ಬೆಂಗಳೂರು: ನಗರದ ಕೆ.ಆರ್.ಪುರಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ಮಾಜಿ ಸಚಿವ ಯು.ಟಿ.ಖಾದರ್ ಮತಯಾಚನೆ ಮಾಡಿದ್ರು.
ನಾರಾಯಣಸ್ವಾಮಿ ಯುವಕರು, ಜನಪರ ಕೆಲಸ ಮಾಡೋರು. ಹೀಗಾಗಿ ಜನ ಇವರನ್ನು ಗೆಲ್ಲಿಸ್ತಾರೆ. ಸ್ವಾರ್ಥ ರಾಜಕಾರಣಕ್ಕೆ ಜನ ಉತ್ತರ ಕೊಡುತ್ತಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು. ರಾಮಮೂರ್ತಿ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ಮತಯಾಚಿಸಿ ಬಳಿಕ ಮಾಜಿ ಸಚಿವ ಖಾದರ್ ಮಾತನಾಡಿದ್ರು. ಭಯಮುಕ್ತ ಕ್ಷೇತ್ರ ಬಿಟ್ಟು ಪ್ರೀತಿ ವಿಶ್ವಾಸದ ಕ್ಷೇತ್ರ ಮಾಡೋಕೆ ಜನ ನಾರಾಯಣಸ್ವಾಮಿರನ್ನು ಬೆಂಬಲಿಸುತ್ತಾರೆ. ನಾರಾಯಣಸ್ವಾಮಿ ಅವರು ಅಧಿಕ ಮತದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಬೈರತಿ ಬಸವರಾಜ್ ಅವರನ್ನ ಮಿನಿಸ್ಟರ್ ಮಾಡ್ತೀವಿ ಅನ್ನೋ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಜನರ ಪರ ಇದ್ದಿದ್ದರೆ ಮುಂಬೈಗೆ ಯಾಕೆ ಹೋಗಬೇಕಿತ್ತು. ಮೊಬೈಲ್ ಯಾಕೆ ಸ್ವಿಚ್ ಆಫ್ ಮಾಡಿಕೊಳ್ಳಬೇಕಿತ್ತು. ಸಚಿವರಾಗುವುದಕ್ಕೆ ಅವರು ದೆಹಲಿಗೆ ಹೋಗಿದ್ದರು. ಯಡಿಯೂರಪ್ಪ ಸಿಎಂ ಆಗೋಕೆ ಇವ್ರು ಬೆಂಬಲ ಕೊಟ್ಟರು. ಬಿಜೆಪಿಗೆ ಜನರ ಪರ ಕಾಳಜಿ ಇಲ್ಲ. ಕಾಂಗ್ರೆಸ್ ಪಕ್ಷವಾಗಿದ್ರೆ ಜನರಿಗೆ ರಕ್ಷಣೆ ಕೊಡ್ತೀವಿ. ಜನಪರ ಕೆಲಸ ಮಾಡ್ತೀವಿ ಅಂತ ಹೇಳ್ತಿತ್ತು. ಆದರೆ ಬಿಜೆಪಿ ಮಂತ್ರಿ ಮಾಡ್ತೀವಿ ಅಂತ ಹೇಳ್ತಿದೆ. ಬಿಜೆಪಿಗೆ ಅಧಿಕಾರ ಬಿಟ್ಟು ಇನ್ನೇನು ಬೇಡ ಎಂದು ಖಾದರ್ ವಾಗ್ದಾಳಿ ನಡೆಸಿದ್ರು.