸಂಸ್ಥೆ ಫಾಕ್ಸ್‌ಕಾನ್‌ ಟೆಕ್ನಾಲಜಿ ಗ್ರೂಪ್‌ ಅಧ್ಯಕ್ಷರಿಂದ ಸಿಎಂ ಬೊಮ್ಮಾಯಿಗೆ ಮೆಚ್ಚುಗೆ ಪತ್ರ - ಈಟಿವಿ ಭಾರತ ಕನ್ನಡ

ಬೆಂಗಳೂರು ಸಮೀಪ ಐಫೋನ್​ ಉತ್ಪಾದನಾ ಘಟಕ ಸ್ಥಾಪನೆ ವಿಚಾರ - ಫಾಕ್ಸ್‌ಕಾನ್‌ ಟೆಕ್ನಾಲಜಿ ಗ್ರೂಪ್‌ ಅಧ್ಯಕ್ಷರಿಂದ ಸಿಎಂ ಬೊಮ್ಮಾಯಿಗೆ ಪತ್ರ

foxconn-chairman-young-lie-wrote-letter-to-cm-bommai
ಆ್ಯಪಲ್‌ನ ಪಾಲುದಾರ ಸಂಸ್ಥೆ ಫಾಕ್ಸ್‌ಕಾನ್‌ ಟೆಕ್ನಾಲಜಿ ಗ್ರೂಪ್‌ ಅಧ್ಯಕ್ಷರಿಂದ ಸಿಎಂ ಬೊಮ್ಮಾಯಿಗೆ ಮೆಚ್ಚುಗೆ ಪತ್ರ
author img

By

Published : Mar 6, 2023, 6:55 PM IST

ಬೆಂಗಳೂರು : ಆ್ಯಪಲ್‌ನ ಪಾಲುದಾರ ಸಂಸ್ಥೆ ಫಾಕ್ಸ್‌ಕಾನ್‌ ಟೆಕ್ನಾಲಜಿ ಗ್ರೂಪ್‌ ಬೆಂಗಳೂರು ಸಮೀಪ ಐಫೋನ್ ಉತ್ಪಾದನಾ ಘಟಕ ಸ್ಥಾಪನೆ ಬಗ್ಗೆ ಉಂಟಾದ ಗೊಂದಲ ಸಂಬಂಧ ಫಾಕ್ಸ್‌ಕಾನ್‌ ಟೆಕ್ನಾಲಜಿ ಗ್ರೂಪ್‌ ಅಧ್ಯಕ್ಷ ಯಂಗ್ ಲಿಯು ಸಿಎಂಗೆ ಮೆಚ್ಚುಗೆ ಪತ್ರ ಬರೆದಿದ್ದಾರೆ. ಇಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕ ಸ್ಥಾಪನೆಗೆ ಪೂರಕವಾಗಿ ಕರ್ನಾಟಕ ಸರ್ಕಾರದ ಜೊತೆ ನಿಕಟ ಸಂಪರ್ಕದಲ್ಲಿರಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿಗೆ ಬರೆದ ಪತ್ರದಲ್ಲಿ ಬೆಂಗಳೂರು ಹೊರವಲಯದಲ್ಲಿ ಘಟಕ ಸ್ಥಾಪಿಸುವ ಕುರಿತ ರಾಜ್ಯ ಸರ್ಕಾರದ ಜೊತೆಗಿನ ಒಪ್ಪಂದದ ಮೇಲೆ ಕೆಲಸ ಮಾಡಲು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಬೆಂಗಳೂರಲ್ಲಿ 'ಪ್ರೊಜೆಕ್ಟ್ ಎಲಿಪೇಂಟ್' ಜಾರಿಯ ಸಫಲತೆ ಖಾತ್ರಿಗೊಳಿಸುವ ನಿಟ್ಟಿನಲ್ಲಿ ನಮ್ಮ ತಂಡ ನಿಮ್ಮ ಸರ್ಕಾರದ ಜೊತೆ ನಿಕಟ ಸಂಪರ್ಕದಲ್ಲಿರಲಿದ್ದೇವೆ. ಈ ಯೋಜನೆ ನಮ್ಮ ಇತರ ಹಲವು ಯೋಜನೆಗಳಾದ ಮೆಕ್ಯಾನಿಕಲ್, ವಿದ್ಯುತ್ ಚಾಲಿತ ವಾಹನ, ಐಸಿ ಡಿಸೈನ್, ಸೆಮಿ‌ಕಂಡಕ್ಟರ್ ಕ್ಷೇತ್ರದಲ್ಲಿ ಸಂಭಾವ್ಯ ಬಂಡವಾಳ ಹೂಡಿಕೆ ತಾಣವಾಗಿ ಕರ್ನಾಟಕವನ್ನು ಪರಿಗಣಿಸುವಲ್ಲಿ ಸದೃಢ ಅಡಿಪಾಯ ಹಾಕುವ ವಿಶ್ವಾಸ ಇದೆ ಎಂದು ಬರೆದಿದ್ದಾರೆ.

