ETV Bharat / state

ಉಪವಾಸ ಆತ್ಮಹತ್ಯೆ ಯತ್ನವಲ್ಲ, ಗಾಂಧೀಜಿ ಹಾಕಿಕೊಟ್ಟ ಹೋರಾಟದ ಹಾದಿ: ಮಾಜಿ ಸಚಿವ ಸುರೇಶ್ ಕುಮಾರ್ - ಪುನೀತ್ ಕೆರೆಹಳ್ಳಿ

ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಿರುವುದಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

former-minister-suresh-kumar-shows-anger-in-facebook-post
ಉಪವಾಸ ಆತ್ಮಹತ್ಯೆ ಯತ್ನವಲ್ಲ, ಗಾಂಧೀಜಿ ಹಾಕಿಕೊಟ್ಟ ಹೋರಾಟದ ಹಾದಿ: ಸುರೇಶ್ ಕುಮಾರ್
author img

By ETV Bharat Karnataka Team

Published : Oct 8, 2023, 10:06 PM IST

ಬೆಂಗಳೂರು: ಯಾವುದೇ ಆಧಾರ ಇಲ್ಲದೆ ಓರ್ವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸುವುದು ಎಷ್ಟು ತಪ್ಪೊ, ಅದಕ್ಕಿಂತ ದೊಡ್ಡ ತಪ್ಪು ಉಪವಾಸ ಸತ್ಯಾಗ್ರಹವನ್ನು ಆತ್ಮಹತ್ಯೆ ಯತ್ನ ಎಂದು ಪ್ರಕರಣ ದಾಖಲು ಮಾಡುವುದು ಎಂದು ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿರುವುದಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಟೀಕಿಸಿದ್ದಾರೆ.

ಪುನೀತ್ ಕೆರೆಹಳ್ಳಿ ವಿರುದ್ಧದ ಎಫ್ಐಆರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸುರೇಶ್ ಕುಮಾರ್
ಈ ಎಫ್ಐಆರ್ ಓದಿದರೆ ಇದೊಂದು ಪೊಲೀಸರ ಅತ್ಯಂತ ಬುದ್ಧಿಹೀನ ಕಾಯ್ದೆ ಅನಿಸುತ್ತದೆ. ಒಂದು ಉಪವಾಸ ಸತ್ಯಾಗ್ರಹವನ್ನು ಆತ್ಮಹತ್ಯೆ ಯತ್ನ ಎಂದು ಪರಿವರ್ತಿಸಲು ಹೊರಟಿರುವುದು ಕರ್ನಾಟಕ ಪೊಲೀಸರ ಸಾಹಸವೆಂದು ಹೇಳಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

  • " class="align-text-top noRightClick twitterSection" data="">

ಮಹಾತ್ಮ ಗಾಂಧಿಯವರು ಬ್ರಿಟಿಷರ ವಿರುದ್ಧ ಹೋರಾಡುವಾಗ ಹಾಕಿಕೊಟ್ಟ ಹೋರಾಟಗಳ ಅನೇಕ ಹಾದಿಗಳಲ್ಲಿ ಉಪವಾಸ ಸತ್ಯಾಗ್ರಹವೂ ಕೂಡ ಒಂದು. ಆ ಉಪವಾಸ ಸತ್ಯಾಗ್ರಹ ಅಮರಣಾಂತ ಉಪವಾಸ ಸತ್ಯಾಗ್ರಹವಾಗಿಯೂ ಅಥವಾ ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹವಾಗಿಯೂ ನಡೆಯಬಹುದು. 1986-87ರಲ್ಲಿ ಅಂದಿನ ಬೆಂಗಳೂರು ನಗರಸಭೆಯ ಸದಸ್ಯರಾಗಿದ್ದ ರಾಮಚಂದ್ರಗೌಡ, ಎಂಸಿ ಅಶ್ವತನಾರಾಯಣ್, ಶ್ರೀನಿವಾಸ್ ಮೂರ್ತಿಯವರು ಹಾಗೂ ನಾನು ನಗರಸಭೆಯ ಆಸ್ತಿ ತೆರಿಗೆಯ ಅವೈಜ್ಞಾನಿಕ ಪರಿಷ್ಕರಣ ವಿರುದ್ಧ ಹೋರಾಟ ಕೈಗೊಂಡಿದ್ದೆವು, ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಸ್ತಿಯ ತೆರಿಗೆಯನ್ನು ತಾನೇ ನಿರ್ಧರಿಸುವಂತೆ ಸ್ವಯಂ ಮೌಲ್ಯಮಾಪನ ಯೋಜನೆ ಪದ್ಧತಿಯನ್ನು ಜಾರಿಗೆ ತರಬೇಕೆಂದು ಮೆಯೋಹಾಲ್ ಆವರಣದಲ್ಲಿ ಅನಿರ್ದಿಷ್ಟ ಅವಧಿಗಳ ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೆವು. ನಮ್ಮ ಉಪವಾಸ ಸತ್ಯಾಗ್ರಹದ 7ನೇ ದಿನ ನಮ್ಮ ಆರೋಗ್ಯ ಸ್ಥಿತಿ ಬಿಗಡಾಯಿಸಿದಾಗ ನಮ್ಮನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ನಮ್ಮ ವಿರುದ್ಧ ಆತ್ಮಹತ್ಯೆಗೆ ಯತ್ನ ಎಂಬ ಆರೋಪ ಪ್ರಕರಣ ದಾಖಲಾಗಿರಲಿಲ್ಲ ಎಂದು ಇಂದಿನ ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.

