ETV Bharat / state

BSYಗೆ ಅಧಿಕಾರ ಕೊಟ್ರೆ ರೇವಣ್ಣ ಡಿಸಿಎಂ ಆಗ್ತಾರೆ ಎಂದು HDK ಅಧಿಕಾರ ಬಿಟ್ಟು ಕೊಡಲಿಲ್ಲ : ಜಮೀರ್ ಅಹಮದ್ - ಬೆಂಗಳೂರಿನಲ್ಲಿ ಜಮೀರ್ ಅಹಮದ್ ಖಾನ್ ಹೇಳಿಕೆ

ಸಿಎಂ ಇಬ್ರಾಹಿಂ ಅವರನ್ನ ಜಾಫರ್ ಷರೀಫ್ ವಿರುದ್ಧ ನಿಲ್ಲಿಸಿ ಸೋಲಿಸಿದ್ರು. ಜಾಫರ್ ಷರೀಫ್ ಬಗ್ಗೆ ಜೆಡಿಎಸ್‌ನವರು ಕಾಳಜಿ ತೋರಿಸಿದ್ರಾ..? ಜಾಫರ್ ಷರೀಫ್ ಅವರ ಮೊಮ್ಮಗನನ್ನು ಹೆಬ್ಬಾಳದಲ್ಲಿ ಸೋಲಿಸಿದ್ದು ಜೆಡಿಎಸ್. ಅವನ ವಿರುದ್ಧ ಮುಸ್ಲಿಂ ಅಭ್ಯರ್ಥಿ ಹಾಕಿ ಸೋಲಿಸಿದ್ರು. ಫಾರೂಕ್ ಅವರನ್ನ ಡಿಸಿಎಂ ಮಾಡಿ ಗೃಹ ಮಂತ್ರಿ ಮಾಡ್ತೀವಿ ಎಂದು 2018ರ ಪ್ರಚಾರ ಸಮಯದಲ್ಲಿ ಹೇಳಿದ್ರೀ, ಮಾಡಿದ್ರಾ..? ಗೆದ್ದ ಬಳಿಕ ಪರಿಷತ್ ಸದಸ್ಯ ಮಾಡಿದ್ದೇ ಜಾಸ್ತಿ ಎಂದು ಹೇಳಿದ್ರೀ.. ಇದು ಮುಸ್ಲಿಮರ ಮೇಲೆ ಇರೋ ಕಾಳಜಿನಾ ಎಂದು ಜಮೀರ್ ಪ್ರಶ್ನೆ ಹಾಕಿದರು..

ಬೆಂಗಳೂರಿನಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ

author img

By

Published : Oct 18, 2021, 5:04 PM IST

ಬೆಂಗಳೂರು : ಸಿದ್ದರಾಮಯ್ಯ ರಾಜಕೀಯವಾಗಿ ಬೆಳೆಸುತ್ತಾರೆ ಹೊರತು ರಾಜಕೀಯವಾಗಿ ಯಾರನ್ನೂ ಮುಗಿಸಲ್ಲ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಜಮೀರ್ ಅಹ್ಮದ್ ಖಾನ್ ತೀವ್ರ ವಾಗ್ದಾಳಿ ನಡೆಸಿದ್ದು, ಜೆಡಿಎಸ್‌ನಲ್ಲಿ ಸಿದ್ದರಾಮಯ್ಯ ಇರಬೇಕಾದ್ರೆ ಕುಮಾರಸ್ವಾಮಿ ವಿಷ ಕಾರುತ್ತಿದ್ರು. ನಾನು ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದೆ. ಆದರೆ, ನನ್ನನ್ನ ಮುಗಿಸಬೇಕು ಅಂದುಕೊಂಡಿದ್ರೇ ಆಹಾರ ಖಾತೆಯನ್ನ ಕೊಡಿಸ್ತಿರಲಿಲ್ಲ.

ಹೆಚ್‌ಡಿಕೆ ವಿರುದ್ಧ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಮತ್ತೆ ವಾಗ್ದಾಳಿ ನಡೆಸಿರುವುದು..

ನನಗೆ ಸಮ್ಮಿಶ್ರ ಸರ್ಕಾರದಲ್ಲಿ ಇವರು ಹಜ್ ಖಾತೆ ಕೊಟ್ಟಿದ್ರು. ಕುಮಾರಸ್ವಾಮಿ ನನ್ನ ಯೋಗ್ಯತೆ ಅದೇನಾ..? ನಾನು ಕಾಂಗ್ರೆಸ್ ಬಂದ ತಕ್ಷಣ ನನಗೆ ಅಹಾರ ಖಾತೆ ಕೊಟ್ರು. ಜಾಫರ್ ಷರೀಫ್ ಮೊಮ್ಮಗನನ್ನ ಮುಗಿಸಿದ್ದು ಕುಮಾರಸ್ವಾಮಿ. ನಾನು ಮುಸ್ಲಿಮರಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದೆ. ದೇವೇಗೌಡರ ಬಳಿಯೂ ಕೇಳಿಕೊಂಡೆ. ಅದಕ್ಕೆ ನಾನು ಪ್ರಚಾರಕ್ಕೆ ಹೋಗಲಿಲ್ಲ ಎಂದರು.