ಬೆಂಗಳೂರಿನ ನಮ್ಮ ಭೇಟಿ ಯಶಸ್ವಿಯಾಗಿಸುವಂತೆ ಮಾಡಿದ ನಿಮ್ಮ ತಂಡ ಮತ್ತು ನಿಮಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ನಮ್ಮನ್ನು ಸಚಿವ ಸಿ‌.ಎನ್.ಅಶ್ವತ್ಥ್ ನಾರಾಯಣ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ವಿಶ್ವದರ್ಜೆಯ ಟರ್ಮಿನಲ್ 2ನ್ನು ವೀಕ್ಷಿಸಿದ್ದೆವು. ವಿಮಾನ ನಿಲ್ದಾಣದಲ್ಲಿನ ಕಾರ್ಗೋ ಮೂಲಭೂತ ಸೌಕರ್ಯ ಮತ್ತು ವ್ಯವಸ್ಥೆ ಬಗ್ಗೆನೂ ಬಿಐಎಎಲ್ ಅಧಿಕಾರಿಗಳು ವಿಸ್ತೃತವಾಗಿ ವಿವರಣೆ ನೀಡಿದ್ದರು. ಈ ಕಾರ್ಗೋ ವ್ಯವಸ್ಥೆ ನಮ್ಮ ಕಾರ್ಯಚಟುವಟಿಕೆ ಮತ್ತು ಮೆಟ್ರಿಕ್ಸ್ ಮೇಲೆ ಮಹತ್ವದ ಪರಿಣಾಮ‌ ಬೀರಲಿದೆ. ನಮ್ಮ ಹಲವು ಉತ್ಪನ್ನಗಳು ಗಣನೀಯ ಪ್ರಮಾಣದಲ್ಲಿ ವಿಮಾ‌ನ ಸಂಚಾರದ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.

