ETV Bharat / state

ಏಕತಾ ಪ್ರತಿಮೆ ವೀಕ್ಷಿಸಿದ ದೇವೇಗೌಡ... ಟ್ವೀಟ್​ ಮೂಲಕ ಮೋದಿ ಸಂತಸ

ಗುಜರಾತ್‍ನ ಕೆವೆಡಿಯಾದಲ್ಲಿರುವ ವಿಶ್ವದ ಅತ್ಯಂತ ಎತ್ತರದ  ಸರ್ದಾರ್ ವಲ್ಲಭ ಬಾಯಿ ಪಟೇಲ್ ಪ್ರತಿಮೆಯನ್ನುಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ವೀಕ್ಷಿಸಿದ್ದಾರೆ. ದೇವೇಗೌಡರು ಏಕತಾ ಪ್ರತಿಭೆಗೆ ಭೇಟಿ ನೀಡಿದ್ದು ಸಂತಸ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಅಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
author img

By

Published : Oct 6, 2019, 2:26 PM IST

ಬೆಂಗಳೂರು: ಗುಜರಾತ್‍ನ ಕೆವೆಡಿಯಾದಲ್ಲಿರುವ ವಿಶ್ವದ ಅತ್ಯಂತ ಎತ್ತರದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಪ್ರತಿಮೆಯನ್ನು ವೀಕ್ಷಿಸಿದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

banglore
ಟ್ವೀಟ್​ ಮೂಲಕ ಮೋದಿ ಪ್ರಶಂಸೆ

ಈ ಕುರಿತು ಟ್ವೀಟ್ ಮಾಡಿರುವ ಮೋದಿ ಅವರು, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಸ್ಟ್ಯಾಚು ಆಫ್ ಯೂನಿಟಿಗೆ ನಮ್ಮ ಮಾಜಿ ಪ್ರಧಾನಿ ದೇವೇಗೌಡಜೀ ಅವರು ಭೇಟಿ ನೀಡಿ ವೀಕ್ಷಿಸಿರುವುದು ನನಗೆ ಅತ್ಯಂತ ಸಂತೋಷವಾಗಿದೆ. ಇದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಗುಜರಾತ್‍ನ ಕೆವೆಡಿಯಾದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟೆಗೆ ಶನಿವಾರ ಹೆಚ್.ಡಿ. ದೇವೆಗೌಡರು ಭೇಟಿ ನೀಡಿ, ವಿಶ್ವದ ಅತ್ಯಂತ ಎತ್ತರದ ಪಟೇಲ್ ಪುತ್ಥಳಿ ವೀಕ್ಷಿಸಿ ಗೌರವ ಸಮರ್ಪಿಸಿದರು.

