ETV Bharat / state

ಬಿಜೆಪಿ ಸಂಸದರು ಎಲ್ಲದಕ್ಕೂ ಧ್ವನಿ ಎತ್ತುತ್ತೇವೆ, ಕಾಂಗ್ರೆಸ್‌ನವರು ಏನು ಮಾಡಿದ್ರು : ಡಿವಿಎಸ್ ಪ್ರಶ್ನೆ - ರಾಜ್ಯ ರಾಜಕೀಯದ ಬಗ್ಗೆ ಸದಾನಂದ ಗೌಡ ಹೇಳಿಕೆ

ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡರು ಮುಂಬರುವ ರಾಜ್ಯ ಬಜೆಟ್​ ಕುರಿತಂತೆ ಹೇಳಿಕೆ ನೀಡಿದ್ದಾರೆ..

Former Union Minister Sadananda Gowda talks about state budget
ರಾಜ್ಯ ಬಜೆಟ್​ ಬಗ್ಗೆ ಸದಾನಂದ ಗೌಡ ಪ್ರತಿಕ್ರಿಯೆ
author img

By

Published : Feb 12, 2022, 9:23 PM IST

ಬೆಂಗಳೂರು : 25 ಸಂಸದರಾದ ನಾವು ಎಲ್ಲದರಲ್ಲೂ ಧ್ವನಿ ಎತ್ತುತ್ತೇವೆ. ಕಾಂಗ್ರೆಸ್ ಅವರೇನು ಮಾಡಿದ್ರು ಹೇಳಬೇಕಲ್ಲ ಎಂದು ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡ ಪ್ರಶ್ನಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾವು ಎಲ್ಲದರಲ್ಲೂ‌ ಧ್ವನಿಯನ್ನು ಎತ್ತುತ್ತೇವೆ. ರೈಲ್ವೆ ಯೋಜನೆಗೆ ಭೂಮಿ ಕೊಡಲಿಲ್ಲ. ಹಿಂದೆ ಕಾಂಗ್ರೆಸ್​​​ನವರೇ ಸಂಸದರು ಹೆಚ್ಚಿದ್ದರು. ಅವರೇನು ಮಾಡಿದ್ರು ಹೇಳಬೇಕಲ್ಲ. ನಾನು ಎಲ್ಲವನ್ನೂ ಮಾಡಿದ್ದೆ ಎಂದು ತಿಳಿಸಿದರು.

ಕೇಂದ್ರ ಬಜೆಟ್ ಅನ್ನು ಸಮರ್ಥಿಸಿದ ಅವರು, ಕೊರೊನಾದಲ್ಲೂ 9.2% ಜಿಡಿಪಿ ಪ್ರಗತಿ ಇದೆ. 68 ವರ್ಷದ ಕಾಂಗ್ರೆಸ್ ಆಡಳಿತ ಕಂಡಿದ್ದೆವು. ತಾತ್ಕಾಲಿಕವಾಗಿ ಜನರನ್ನು ಓಲೈಕೆ ಮಾಡಲಾಗಿತ್ತು. ಆಗ ಜಿಡಿಪಿ ಏರಿಕೆಯಾಗಿರಲೇ ಇಲ್ಲ. ಕೋವಿಡ್​​​​ನಲ್ಲೂ ನಮ್ಮ ಜಿಡಿಪಿ ಕುಸಿದಿರಲಿಲ್ಲ.

ಬಜೆಟ್ ಮಂಡಿಸಬೇಕಾದರೆ ಬಹಳ ಕಷ್ಟ. ನಾನು ರಾಜ್ಯದ ಸಿಎಂ ಆಗಿ ಮಂಡಿಸಿದ್ದೆ. ಬೇಡಿಕೆಗಳನ್ನು ಗಮನಿಸಿ ಮಂಡಿಸುವುದು ಕಷ್ಟ. ನಾವು ಪ್ರಚಾರಕ್ಕಾಗಿ ಬಜೆಟ್ ಸಮರ್ಥಿಸಿಕೊಳ್ಳುತ್ತಿಲ್ಲ. ಬಜೆಟ್​​​​ನಲ್ಲಿ ಹೊಸ ಯೋಜನೆ ನಾವು ಘೋಷಿಸಿಲ್ಲ. ಆದರೆ, ಹಳೆಯ ಯೋಜನೆ ಮುಂದುವರಿಸಿದ್ದೇವೆ ಎಂದರು.

ಎಲ್ಲಾ ಕಡೆಗಳಲ್ಲಿ ಡಿಜಿಟಲೀಕರಣ ಆಗುತ್ತಿದೆ. ಡಿಜಿಟಲ್ ಕರೆನ್ಸೀಕರಣದ ಚಿಂತನೆ ನಡೆದಿದೆ. ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲೀಕರಣ ಆಗಿದೆ. ಭೂ ದಾಖಲೀಕರಣಕ್ಕೂ ಡಿಜಿಟಲ್ ವ್ಯವಸ್ಥೆಯಾಗಿದೆ ಎಂದು ತಿಳಿಸಿದರು.

ಹಿಜಾಬ್-ಕೇಸರಿ ಸಂಘರ್ಷ ವಿಚಾರವಾಗಿ ಪ್ರತಿಕ್ರಿಯಿಸಿ, ಕೋರ್ಟ್ ಏನು ಹೇಳುತ್ತೆ ಅದನ್ನು ಪಾಲಿಸುತ್ತೇವೆ. ಸುಪ್ರೀಂ, ಹೈಕೋರ್ಟ್ ಏನು‌ ಹೇಳುತ್ತೆ ಅದನ್ನು ಮಾಡ್ತೇವೆ. ಇದರ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ. ಎಲ್ಲರೂ ಕೋರ್ಟ್ ತೀರ್ಪನ್ನು ಪಾಲಿಸಬೇಕು. ರಾಷ್ಟ್ರಧ್ವಜದ ಬಗ್ಗೆ ಈಶ್ವರಪ್ಪನವರೇ ಹೇಳಿದ್ದಾರೆ. ಹಾಗಾಗಿ ಇದರ ಬಗ್ಗೆ ನೋ ಕಾಮೆಂಟ್ಸ್ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಇಳಿಕೆ ಕಂಡ ಪಾಸಿಟಿವ್ ದರ : 3202 ಮಂದಿಗೆ ಕೋವಿಡ್ ದೃಢ, 38 ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.