1996ನೇ ಇಸವಿಯಲ್ಲಿ ಒಂದು ಖಾಸಗಿ ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕತ್ತಿ ತೂಗಾಡುತ್ತಿದ್ದಾಗ, ನಾನು ಅವರ ಪರವಾಗಿ ಹೋರಾಟ ಕೈಗೊಂಡೆ. ಅನಿರ್ದಿಷ್ಟಾವಧಿ ಕಾಲ ಉಪವಾಸ ಮುಷ್ಕರ ಕೈಗೊಂಡಿದ್ದೆ. ನನ್ನನ್ನು ಉಪವಾಸ ಮಾರ್ಗದಿಂದ ಹೊರತರಲು ದಿವಂಗತ ಎಚ್ ಎನ್ ನಾಗೇಗೌಡ, ವಾಟಾಳ್ ನಾಗರಾಜ್ ಮುಂತಾದವರು ನಾಯಕರು ಪ್ರಯತ್ನಿಸಿದ್ದರು. ಆದರೆ ನಾನು ಉಪವಾಸ ಮುಷ್ಕರದ ನನ್ನ ನಿಲುವನ್ನು ಬದಲಾಯಿಸಲಿಲ್ಲ. 8ನೇ ದಿನ ಉಪವಾಸ ಮುಷ್ಕರ ನನ್ನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದಾಗ ನನ್ನನ್ನು ಜಯದೇವ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ನನ್ನ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿರಲಿಲ್ಲ. ಇದೀಗ ಗೂಂಡಾ ಕಾಯ್ದೆಯಡಿ ತನ್ನನ್ನು ಬಂಧಿಸಿದ್ದನ್ನು ವಿರೋಧಿಸಿ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿರುವುದು ಒಂದು ವಿಡಂಬಣೆಯೇ ಸರಿ ಎಂದಿದ್ದಾರೆ.

ದೇಶಕ್ಕೆ ಮಹಾತ್ಮ ಗಾಂಧೀಜಿ ಹಾಕಿಕೊಟ್ಟ ಹೋರಾಟದ ಹಾದಿ ಉಪವಾಸ ಸತ್ಯಾಗ್ರಹ ಇಂದು ಆತ್ಮಹತ್ಯೆ ಯತ್ನ ಆಗಿ ಪರಿವರ್ತನೆಯಾಗಿರುವುದು ಒಂದು ಪ್ರಹಸನ. ಯಾವುದೇ ಆಧಾರ ಇಲ್ಲದೆ ಓರ್ವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸುವುದು ಎಷ್ಟು ತಪ್ಪೊ, ಅದಕ್ಕಿಂತ ದೊಡ್ಡ ತಪ್ಪು, ಉಪವಾಸ ಸತ್ಯಾಗ್ರಹವನ್ನು ಆತ್ಮಹತ್ಯೆ ಯತ್ನ ಪ್ರಕರಣ ದಾಖಲು ಮಾಡುವುದು ಎಂದು ಪೊಲೀಸರ ನಡೆಯನ್ನು ಸುರೇಶ್​ ಕುಮಾರ್​ ಲೇವಡಿ ಮಾಡಿದ್ದಾರೆ‌.

ಇದನ್ನೂ ಓದಿ: ಆತ್ಮಹತ್ಯೆ ಯತ್ನ ಆರೋಪ: ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.