ETV Bharat / state

ಕೃಷ್ಣ ಮೇಲ್ಡಂಡೆ, ಮೇಕೆದಾಟು, ಮಹದಾಯಿ ವಿಚಾರವಾಗಿ ಪಾದಯಾತ್ರೆ ನಡೆಸುತ್ತೇವೆ : ಹೆಚ್ ಡಿ ದೇವೇಗೌಡ - ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಸುದ್ದಿಗೋಷ್ಠಿ

ಆಲಮಟ್ಟಿ, ಮಹದಾಯಿ ಹಾಗೆಯೇ ಮೇಕೆದಾಟು ವಿಚಾರವಾಗಿ ಮೂರು ತಂಡಗಳಲ್ಲಿ ಪಾದಯಾತ್ರೆ ಮಾಡಲು ಜೆಡಿಎಸ್‌ ತೀರ್ಮಾನಿಸಿದೆ. ಒಂದು ಕಡೆ ಸಾಂಕೇತಿಕವಾಗಿ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರೇ ಹೋಗಲಿದಾರೆ..

ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಸುದ್ದಿಗೋಷ್ಠಿ

author img

By

Published : Aug 22, 2021, 5:15 PM IST

Updated : Aug 22, 2021, 5:23 PM IST

ಬೆಂಗಳೂರು : ನಮ್ಮ ಜೀವನದಿಗಳಾದ ಕೃಷ್ಣ ಮೇಲ್ಡಂಡೆ, ಮೇಕದಾಟು, ಮಹದಾಯಿ ವಿಚಾರವಾಗಿ ಪಾದಯಾತ್ರೆ ಮೂಲಕ ಹೋರಾಟ ಮಾಡಲು ಜೆಡಿಎಸ್ ತೀರ್ಮಾನಿಸಿದೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಈ ಹೋರಾಟದ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.

ಪಾದಯಾತ್ರೆ ಮಾಡುವ ದಿನಾಂಕವನ್ನು ಅಧಿವೇಶನ ಮುಗಿದ ಬಳಿಕ ನಿಗದಿ ಮಾಡುತ್ತೇವೆ. ನಮ್ಮ ರಾಜ್ಯದ ಹಿತ ಕಾಪಾಡುವುದಕ್ಕಾಗಿ ಈ ಹೋರಾಟ ಅನಿವಾರ್ಯವಾಗಿದೆ, ಪ್ರಾದೇಶಿಕ ಪಕ್ಷವಾಗಿ ನಮ್ಮ ರಾಜ್ಯದ ಹಿತಾಸಕ್ತಿಗೋಸ್ಕರ ಹೋರಾಟ ಮಾಡುತ್ತೇವೆ ಎಂದರು.

ನೀರಾವರಿ ಯೋಜನೆಗಳು ಪೂರ್ಣಗೊಳಿಸಲು ಆಗ್ರಹಿಸಿ ಜೆಡಿಎಸ್‌ ಹೋರಾಡಲು ನಿರ್ಧಾರ.. ಈ ಹೆಚ್‌ಡಿಡಿ ಮಾಹಿತಿ ನೀಡಿರುವುದು..

ಆಲಮಟ್ಟಿ, ಮಹದಾಯಿ ಹಾಗೆಯೇ ಮೇಕೆದಾಟು ವಿಚಾರವಾಗಿ ಮೂರು ತಂಡಗಳಲ್ಲಿ ಪಾದಯಾತ್ರೆ ಮಾಡಲು ತೀರ್ಮಾನವಾಗಿದೆ. ಒಂದು ಕಡೆ ನಾನು ಸಾಂಕೇತಿಕವಾಗಿ ಹೋಗುತ್ತೇನೆ ಎಂದರು. ಕಾಂಗ್ರೆಸ್-ಬಿಜೆಪಿಗೆ ಹೋರಾಟ ಮಾಡಲು‌ ಕಷ್ಟ ಇದೆ. ಅವರು ಹೋರಾಟ ಮಾಡಲು ‌ಆಗುವುದಿಲ್ಲ. ಎಲ್ಲರೂ ಸರ್ಕಾರ ಮಾತ್ರ ‌ಮಾಡಿದ್ದಾರೆ.

