ETV Bharat / state

ಪ್ರತ್ಯೇಕ ಘಟನೆ: ನಾಲ್ವರ ಬಂಧನ, ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಜಿಂಕೆ ಕೊಂಬುಗಳು ವಶ

author img

By

Published : Jan 26, 2022, 9:38 AM IST

ಪ್ರತ್ಯೇಕ ಘಟನೆಯಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜೊತೆ ಜಿಂಕೆ ಕೊಂಬುಗಳು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರು ನಗರದಲ್ಲಿ ಕಂಡು ಬಂದಿದೆ.

accused arrested in separate cases in Bangalore, Bangalore crime news, Bangalore police department, ಪ್ರತ್ಯೇಕ ಘಟನೆಯಲ್ಲಿ ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು, ಬೆಂಗಳೂರು ಅಪರಾಧ ಸುದ್ದಿ, ಬೆಂಗಳೂರು ಪೊಲೀಸ್​ ಇಲಾಖೆ,
ಜಿಂಕೆ ಕೊಂಬುಗಳು ವಶ

ಬೆಂಗಳೂರು: ಪ್ರತ್ಯೇಕ ಕಳವು ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ತಿಲಕ್ ನಗರ‌ ಪೊಲೀಸರು ಮತ್ತು ವಿಲ್ಸನ್ ಗಾರ್ಡನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ‌‌ ಪ್ರೀತಮ್ ಡೇವಿಡ್, ವಿಕ್ರಮ್, ಸುಜಯ್ ಹಾಗೂ ನರಸಿಂಹಪ್ಪ ಬಂಧಿತ ಆರೋಪಿಗಳು.

ನಾಲ್ವರು ಆರೋಪಿಗಳು ನಗರದ ವಿವಿಧ ಠಾಣಾ ವ್ಯಾಪ್ತಿಯಯಲ್ಲಿ ಕಳವು ಮಾಡುತ್ತಿದ್ದರು. ಸದ್ಯ ಆರೋಪಿಗಳಿಂದ ಮೂರು ಲಕ್ಷ ಅರವತ್ತು ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಕೈಗೆ ಸಿಕ್ಕ ಚಿನ್ನಾಭರಣವನ್ನು ನಾಲ್ವರು ದೋಚುತ್ತಿದ್ದರು ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ತಿಳಿಸಿದ್ದಾರೆ.

ಪ್ರಕರಣ 1: ಮನೆಯವರ ಗಮನ ಬೇರೆಡೆಗೆ ಸೆಳೆದು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳಾದ ಡೇವಿಡ್, ವಿಕ್ರಮ್ ಎನ್ನುವವರನ್ನು ತಿಲಕನಗರ ಠಾಣೆಯ ಪೊಲೀಸರು ಬಂಧಿಸಿ 3.30 ಲಕ್ಷ ರೂ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ

ಇವರಿಂದ 24 ಗ್ರಾಂ ತೂಕದ ಚಿನ್ನದ ವಡವೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮನೆಗೆಲಸ ಮಾಡಿ ಕೊಟ್ಟು ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಯವರು ಒಳ ಹೋಗುತ್ತಿದ್ದಂತೆ ಕೈಗೆ ಸಿಕ್ಕ ಚಿನ್ನಾಭರಣ ಒಡವೆಗಳನ್ನು ದೋಚಿ ಪರಾರಿಯಾಗುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಓದಿ: ಜಲಚರ ವಿಜ್ಞಾನಕ್ಕೆ ಕೊಡುಗೆ: ಸುಬ್ಬಣ್ಣ ಅಯ್ಯಪ್ಪನ್​ರಿಗೆ ಸಂದ ಪದ್ಮಶ್ರೀ ಗೌರವ

