ಬೆಂಗಳೂರು: ಕೇರಳದ ಶ್ರೀ ನಾರಾಯಣ ವರ್ಲ್ಡ್ ರೀಸರ್ಚ್ ಅಂಡ್ ಪೀಸ್ ಸೆಂಟರ್ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಐದು ಲಕ್ಷ ರೂ.ಗಳನ್ನು ನೀಡಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಆಗಮಿಸಿದ ಕೇರಳ ಶಿವಗಿರಿ ಮಠದ ಬ್ರಹ್ಮಶ್ರೀ ವಿದ್ಯಾನಂದ ಸ್ವಾಮೀಜಿ ರಾಜ್ಯದಲ್ಲಿ ಸಂಭವಿಸಿದ ನೆರೆ ಹಾನಿಗೆ ನೆರವಾಗಲು ಐದು ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ನೀಡಿದರು.
ನಂತರ ಮಾತನಾಡಿದ ಶ್ರೀಗಳು, ಕೇರಳದಲ್ಲಿ ಸಂಭವಿಸಿದ ನೆರೆಹಾನಿ ವೇಳೆ 100 ಮನೆ ಕಟ್ಟಿಸಿಕೊಡಲಾಗಿತ್ತು. ಈಗ ಕರ್ನಾಟಕಕ್ಕೆ ₹ 5 ಲಕ್ಷ ನೆರವಾದವರನ್ನು ನಾರಾಯಣ ವರ್ಲ್ಡ್ ರೀಸರ್ಚ್ ಅಂಡ್ ಪೀಸ್ ಟ್ರಸ್ಟ್ ಮೂಲಕ ನೀಡಲಾಗಿದೆ. ಬೆಂಗಳೂರಿನಲ್ಲಿ 2000 ಕೋಟಿ ವೆಚ್ಚದಲ್ಲಿ ನಾರಾಯಣ ಗುರು ವರ್ಲ್ಡ್ ರೀಸರ್ಚ್ ಅಂಡ್ ಪೀಸ್ ಸೆಂಟರ್ ಮತ್ತು ವೈಷ್ಣೋದೇವಿ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದೇವೆ. ಇದಕ್ಕೆ ನೆರವು ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ ಎಂದರು.