ಬೆಂಗಳೂರು: ವಿಧಾನ ಪರಿಷತ್ಗೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ನಾಲ್ವರು ಸದಸ್ಯರು ಇಂದು ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಹನುಮಂತ ನಿರಾಣಿ, ಮಧು ಜಿ. ಮಾದೇಗೌಡ, ಪ್ರಕಾಶ್ ಹುಕ್ಕೇರಿ ಹಾಗೂ ಬಸವರಾಜ ಹೊರಟ್ಟಿ ಅವರು ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ವೇಳೆ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಸದಸ್ಯರ ಪರವಾಗಿ ಘೋಷಣೆ ಕೂಗುತ್ತ, ಹೂಗುಚ್ಛ ಹಾಗೂ ಹಾರ ಹಾಕಿ ಗೌರವಿಸಿದರು. ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಪ್ರಮಾಣವಚನ ಬೋಧಿಸಿದರು. ಸಿಎಂ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಪರಿಷತ್ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.
![four-newly-elected-mlcs-taken-oath](https://etvbharatimages.akamaized.net/etvbharat/prod-images/kn-bng-02-vp-oaths-taking-script-7208077_06072022113217_0607f_1657087337_568.jpg)
ವಿಧಾನಪರಿಷತ್ ಮಂಡ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ ಮಧು ಜಿ. ಮಾದೇಗೌಡ ತಮ್ಮ ತಂದೆ ಜಿ. ಮಾದೇಗೌಡ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಸವರಾಜ ಹೊರಟ್ಟಿ ತಮ್ಮ ತಂದೆ ಮತ್ತು ತಾಯಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಮಾಸ್ಕ್ ಧರಿಸುವ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಾರ್ಯ ಯಾರಿಂದಲೂ ಕಂಡುಬರಲಿಲ್ಲ.
ಇದನ್ನೂ ಓದಿ: ನಿಮ್ಮಲ್ಲೆಷ್ಟು ಲಕ್ಕಿ ಡಿಪ್ಗಳಿದ್ದಾರೆಂದು 20:20 ಸರ್ಕಾರದಲ್ಲಿದ್ದ ಡಿಸಿಎಂರನ್ನೇ ಕೇಳಿ: ಬಿಜೆಪಿಗೆ ಹೆಚ್ಡಿಕೆ ತಿರುಗೇಟು