ಅವರಿಂದ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ನಾವೇ ಹೋರಾಟ ಮಾಡುತ್ತೇವೆ. ಸಾಂಕೇತಿಕವಾಗಿ ನಾನು ಒಂದು ದಿನ ಹೋರಾಟದಲ್ಲಿ ಭಾಗವಹಿಸುತ್ತೇನೆ. ಹೆಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹೋರಾಟ ಮುಂದುವರೆಯುತ್ತದೆ ಎಂದರು.

ಕೃಷ್ಣ ಮೇಲ್ಡಂಡೆ ಯೋಜನೆಗೆ ಹಣ ನಾನು ಮೀಸಲಿಟ್ಟಷ್ಟೇ ಇದೆ. ಅದನ್ನ ಈಗ ಕಡಿಮೆ ಮಾಡಲಾಗಿದೆ. ಇದಕ್ಕೂ ನ್ಯಾಯ ಸಿಗಬೇಕು. ಮೇಕೆದಾಟು ಮತ್ತು ಮಹದಾಯಿ ವಿಚಾರವಾಗಿ ನಮಗೆ ನ್ಯಾಯ ಸಿಗಬೇಕು. ಇದಕ್ಕಾಗಿ ನಾವು ಹೋರಾಟ ‌ಮಾಡುತ್ತೇವೆ ಎಂದರು. ಕೃಷ್ಣಾ ಮೇಲ್ದಂಡೆ ವಿಚಾರವಾಗಿ ಶರತ್ ಪವಾರ್ ಹಾಗೂ ನಮ್ಮ ಪಕ್ಷದ ಮುಖಂಡರ ಜೊತೆ ಮಾತನಾಡುತ್ತೇನೆ.

ಇದನ್ನು ಸರಿ ಪಡಿಸಿಕೊಳ್ಳುತ್ತೇವೆ‌ಂದು ನಿನ್ನೆ ಸಿಎಂ ಹೇಳಿದ್ದಾರೆ. ಸಂತೋಷ. ಸುಪ್ರೀಂಕೋರ್ಟ್‌ನಲ್ಲಿ ಮೂರು ರಾಜ್ಯಗಳು ಅರ್ಜಿ ಹಾಕಿವೆ. ಆಲಮಟ್ಟಿ ವಿಚಾರ ಇಂದಿನದಲ್ಲ. ಮೂರು ಯೋಜನೆಗಳು ಹೀಗೆ ಆಗಿವೆ. ನಮ್ಮ ಹಣೆಬರಹ ಇದು ಎಂದು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್‌ ಪಕ್ಷ ನಡೆಸಲಿರುವ ಹೋರಾಟಗಳ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮಾತನಾಡಿರುವುದು..

ಕಾಂಗ್ರೆಸ್-ಬಿಜೆಪಿಗೆ ಸಮಸ್ಯೆ ಇದೆ. ದೆಹಲಿಯಲ್ಲಿ ಯಾರು ಆಳುತ್ತಾರೋ ಅವರು ಈ ರೀತಿ ಹೋರಾಟ ಮಾಡಲು ಸಾಧ್ಯವಿಲ್ಲ. 10 ವರ್ಷ ಮನಮೋಹನ್ ಸಿಂಗ್ ಇದ್ದರು, ಏನಾಯ್ತು. ಹಣ ಒದಗಿಸಲು ನಾನು ಏನು ನಿರ್ಣಯ ಮಾಡಿದೆ ಅದು ಇವತ್ತಿಗೂ ಮುಂದುವರೆದಿದೆ. ಯಾರೂ ಇದನ್ನು ತೆಗೆಯಲಿಲ್ಲ. ಆದರೆ, ಸ್ವಲ್ಪ ಕಡಿಮೆ ಮಾಡಿದ್ದಾರೆ ಎಂದರು.