ಸ್ಟ್ಯಾಚು ಆಫ್ ಯೂನಿಟಿ (ಏಕತೆಯ ಪ್ರತಿಮೆಗೆ) ಸ್ಥಳಕ್ಕೆ ಬೆಳಗ್ಗೆ ಭೇಟಿ ನೀಡಿದ ಅವರು, ವಿಶ್ವದ ಅತ್ಯಂತ ಭವ್ಯ ಪುತ್ಥಳಿಯನ್ನು ನೋಡಿ ವಿಸ್ಮಿತರಾದರು. ಕೆಲಕಾಲ ಮಾಜಿ ಪ್ರಧಾನಿ ದೇವೇಗೌಡರು ಅಲ್ಲೇ ಇದ್ದು ಭಾರತದ ಉಕ್ಕಿನ ಮನುಷ್ಯನಿಗೆ ಗೌರವ ಸಲ್ಲಿಸಿದರು. ನಂತರ ಅತಿ ಗಣ್ಯ ವ್ಯಕ್ತಿಗಳ ಭೇಟಿ ಪುಸ್ತಕದಲ್ಲಿ ಪ್ರತಿಮೆಯ ಅಗಾಧ ವಿನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟಿಪ್ಪಣಿ ಬರೆದಿರುವುದು ವಿಶೇಷವಾಗಿತ್ತು. ಸ್ಟ್ಯಾಚು ಆಫ್ ಯೂನಿಟಿ ವೀಕ್ಷಿಸಿದ ಗೌಡರು, ಅಲ್ಲಿಂದ ಗುರುದೇಶ್ವರ ದತ್ತ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Intro:ಬೆಂಗಳೂರು : ಗುಜರಾತ್‍ನ ಕೆವೆಡಿಯಾದಲ್ಲಿರುವ ವಿಶ್ವದ ಅತ್ಯಂತ ಎತ್ತರದ ಸರ್ದಾರ್ ವಲ್ಲಭ್ ಬಾಯಿ ಪಟೇಲ್ ಪ್ರತಿಮೆಯನ್ನು ವೀಕ್ಷಿಸಿದ ಮಾಜಿ ಪ್ರಧಾನಮಂತ್ರಿ , ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ್ದಾರೆ.Body:ಈ ಕುರಿತು ಟ್ವಿಟ್ ಮಾಡಿರುವ ಮೋದಿ ಅವರು, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ್ ಬಾಯಿ ಪಟೇಲ್ ಅವರ ಸ್ಟ್ಯಾಚು ಆಫ್ ಯೂನಿಟಿಗೆ ನಮ್ಮ ಮಾಜಿ ಪ್ರಧಾನಿ ದೇವೇಗೌಡಜೀ ಅವರು ಭೇಟಿ ನೀಡಿ ವೀಕ್ಷಿಸಿರುವುದು ನನಗೆ ಅತ್ಯಂತ ಸಂತೋಷವಾಗಿದೆ. ಇದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಗುಜರಾತ್‍ನ ಕೆವೆಡಿಯಾದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟಿಗೆ ನಿನ್ನೆ ಹೆಚ್.ಡಿ. ದೇವೇಗೌಡರು ವಿಶ್ವದ ಅತ್ಯಂತ ಎತ್ತರದ ಪಟೇಲ್ ಪುತ್ಥಳಿ ವೀಕ್ಷಿಸಿ ಗೌರವ ಸಮರ್ಪಿಸಿದರು.
ಸ್ಟ್ಯಾಚು ಆಫ್ ಯೂನಿಟಿ (ಏಕತೆಯ ಪ್ರತಿಮೆಗೆ) ಸ್ಥಳಕ್ಕೆ ಬೆಳಗ್ಗೆ ಭೇಟಿ ನೀಡಿದ ಅವರು, ವಿಶ್ವದ ಅತ್ಯಂತ ಭವ್ಯ ಪುತ್ಥಳಿಯನ್ನು ನೋಡಿ ವಿಸ್ಮಿತರಾದರು. ಕೆಲಕಾಲ ಅಲ್ಲೇ ಇದ್ದ ಮಾಜಿ ಪ್ರಧಾನಿ ದೇವೇಗೌಡರು ಭಾರತದ ಉಕ್ಕಿನ ಮನುಷ್ಯನಿಗೆ ಗೌರವ ಸಲ್ಲಿಸಿದರು.
ನಂತರ ಅತೀಗಣ್ಯ ವ್ಯಕ್ತಿಗಳ ಭೇಟಿ ಪುಸ್ತಕದಲ್ಲಿ ಪ್ರತಿಮೆಯ ಅಗಾಧ ವಿನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟಿಪ್ಪಣಿ ಬರೆದಿರುವುದು ವಿಶೇಷವಾಗಿತ್ತು.
ಸ್ಟ್ಯಾಚು ಆಫ್ ಯೂನಿಟಿ ವೀಕ್ಷಿಸಿದ ಗೌಡರು, ಅಲ್ಲಿಂದ ಗುರುದೇಶ್ವರ ದತ್ತ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.