ದೇವೇಗೌಡರು ನನ್ನನ್ನು ಮೀರ್ ಸಾದಿಕ್ ಎಂದು ಕರೆದ್ರು. ನಾನು ಅಭ್ಯರ್ಥಿ ಹಾಕಬೇಡಿ ಎಂದು ಹೇಳಿದ್ರೂ ಹಾಕಿದ್ರು. ಇದು ನಿಮ್ಮ ಮುಸ್ಲಿಂ ಮೇಲಿನ ಕಾಳಜಿಯೇ ಕುಮಾರಸ್ವಾಮಿ.. ಅಂದು ಬೈರತಿ ಸುರೇಶ್‌ಗೆ ಮತ ಹಾಕಿಸಲು ಎಷ್ಟಕ್ಕೆ ಡೀಲ್ ಮಾಡಿದ್ರೀ.. ಅಲ್ಪಸಂಖ್ಯಾತರನ್ನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ. ನೀವು ದೆಹಲಿಗೆ ಹೋಗಬೇಕಿಲ್ಲ, ನಮ್ಮದು ಹೈಕಮಾಂಡ್ ಕೇಳಬೇಕು. ನೀವು ಪದ್ಮನಾಭನಗರದಲ್ಲಿ ಅನೌನ್ಸ್ ಮಾಡಬಹುದು, ಮಾಡಿ ಎಂದು ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು.

ಹೆಚ್​​ಡಿಕೆ ಸ್ವಂತ ಅಣ್ಣಾ ರೇವಣ್ಣನ ಏಳಿಗೆ ಸಹಿಸಿಕೊಳ್ಳಲಿಲ್ಲ : ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಬಿಎಸ್​​ವೈಗೆ ಅಧಿಕಾರ ಹಂಚಲಿಲ್ಲ. ಅದಕ್ಕೆ ಪ್ರಮುಖ ಕಾರಣ ಹೆಚ್ ಡಿ ರೇವಣ್ಣಗೆ ಅಧಿಕಾರ ಕೊಡಬಾರದು ಅನ್ನೋದು. ಹೆಚ್ ಡಿ ರೇವಣ್ಣ ಡಿಸಿಎಂ ಆಗ್ತಾರೆ ಅನ್ನೋ‌ ಕಾರಣಕ್ಕೆ ಅಂದು ಕುಮಾರಸ್ವಾಮಿ ಬಿಎಸ್​​ವೈಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ.

ಸ್ವತಃ ಅವರ ಅಣ್ಣ ಬೆಳೆಯೋದನ್ನ ಕುಮಾರಸ್ವಾಮಿ ಸಹಿಸಲಿಲ್ಲ. ಅಲ್ಪಸಂಖ್ಯಾತರು ಬೆಳೆಯೋದನ್ನ ಕುಮಾರಸ್ವಾಮಿ ಸಹಿಸ್ತಾರಾ? ಫಾರುಕ್ ಅವರನ್ನ ಮಂತ್ರಿ ಮಾಡಲಿಲ್ಲ. ಫಾರುಕ್ ಅವರನ್ನ ಡಿಸಿಎಂ ಮಾಡಿ ಹೋಮ್ ಮಿನಿಸ್ಟರ್ ಮಾಡ್ತೇನೆ ಎಂದಿದ್ರು.

ಫಾರುಕ್ ಅವರನ್ನ ಮಂತ್ರಿ ಮಾಡಿದ್ರಾ ಕುಮಾರಸ್ವಾಮಿ ಅವರೇ.? ಸ್ವಂತ ಅಣ್ಣಾ ರೇವಣ್ಣ ಅವರನ್ನೇ ಸಹಿಸಿಕೊಳ್ಳಲಿಲ್ಲ. ಯಡಿಯೂರಪ್ಪಗೆ ಅಧಿಕಾರ ಬಿಟ್ಟು ಕೊಟ್ರೆ ರೇವಣ್ಣ ಡಿಸಿಎಂ ಆಗ್ತಾನೆ ಅಂತಾ ಅಧಿಕಾರ ಬಿಟ್ಟು ಕೊಡಲಿಲ್ಲ. ದೇವೇಗೌಡರು ಜಾತ್ಯತೀತ ನಾಯಕ. ಕುಮಾರಸ್ವಾಮಿ ದೇವೇಗೌಡರಲ್ಲಿ ಒಂದು ಪರ್ಸೆಂಟ್ ಸಹ ಇಲ್ಲ ಎಂದರು.