ನಮಗೆ ಯಾರ ಮೇಲೂ ದ್ವೇಷ ಇಲ್ಲ. ಪ್ರಾದೇಶಿಕ ಪಕ್ಷವಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು. ನಮ್ಮ ಪಕ್ಷದಿಂದ ನೆಲ-ಜಲಕ್ಕೆ ಹೋರಾಟ ಮಾಡುತ್ತಲೇ ಇದ್ದೇವೆ. ಈ ಪಕ್ಷದ ಬದ್ಧತೆ ಮೊದಲಿಂದಲೂ ನಮ್ಮ ರಾಜ್ಯದ ಸೂಕ್ಷ್ಮ ವಿಚಾರಗಳ ಬಗ್ಗೆ ಹೋರಾಟ ಮಾಡಿಕೊಂಡು ಬರಲಾಗಿದೆ ಎಂದರು.

ಇದನ್ನೂ ಓದಿ : ಕೇಂದ್ರ ಸಚಿವ ಜೋಶಿ ಕುಟುಂಬದ ಮದುವೆಯಲ್ಲಿ ಉಪರಾಷ್ಟ್ರಪತಿ: ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ತೆರಳಿದ ನಾಯ್ಡು

ಸದ್ಯದಲ್ಲೇ ಪ್ರವಾಸ : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಾನೇ ಪ್ರವಾಸ ಮಾಡುತ್ತೇನೆ. ನಾನು ಯಾವ ಪ್ರದೇಶಕ್ಕೆ ಭೇಟಿ ಮಾಡಬೇಕು ಅಂತಾ ನಾನೇ ತೀರ್ಮಾನ ಮಾಡುತ್ತೇನೆ ಎಂದರು. ಕೊರೊನಾ ಹೆಸರು ಹೇಳಿ ಹೋರಾಟ ನಿಲ್ಲುವುದಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಸಭೆ, ಸಮಾರಂಭ ಮಾಡ್ತಾರೆ. ಇದಕ್ಕೆಲ್ಲ ಕೊರೊ‌ನಾ‌ ಇಲ್ಲವಾ? ಕೊರೊನಾ ನೆಪ ಹೇಳಿ ನಾನು ಕುಳಿತುಕೊಳ್ಳೊಲ್ಲ.

ನಮ್ಮ ಹೋರಾಟ ನಡದೇ ನಡೆಯುತ್ತದೆ. ಪಾದಯಾತ್ರೆ ಮುಗಿದ ಬಳಿಕ ಪ್ರಧಾನಿ ಬಳಿಗೆ ನಿಯೋಗ ಹೋಗಿ ಮನವಿ ಕೊಡುತ್ತೇನೆ. ಒಂದು ವೇಳೆ ರಾಜ್ಯ ಸರ್ಕಾರವೇ ಪ್ರಧಾನಿ ಬಳಿಗೆ ನಿಯೋಗ ಹೋಗ್ತೀವಿ ಅಂತಾ ಅಂದರೆ ಅವರ ಜತೆಯೂ ಹೋಗೋಕೆ ನಮ್ಮ ಪಕ್ಷ ಸಿದ್ಧ ಇದೆ ಎಂದರು.

ಬಿಜೆಪಿ ಎರಡು ವರ್ಷಗಳಿಂದ ಏನು ಮಾಡಿದೆ. ತಮಿಳುನಾಡು ಮಾತು ಕೇಳಿ ಮೇಕೆದಾಟುಗೆ ಕೇಂದ್ರ ವಿಳಂಬ ಮಾಡುತ್ತಿದೆ. ಈ ವಿಷಯದಲ್ಲಿ ಬಿಜೆಪಿ ಸರ್ಕಾರದ ಬಗ್ಗೆ ನನಗೆ ಬೇಸರ ಇದೆ ಎಂದರು.

ಮಾತನಾಡಲು ಅವಕಾಶ ಸಿಗಲಿಲ್ಲ : ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿದ್ದೆ. ಮಾತಾಡಲು ಅವಕಾಶ ಸಿಗಬಹುದು ಅಂತಾ ಕೊನೆಯವರೆಗೂ ಕಾದೆ. ಆದರೆ, ದುರಂತ, ಅಧಿವೇಶನ ನಡೆಯಲು ಬಿಡಲಿಲ್ಲ. ಆಳುವ ಪಕ್ಷ ಮತ್ತು ವಿಪಕ್ಷಗಳ ನಡುವಿನ ತಿಕ್ಕಾಟಕ್ಕೆ ಸದನ ಹೀಗೆ ಆಗಿದೆ.