ಮನೆಗಳ್ಳತನದ ಪ್ರಕರಣದ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆಯ ವೇಳೆ ಸುಮಾರು 28 ಸಿಸಿಟಿವಿ ಕ್ಯಾಮರಾ ಫೂಟೇಜ್​ಗಳನ್ನು ಪರಿಶೀಲನೆ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಮೈಕೋ ಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕರಿಬಸವನ ಗೌಡ ನಿರ್ದೇಶನದಂತೆ ತಿಲಕನಗರ ಪೊಲೀಸ್ ಪೊಲೀಸ್ ಇನ್ಸ್​ಪೆಕ್ಟರ್​ ಗಿರೀಶ್ ನೇತೃತ್ವದ ತಂಡ ಕಾರ್ಯಾಚರಣೆ ನಡಸಿ ಆರೋಪಿ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಕರಣ 2: ಯಾರೂ ಇಲ್ಲದ ಸಮಯ ನೋಡಿ ಬೀಗ ಒಡೆದು ಕಳುವು ಮಾಡುತ್ತಿದ್ದ ಆರೋಪಿ ಸುಜಯ್ ಎನ್ನುವವನನ್ನು ಬಂಧಿಸಲಾಗಿದೆ. ಈತನಿಂದ 30 ಸಾವಿರ ರೂ ಮೌಲ್ಯದ 350 ಗ್ರಾಂ ತೂಕದ ಬೆಳ್ಳಿ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಮಾಹಿತಿ ನೀಡಿದ್ದಾರೆ.

ಓದಿ: ಕೊರಿಯರ್ ಮೂಲಕ ಬಂದ ಡ್ಯಾಕ್ಯುಮೆಂಟ್ಸ್ ಬ್ಯಾಗ್​​ನಲ್ಲಿ 5.3 ಕೋಟಿ ಮೌಲ್ಯದ ಹೆರಾಯಿನ್ ಪತ್ತೆ: ವ್ಯಕ್ತಿಯ ಬಂಧನ

ಮೈಕೋ ಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕರಿಬಸವನ ಗೌಡ ನಿರ್ದೇಶನದಂತೆ ತಿಲಕನಗರ ಪೊಲೀಸ್ ಇನ್ಸ್​ಪೆಕ್ಟರ್ ಗಿರೀಶ್ ಮತ್ತು ಪಿಎಸ್ಐ ಪ್ರವೀಣ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಪ್ರಕರಣ 3 : ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ವಿಲ್ಸನ್ ಗಾರ್ಡನ್ ಠಾಣೆಯ ಪೊಲೀಸರು ಬಂಧಿಸಿ 9 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ದಿಣ್ಣೂರು ಗ್ರಾಮದ ನಿವಾಸಿ ನರಸಿಂಹಪ್ಪ(60) ಬಂಧಿತ ಆರೋಪಿ. ಈತ ಶಾಂತಿನಗರದ ಬಸ್ ಡಿಪೋ ಸಮೀಪ ಜಿಂಕೆ ಕೊಂಬುಗಳನ್ನು ತುಂಬಿಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದ. ಖಚಿತ ಮಾಹಿತಿ ಪಡೆದ ವಿಲ್ಸನ್ ಗಾರ್ಡನ್ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸ್ಥಳದಲ್ಲಿಯೇ ಬಂಧಿಸಿ ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಓದಿ: ದೇಶದಲ್ಲಿ ಇಂದು 73ನೇ ಗಣರಾಜ್ಯೋತ್ಸವ ಸಂಭ್ರಮ... ರಾಜಪಥ್​ನಲ್ಲಿ ಹೀಗಿರಲಿದೆ ಪಥಸಂಚಲನ

ಜಿಂಕೆ ಕೊಂಬುಗಳು ಎಲ್ಲಿ ಸಿಕ್ಕವು, ಯಾರು ಮಾರಾಟ ಮಾಡಲು ಕೊಟ್ಟರು, ಯಾವ ಕಾಡಿನಿಂದ ಈ ಕೊಂಬುಗಳನ್ನು ತರಲಾಗಿದೆ, ಯಾರು ಯಾರಿಗೆ ಮಾರಾಟ ಮಾಡಲು ಬಂದಿದ್ದನು ಎನ್ನುವ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.