ಬಳಿಕ ನಾವು ದೇವನಹಳ್ಳಿ ಬಳಿಯ ಪ್ರಸ್ತಾಪಿತ ಪ್ರದೇಶದ ಸೈಟ್ ನೋಡಲು ಹೋಗಿದ್ದೆವು. ಅದಾದ ಮೇಲೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ನೇತೃತ್ವದ ಹಿರಿಯ ಅಧಿಕಾರಿಗಳು ವಿಧಾನಸೌಧದಲ್ಲಿ 'ಪ್ರೊಜೆಕ್ಟ್ ಎಲಿಪೇಂಟ್' ನ ಯಶಸ್ವಿಯ ಬಗ್ಗೆ ವಿಚಾರ ಮಂಡನೆ ಮಾಡಿದರು. ಮೂಲಸೌಕರ್ಯ ಸನ್ನದ್ಧತೆಯ ವೇಳಾಪಟ್ಟಿ, ಪ್ರತಿಭೆಗಳ ನೇಮಕಾತಿ, ಕೌಶಲ್ಯ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರದ ಪ್ರೋತ್ಸಾಹ, ಯೋಜನೆಗಾಗಿ ಮೀಸಲಿಟ್ಟ ಆ ಪ್ರದೇಶದ ಸುತ್ತು ಇರುವ ಸಾಮಾಜಿಕ ಮೂಲಸೌಕರ್ಯ ಲಭ್ಯತೆ ಬಹಳ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಅಂತಿಮವಾಗಿ ನಿಮ್ಮ ಜೊತೆ ವಿಸ್ತೃತವಾಗಿ ಸಭೆಗಳನ್ನು ನಡೆಸಿದ್ದೇವೆ. ಕರ್ನಾಟಕವನ್ನು ಜಾಗತಿಕವಾಗಿ ವಿಶೇಷವಾಗಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಕ್ಷೇತ್ರದಲ್ಲಿ ಆಕರ್ಷಕ ಬಂಡವಾಳ ಹೂಡಿಕೆ ತಾಣವನ್ನಾಗಿ ಮಾಡುವಲ್ಲಿ ನಿಮ್ಮ ದೃಷ್ಟಿಕೋನ ಶ್ಲಾಘನೀಯವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಐಫೋನ್‌ ಉತ್ಪಾದನೆ ಹೆಚ್ಚಿಸಲು ಬೆಂಗಳೂರು ಸಮೀಪದಲ್ಲಿ ಹೊಸ ಘಟಕವನ್ನು ಫಾಕ್ಸ್‌ಕಾನ್‌ ಸ್ಥಾಪಿಸಲು ತೀರ್ಮಾನಿಸಿದೆ. ಇದಕ್ಕಾಗಿ ಸುಮಾರು 700 ದಶಲಕ್ಷ ಡಾಲರ್‌ (5,724 ಕೋಟಿ ರೂ.) ಹೂಡಿಕೆ ಮಾಡಲಿದ್ದು, ಸುಮಾರು 1 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಈ ಸಂಬಂಧ ಒಪ್ಪಂದವಾಗಿದೆ,'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಟ್ವೀಟ್‌ ಮಾಡಿದ್ದರು.

ಆದರೆ, ಈ ವರದಿಗಳನ್ನು ಫಾಕ್ಸ್‌ಕಾನ್‌ ತಳ್ಳಿಹಾಕಿದ್ದು, ಈ ಸಂಬಂಧ ತಾನು ಕರ್ನಾಟಕ ಸರಕಾರದೊಂದಿಗೆ ಯಾವುದೇ ಖಚಿತ ಮತ್ತು ನಿರ್ಣಾಯಕ ಒಪ್ಪಂದಗಳನ್ನು ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದು ಪ್ರತಿಪಕ್ಷಗಳ ವ್ಯಾಪಕ ಟೀಕೆಗಳಿಗೆ ಗುರಿಯಾಗಿತ್ತು. ತೈವಾನಿನ ಪ್ರಮುಖ ತಂತ್ರಜ್ಞಾನ ಸಂಸ್ಥೆಯಾದ ಫಾಕ್ಸ್‌ಕಾನ್‌ನ ಅಧ್ಯಕ್ಷ ಮತ್ತು ಸಿಇಒ ಯಂಗ್‌ ಲಿಯು ಭಾರತ ಪ್ರವಾಸದಲ್ಲಿದ್ದು, ಕರ್ನಾಟಕಕ್ಕೂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನೂತನ ಘಟಕ ಸ್ಥಾಪನೆ ಕುರಿತಾಗಿ ಯಾವುದೇ ಖಚಿತ ಒಪ್ಪಂದಗಳು ಅಥವಾ ಮಾತುಕತೆ ಆಗಿಲ್ಲ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿತ್ತು. ಮಾಧ್ಯಮಗಳಲ್ಲಿ ಪ್ರಕಟವಾದ ಉದ್ಯೋಗ ಸೃಷ್ಟಿ ಮತ್ತು ಬಂಡವಾಳದ ಮೊತ್ತವು ಸತ್ಯಕ್ಕೆ ದೂರವಾದ ಸಂಗತಿ ಎಂದೂ ಫಾಕ್ಸ್‌ಕಾನ್‌ ಹೇಳಿತ್ತು. ಈಗ ಫಾಕ್ಸ್‌ಕಾನ್‌ನ ಅಧ್ಯಕ್ಷ ಸಿಎಂ ಬೊಮ್ಮಾಯಿಗೆ ಪತ್ರ ಬರೆದು ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಆ್ಯಪಲ್ ಫೋನ್ ತಯಾರಿಕಾ ಘಟಕ, 1 ಲಕ್ಷ ಹೊಸ ಉದ್ಯೋಗ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.