ಗದ್ದಲ, ಗಲಾಟೆ ಇದ್ದರೂ ಕೇಂದ್ರ ಸರ್ಕಾರ ಚರ್ಚೆ ಇಲ್ಲದೆ ಬಿಲ್ ಪಾಸ್ ಮಾಡಿದೆ. ಸಂವಿಧಾನ ತಿದ್ದುಪಡಿ ಬಿಲ್‌ಗೆ ಮಾತ್ರ 3 ಗಂಟೆ ಚರ್ಚೆಗೆ ನಿಗದಿ ಮಾಡಿದ್ದರು. ನಾನು ಅದರಲ್ಲು ಭಾಗವಹಿಸಿದೆ. ಅದರಲ್ಲಿ ಬಿಟ್ಟು ಯಾವುದರಲ್ಲೂ ನನಗೆ ಮಾತಾಡಲು ಅವಕಾಶವೇ ಸಿಗಲಿಲ್ಲ. ಈ ವಿಷಯದಲ್ಲಿ ನನಗೆ ತೀವ್ರ ಅಸಮಾಧಾನವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಕಲಾಪ ವ್ಯರ್ಥ : ಲೋಕಸಭೆಯಲ್ಲಿ ಬಿಜೆಪಿಗೆ ಶಕ್ತಿ ಇದೆ. ಯಾವುದೇ ಕಾರ್ಯಕಲಾಪ ಇಲ್ಲದೆ ಕಲಾಪ ಮುಕ್ತಾಯ ಆಯಿತು. ನಾನು ವಿಪಕ್ಷ ನಾಯಕರಿಗೆ ಕರೆದು ಮಾತಾಡಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಯಾವುದೇ ಜನ ಸಾಮಾನ್ಯರ ಸಮಸ್ಯೆ ಬಗ್ಗೆ ನಾವು ಮಾತಾನಾಡಲು ಆಗಲಿಲ್ಲ. ನನ್ನ ಪ್ರಕಾರದಲ್ಲಿ ಈ ಸಲದ ಕಲಾಪ ವ್ಯರ್ಥವಾಗಿದೆ. ಈ ತರಹದ ರಾಜ್ಯಸಭೆಯ ನಡಾವಳಿಗಳನ್ನ ಇತಿಹಾಸದಲ್ಲಿ ನಾನು ನೋಡಿರಲಿಲ್ಲ. ರಾಜ್ಯಸಭೆಯಲ್ಲಿ ಆಡಳಿತ ಪಕ್ಷ ಹಾಗೂ ನಮ್ಮ ವಿಪಕ್ಷಗಳ ಸದಸ್ಯರ ವರ್ತನೆ ಬಗ್ಗೆ ನನಗೆ ಅಸಮಾಧಾನ ಇದೆ.

ಟೇಬಲ್ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದು ನಾನು ನೋಡಿರಲಿಲ್ಲ. ಸಂಸದರ ಈ ತರಹದ ವರ್ತನೆಗೆ ತೀವ್ರ ನೋವುಂಟಾಗಿದೆ‌. ಪ್ರಜಾಪ್ರಭುತ್ವ ವ್ಯವಸ್ಥೆ ಹಳಿತಪ್ಪಿದಂತಾಗಿದೆ. ಇದನ್ನು ಸರಿ ಮಾಡಬೇಕಾದರೆ ಎಲ್ಲರು ಸೇರಿಯೇ ಮಾಡಬೇಕು. ಇಂತಹ ವರ್ತನೆಗಳು ಸಮಾಜಕ್ಕೆ ಒಳ್ಳೆ ಲಕ್ಷಣ ಅಲ್ಲ. ನಾವು ಮುಂದಿನ ಪೀಳಿಗೆಗೆ ಯಾವ ಮಾರ್ಗದರ್ಶನ ಕೊಡುತ್ತಿದ್ದೇವೆ. ಮಹಾನುಭಾವರು ಸ್ವಾತಂತ್ರ್ಯ ತಂದು ಕೊಟ್ಟರು.