ರಾಮನಗರ ಮುಸ್ಲಿಂ ಅಭ್ಯರ್ಥಿಗೆ ಬಿಟ್ಟು ಕೊಡಬೇಕಿತ್ತು. ಕುಮಾರಸ್ವಾಮಿ ಎರಡು ಕಡೆ ನಿಲ್ಲುವ ಅಗತ್ಯ ಏನಿತ್ತು? ಬೈ ಎಲೆಕ್ಷನ್‌ನಲ್ಲಾದ್ರೂ ಹೇಳಬೇಕಿತ್ತು. ರಾಮನಗರದಲ್ಲಿ ಮುಸ್ಲಿಂ ಅಭ್ಯರ್ಥಿ ಈ ಹಿಂದೆ ಗೆದ್ದಿದ್ರು. ಅನಿತಾಕ್ಕನಿಗೆ ಕೊಡದೇ ಮುಸ್ಲಿಂ ಅವರಿಗೆ ಕೊಡಬೇಕಿತ್ತು. ಮುಸ್ಲಿಂ ಪರ ಕಾಳಜಿ ತೋರಿಸಬೇಕಿತ್ತು. ಜಾಫರ್ ಷರೀಫ್ ಅವರನ್ನ ರಾಜಕೀಯವಾಗಿ ಕೊಂದು ಮುಗಿಸಿದ್ದು ಜೆಡಿಎಸ್.

ಸಿಎಂ ಇಬ್ರಾಹಿಂ ಅವರನ್ನ ಜಾಫರ್ ಷರೀಫ್ ವಿರುದ್ಧ ನಿಲ್ಲಿಸಿ ಸೋಲಿಸಿದ್ರು. ಜಾಫರ್ ಷರೀಫ್ ಬಗ್ಗೆ ಜೆಡಿಎಸ್‌ನವರು ಕಾಳಜಿ ತೋರಿಸಿದ್ರಾ..? ಜಾಫರ್ ಷರೀಫ್ ಅವರ ಮೊಮ್ಮಗನನ್ನು ಹೆಬ್ಬಾಳದಲ್ಲಿ ಸೋಲಿಸಿದ್ದು ಜೆಡಿಎಸ್. ಅವನ ವಿರುದ್ಧ ಮುಸ್ಲಿಂ ಅಭ್ಯರ್ಥಿ ಹಾಕಿ ಸೋಲಿಸಿದ್ರು. ಫಾರೂಕ್ ಅವರನ್ನ ಡಿಸಿಎಂ ಮಾಡಿ ಗೃಹ ಮಂತ್ರಿ ಮಾಡ್ತೀವಿ ಎಂದು 2018ರ ಪ್ರಚಾರ ಸಮಯದಲ್ಲಿ ಹೇಳಿದ್ರೀ, ಮಾಡಿದ್ರಾ..? ಗೆದ್ದ ಬಳಿಕ ಪರಿಷತ್ ಸದಸ್ಯ ಮಾಡಿದ್ದೇ ಜಾಸ್ತಿ ಎಂದು ಹೇಳಿದ್ರೀ.. ಇದು ಮುಸ್ಲಿಮರ ಮೇಲೆ ಇರೋ ಕಾಳಜಿನಾ ಎಂದು ಜಮೀರ್ ಪ್ರಶ್ನೆ ಹಾಕಿದರು.

ಸಿಎಂ ಇಬ್ರಾಹಿಂ ಒಳ್ಳೆಯ ಭಾಷಣಕಾರ. ಸಿದ್ದರಾಮಯ್ಯ ಅವರನ್ನ ಬೆಳೆಸಿದ್ರು. ಟಿಕೆಟ್ ಕೊಟ್ರೆ ಮೂರನೇ ಸ್ಥಾನಕ್ಕೆ ಹೋದ್ರು. ಒಂದು ಕಾಲು ಕಾಂಗ್ರೆಸ್ ಒಂದು ಕಾಲು ಜೆಡಿಎಸ್‌ನಲ್ಲಿ ಇಟ್ಟಿದ್ದಾರೆ. ಸಿಎಂ ಇಬ್ರಾಹಿಂ ಟಿಪ್ಪು ಜಯಂತಿ ವಿರೋಧ ಮಾಡಿದ್ರು ಎಂದು ಹೇಳಿದ್ದಾರೆ. ಹಾಗಾದ್ರೆ ಟಿಪ್ಪು ಜಯಂತಿಯಲ್ಲಿ ಯಾಕೆ ಭಾಗವಹಿಸಿದ್ರು ಎಂದು ಇಬ್ರಾಹಿಂ ವಿರುದ್ಧವೂ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.