ETV Bharat / state

ನಾಲ್ಕನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ : ಇಂದು ಕೂಡ ಬಸ್​ ಸಂಚಾರ ಬಂದ್ - ನಾಲ್ಕನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ

ನೌಕರರ ಬೇಡಿಕೆ ಈಡೇರಿಸದ ಸರ್ಕಾರದ ಧೋರಣೆ ಖಂಡಿಸಿ ಉಪವಾಸ ಸತ್ಯಾಗ್ರಹ ಮಾಡಲಿದ್ದು, ಸತ್ಯಾಗ್ರಹದಲ್ಲಿ ನೂರಾರು ನೌಕರರು ಹಾಗೂ ಕುಟುಂಬಸ್ಥರು ಭಾಗಿಯಾಗಲಿದ್ದಾರೆ..

Fourth Day Transportation Employees Strike
ನಾಲ್ಕನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ
author img

By

Published : Dec 14, 2020, 8:04 AM IST

ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟದೆ. ಇನ್ನೂ ಯಾವುದೇ ಬಸ್ ರಸ್ತೆಗಿಳಿಯದೇ ಡಿಪೋದಲ್ಲಿ ಯಥಾಪ್ರಕಾರ ನಿಂತಲ್ಲೇ ನಿಂತಿವೆ. ನಿನ್ನೆ ಯಾರೂ ಮುಷ್ಕರ ವಾಪಸ್ ಪಡೆಯಬೇಡಿ ಎಂಬ ಕರೆ ಕೊಟ್ಟ ಹಿನ್ನೆಲೆ ನಗರದಲ್ಲಿ ಯಾವುದೇ ಬಸ್ ಸಂಚರಿಸುತ್ತಿಲ್ಲ.

ನಿನ್ನೆಯ ರೀತಿಯಲ್ಲೇ ಇಂದು ಕೂಡ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ಆರಂಭ ಮಾಡಲಿದ್ದು, ಬೆಳಗ್ಗೆ 10 ಗಂಟೆಯಿಂದ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. ನೌಕರರ ಬೇಡಿಕೆ ಈಡೇರಿಸದ ಸರ್ಕಾರದ ಧೋರಣೆ ಖಂಡಿಸಿ ಉಪವಾಸ ಸತ್ಯಾಗ್ರಹ ಮಾಡಲಿದ್ದು, ಸತ್ಯಾಗ್ರಹದಲ್ಲಿ ನೂರಾರು ನೌಕರರು ಹಾಗೂ ಕುಟುಂಬಸ್ಥರು ಭಾಗಿಯಾಗಲಿದ್ದಾರೆ.

ಓದಿ: ಪೊಲೀಸ್ ಭದ್ರತೆಯಲ್ಲಿ ಇಂದು ಬಸ್ ಸಂಚಾರ, ಕಲ್ಲು ತೂರಿದ್ರೆ ಪರಪ್ಪನ ಅಗ್ರಹಾರ ; ಸಿಎಂ ಸಭೆಯಲ್ಲಿ ಮಹತ್ವದ ನಿರ್ಧಾರ

ಸರ್ಕಾರ ಈ ಬೇಡಿಕೆಗಳನ್ನ ಈಡೇರಿಸಲು ಸಿದ್ಧ :

  • ನಿಗಮದ ನೌಕರರಿಗೆ ಆರೋಗ್ಯ ವಿಮಾ ಯೋಜನೆ ಜಾರಿ
  • ಕೋವಿಡ್-19 ಸೋಂಕು ತಗುಲಿ ಮರಣ ಹೊಂದಿರುವ ನೌಕರರ ಕುಟುಂಬಕ್ಕೆ ₹30 ಲಕ್ಷ ಪರಿಹಾರ
  • ಅಂತರ್ ನಿಗಮ ವರ್ಗಾವಣೆ ಬಗ್ಗೆ ಸೂಕ್ತ ತೀರ್ಮಾನ
  • ತರಬೇತಿ ನೌಕರರನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ
  • ನಾಲ್ಕು ನಿಗಮಗಳಲ್ಲಿ ಮಾನವ ಸಂಪನ್ಮೂಲ ಇಲಾಖೆ ಜಾರಿ
  • ನೌಕರರಿಗೆ ಭತ್ಯೆ ನೀಡಲು ತೀರ್ಮಾನ
  • ನಿಗಮದಲ್ಲಿ ನಡೆಯುತ್ತಿರುವ ಕಿರುಕುಳ ತಪ್ಪಿಸಲು ಆಡಳಿತ ವ್ಯವಸ್ಥೆ ರೂಪಿಸುವುದು
  • ಆರನೇ ವೇತನ ಆಯೋಗದ ಶಿಫಾರಸುಗಳ ಪರಿಗಣನೆ

ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸಲು ಸಿದ್ಧವಿಲ್ಲ :

  • ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು
  • ನೌಕರರು ಕೇಳುವ ವೇತನ ಪರಿಷ್ಕರಣೆ
  • ನಾಲ್ಕು ವರ್ಷಕೊಮ್ಮೆ ವೇತನ ಪರಿಷ್ಕರಣೆ
  • ಕಳೆದ 5 ವರ್ಷದಿಂದ ವೇತನ ಪರಿಷ್ಕರಣೆ ಮಾಡಿಲ್ಲ
  • ಕೊರೊನಾ ಕಾರಣದಿಂದ ಈ ಭಾರಿ ವೇತನ ಪರಿಷ್ಕರಣೆ ಮಾಡದ ಸರ್ಕಾರ
  • ಕಳೆದ ಬಾರಿ 12/5 ವೇತನ ಪರಿಷ್ಕರಣೆ ಮಾಡಿದ್ದ ಸರ್ಕಾರ. ಆದ್ರೆ, ಈ ಬಾರಿ ವೇತನ ಪರಿಷ್ಕರಣೆ ಮಾಡಲು ಹಿಂದೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.