ಅನೇಕರು ದೇಶಕ್ಕೆ ಆತ್ಮಾರ್ಪಣೆ ಮಾಡಿಕೊಂಡಿದ್ದಾರೆ. ಇನ್ನು ಮುಂದಾದರು ಇದನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು. ನಾವು ನಮ್ಮ ಪಕ್ಷದ ಚಟುವಟಿಕೆಗಳನ್ನು ಮುಂದುವರೆಸುತ್ತೇವೆ. ಶೀಘ್ರವೇ ಪಕ್ಷದ ನಾಯಕರ ಜೊತೆ ಸಭೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದರು.

ಹೆಚ್‌ಡಿಡಿ ತಿರುಗೇಟು : ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲವೆಂದು ಕೆಲ ಮಹಾನುಭಾವರು ಹೇಳಿದ್ದಾರೆ. 2023ಕ್ಕೆ ಜೆಡಿಎಸ್ ಇರಲ್ಲ ಅಂತಾರೆ. ಯಾರು ಹೇಳಿದರೆಂದು ನಾನು ಮಾತನಾಡುವುದಿಲ್ಲ. ಆದರೆ, ಹಾಗೆ ಹೇಳಿರೋರಿಗೆ ಎಚ್ಚರಿಕೆ ಕೊಡುತ್ತೇನೆ. ಹೋರಾಟ ಮಾಡಿ ಪಕ್ಷದ ಅಸ್ತಿತ್ವ ಉಳಿಸಿಕೊಂಡು ನಾವು ಅಧಿಕಾರಕ್ಕೆ ಬರೋಕೆ ಕೆಲಸ ಮಾಡುತ್ತೇವೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಪಾದಯಾತ್ರೆ ಪ್ರಾರಂಭ ಮಾಡುತ್ತೇವೆ. ನವೆಂಬರ್ ಅಧಿವೇಶನದವರೆಗೂ ನಾನು ಕುಳಿತುಕೊಳ್ಳುವುದಿಲ್ಲ ಹೋರಾಟ ಮಾಡುತ್ತೇನೆ. ನಾನೇ ಎಲ್ಲಾ ಜಿಲ್ಲೆಗಳಿಗೂ ಹೋಗ್ತೀನಿ. ಹಳೆ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್ ಸೀಮಿತ ಅಂತಾರೆ. ಆದರೆ, ನಾನು‌ ಸಿಎಂ ಆಗಿದ್ದಾಗ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಾಸಕರು ಗೆದ್ದಿದ್ದರು. ಆದರೂ ಯಾವ ಯಾವ ಜಿಲ್ಲೆಗೆ ಹೋಗಬೇಕು ಅಂತಾ ನಿರ್ಧಾರ ಮಾಡಿ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.

ನೆಹರು, ವಾಜಪೇಯಿ ಹೆಸರಿನಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರ ಕಿತ್ತಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌಡರು, ಯಾರು ಹಾಗೆ ಮಾತನಾಡಬಾರದು. ನೆಹರು, ವಾಜಪೇಯಿ ಬಗ್ಗೆಯೂ ಹಗುರವಾಗಿ ಮಾತನಾಡಬಾರದು. ಅವರ ಬಗ್ಗೆ ಮಾತನಾಡಿದರೆ ಪಕ್ಷಕ್ಕೆ ಹೆಚ್ಚು ಶಕ್ತಿ‌ ಬರುತ್ತದೆ ಎಂಬ ಭ್ರಮೆಯಲ್ಲಿ ಯಾರು‌ ಇರಬಾರದು ಎಂದು ಹಗುರವಾಗಿ ಮಾತನಾಡಿದ ನಾಯಕರಿಗೆ ಕಿವಿ ಮಾತು ಹೇಳಿದರು. ಮೋದಿ ವಿರುದ್ಧ ವಿಪಕ್ಷಗಳು ಹೋರಾಟ, ಕಟ್ಟಿ ಹಾಕುವ ವಿಚಾರಕ್ಕೆ, ಯಾರು ಯಾರನ್ನು ಕಟ್ಟಿ ಹಾಕಲು‌ ಸಾಧ್ಯವಿಲ್ಲ.

