ETV Bharat / state

ದೊಡ್ಡಗೌಡರ ನಿವಾಸದಲ್ಲಿ ಗೌರಿ ಹಬ್ಬದ ಸಂಭ್ರಮ: ನಾಡಿನ ಜನತೆಗೆ ಶುಭ ಕೋರಿದ ಹೆಚ್​ಡಿಡಿ - ಗೌರಿ- ಗಣೇಶ ಹಬ್ಬದ ಆಚರಿಸಿದ ದೇವೇಗೌಡ

ರಾಜ್ಯದ ಸಮಸ್ತ ಜನತೆಗೆ ಆರೋಗ್ಯ ಭಾಗ್ಯ, ನೆಮ್ಮದಿ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತ ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಆಚರಣೆಯ ಉತ್ಸಾಹದಲ್ಲಿ ಉದಾಸೀನ ಸಲ್ಲದು. ನಾವೆಲ್ಲರೂ ಕೊರೊನಾ ನಿವಾರಕ ಮಾರ್ಗದರ್ಶಿ ಸೂತ್ರಗಳನ್ನು ತಪ್ಪದೇ ಪಾಲಿಸುವ ಕರ್ತವ್ಯ ಪಾಲನೆ ಮಾಡೋಣ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

former-pm-devegowda-celebrated-gauri-festival
ದೊಡ್ಡನಗೌಡರ ನಿವಾಸದಲ್ಲಿ ಗೌರಿ ಹಬ್ಬದ ಸಂಭ್ರಮ
author img

By

Published : Sep 9, 2021, 1:27 PM IST

Updated : Sep 9, 2021, 2:30 PM IST

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಇಂದು ಹಬ್ಬದ ಸಡಗರ ಮನೆ ಮಾಡಿತ್ತು. ದೇವೇಗೌಡರು ಅವರ ಪತ್ನಿ ಚನ್ನಮ್ಮ ಹಾಗೂ ಕುಟುಂಬಸ್ಥರೊಂದಿಗೆ ಬೆಂಗಳೂರಿನ ಪದ್ಮನಾಭನಗರದಲ್ಲಿನ ತಮ್ಮ ನಿವಾಸದಲ್ಲಿ ಸರಳವಾಗಿ ಗೌರಿ ಹಬ್ಬವನ್ನು ಆಚರಿಸಿದರು.

former-pm-devegowda-celebrated-gauri-festival
ದೇವೇಗೌಡರ ನಿವಾಸದಲ್ಲಿ ಗೌರಿ ಹಬ್ಬದ ಸಂಭ್ರಮ

ದೇವೇಗೌಡರು ಪತ್ನಿ ಚನ್ನಮ್ಮ ಅವರಿಗೆ ಕಂಕಣ ಕಟ್ಟಿದರು. ನಂತರ ಚನ್ನಮ್ಮ ಅವರು ಪತಿಗೆ ಕಂಕಣ ಕಟ್ಟಿ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಗೌರಿ - ಗಣೇಶ ಹಬ್ಬದ ಶುಭಾಶಯ ಕೋರಿದ ದೇವೇಗೌಡರು, ಜಗನ್ಮಾತೆ ಗೌರಿ ಎಲ್ಲರಿಗೂ ಸುಖ, ಶಾಂತಿ ಮತ್ತು ಆರೋಗ್ಯ ಕರುಣಿಸಲಿ ಮತ್ತು ವರಸಿದ್ದಿ ವಿನಾಯಕ ಎಲ್ಲರ ಇಷ್ಟಾರ್ಥಗಳನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.

ದೊಡ್ಡಗೌಡರ ನಿವಾಸದಲ್ಲಿ ಗೌರಿ ಹಬ್ಬದ ಸಂಭ್ರಮ

ಕೊರೊನಾ ಮಹಾಮಾರಿಯ ಸಂಕಷ್ಟದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಆತಂಕ ಮತ್ತು ಭಯ ಮನೆ ಮಾಡಿದೆ. ಈ ಸಂದರ್ಭದಲ್ಲಿಯೇ ಪ್ರತಿ ವರ್ಷದಂತೆ ಗೌರಿ ಮತ್ತು ಗಣೇಶನ ಹಬ್ಬ ಬಂದಿದೆ. ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಬೇಕಾಗಿದ್ದ ಹಬ್ಬಕ್ಕೆ ಕಾರ್ಮೋಡ ಕವಿದಿದೆ. ಆದರೂ, ಆಸ್ತಿಕರ ಶ್ರದ್ಧೆ ಕಡಿಮೆಯಾಗಿಲ್ಲ. ಸರ್ವಮಂಗಳ ಮಾಂಗಲ್ಯೆ ಆದ ಶ್ರೀ ಗೌರಿ ಮತ್ತು ವಿಘ್ನ ನಿವಾರಕ ಗಣೇಶ ಈ ಸಂಕಷ್ಟದಿಂದ ನಮ್ಮ ರಾಷ್ಟ್ರ ಮತ್ತು ನಾಡನ್ನು ಪಾರು ಮಾಡಲಿ ಎಂದು ಪ್ರಾರ್ಥಿಸಿದ್ದಾರೆ.

ಚನ್ನಮ್ಮ ಅವರಿಗೆ ಕಂಕಣ ಕಟ್ಟಿದ ದೇವೇಗೌಡರು

ರಾಜ್ಯದ ಸಮಸ್ತ ಜನತೆಗೆ ಆರೋಗ್ಯ ಭಾಗ್ಯ, ನೆಮ್ಮದಿ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತ ನಾಡಿನ ಜನತೆಗೆ ಶುಭಾಶಯಗಳನ್ನು ಕೋರುತ್ತೇನೆ. ಹಬ್ಬದ ಆಚರಣೆಯ ಉತ್ಸಾಹದಲ್ಲಿ ಉದಾಸೀನ ಸಲ್ಲದು. ನಾವೆಲ್ಲರೂ ಕೊರೊನಾ ನಿವಾರಕ ಮಾರ್ಗದರ್ಶಿ ಸೂತ್ರಗಳನ್ನು ತಪ್ಪದೇ ಪಾಲಿಸುವ ಕರ್ತವ್ಯ ಪಾಲನೆ ಮಾಡೋಣ ಎಂದಿದ್ದಾರೆ.

ಇದನ್ನೂ ಓದಿ: ಸರ್ಕಾರದ ಮಾರ್ಗಸೂಚಿಗೆ ಗಣೇಶ ಉತ್ಸವ ಸಮಿತಿ ವಿರೋಧ.. ಬಿಬಿಎಂಪಿ ಎದುರು ಪ್ರತಿಭಟನೆ

Last Updated : Sep 9, 2021, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.