ಆಯಾ ರಾಜ್ಯದ ಪ್ರಾದೇಶಿಕ ಪಕ್ಷಗಳು ಅಲ್ಲಿ ಸ್ಟ್ರಾಂಗ್ ಇರುತ್ತವೆ. ರಾಹುಲ್ ಗಾಂಧಿ‌ ಕೂಡ ಹೋರಾಟ ಮಾಡ್ತಿದ್ದಾರೆ. ರಾಹುಲ್ ಗಾಂಧಿ ಇನ್ನೂ ಸ್ವಲ್ಪ ದೂರ ಹೋಗಬೇಕು. ಮೋದಿ ವಿರೋಧಿ ಬಣದ ನಾಯಕತ್ವ ಹೇಗೆ ಇರುತ್ತೋ ನನಗೆ ಗೊತ್ತಿಲ್ಲ ಎಂದರು.

ಅಫ್ಘಾನಿಸ್ತಾನ ಗಲಾಟೆ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ಅಮೆರಿಕಾ ಅಧ್ಯಕ್ಷ ಘಟನೆ ಬಗ್ಗೆ ಪರಾಮರ್ಶೆ ಮಾಡಿ ಮುಂದೆ ಏನಾಗುತ್ತೆ ಅಂತಾ ಅರ್ಥ ಮಾಡಿಕೊಂಡಿ ಬೈಡನ್ ಸೇನೆ ವಾಪಸ್ ಪಡೆಯಬೇಕಿತ್ತು. ಟ್ರಂಪ್ ಮತ್ತು ಬೈಡನ್ ನಡುವೆ ವ್ಯತ್ಯಾಸ ಇದೆ. ಬೈಡನ್ ಅವರ ದಿಢೀರ್ ಅಂತಾ ನಿರ್ಧಾರ ಮಾಡಿದ್ದು ಇಷ್ಟಕ್ಕೆಲ್ಲ ಕಾರಣವಾಗಿರಬಹುದು. ನಮ್ಮ ದೇಶದ ಹಿತದೃಷ್ಟಿಯಿಂದ ಮಾಜಿ ಪ್ರಧಾನಿಯಾಗಿ ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.

ಪಾಕಿಸ್ತಾನ, ಚೀನಾ, ರಷ್ಯಾ, ಟರ್ಕಿ ತಾಲಿಬಾನ್ ಪರ ಇದೆ ಎಂದು ಹೇಳುತ್ತಾರೆ. ಬಿನ್ ಲಾಡೆನ್‌ನನ್ನು ಅಮೆರಿಕ ಒಮಾಮಾ ಸರ್ಕಾರ ಹೊಡೆದು ಹಾಕಿತ್ತು. ಆದಾದ ಬಳಿಕ ಸೇನೆ ಅಲ್ಲಿ ನೆಲೆಸಿತ್ತು. ತಾಲಿಬಾನ್ ಅಲ್ಲಲ್ಲಿ ಇದ್ದರು. ಅಮೆರಿಕಾದ ಸೇನೆ ವಾಪಸ್ ಕರೆಸಿದಾಗ ತಾಲಿಬಾನ್ ಮತ್ತೆ ಆಟಾಟೋಪ ಶುರು ಮಾಡಿದ್ದಾರೆ ಅನ್ನಿಸುತ್ತದೆ. ಇವೆಲ್ಲ ಅಂತಾರಾಷ್ಟ್ರೀಯ ವಿಚಾರಗಳು. ವಿಶ್ವ ಸಂಸ್ಥೆ ಕೂಡ ತಾಲಿಬಾನ್ ವಿರುದ್ಧ ಪ್ರಬಲವಾಗಿ ವಿರೋಧ ಮಾಡಿದೆ ಎಂದು ಹೇಳಿದರು. ಇಂದು ರಾಖಿ ಹಬ್ಬದ ಹಿನ್ನೆಲೆಯಲ್ಲಿ ಇದೇ ವೇಳೆ ದೇವೇಗೌಡರಿಗೆ ಮಹಿಳಾ ಕಾರ್ಯಕರ್ತೆಯೊಬ್ಬರು ರಾಖಿ ಕಟ್ಟಿದರು.

Last Updated : Aug 22, 2021, 5:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.