ETV Bharat / state

ಸತೀಶ್ ಜಾರಕಿಹೊಳಿ ಕಾಂಗ್ರೆಸ್​​ನಲ್ಲಿ ಮೂಲೆಗುಂಪಾಗಲಿದ್ದಾರೆ, ಬೆಳಗಾವಿ ಟಿಕೆಟ್ ಕೂಡ ಕುಟುಂಬದ ಕೈ ತಪ್ಪಲಿದೆ: ಮುನಿರತ್ನ - ಮಾಜಿ ಸಚಿವ ಮುನಿರತ್ನ

ಬೆಳಗಾವಿಯಲ್ಲಿ ಸಚಿವ ಸತೀಶ್​ ಜಾರಕಿಹೊಳಿ ಅವರಿಗೆ ಇದ್ದ ವರ್ಚಸ್ಸು ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಜಾರಕಿಹೊಳಿ ಮೂಲೆಗುಂಪು ಆಗಲಿದ್ದಾರೆ ಎಂದು ಮಾಜಿ ಸಚಿವ ಮುನಿರತ್ನ ಹೇಳಿದ್ದಾರೆ.

Etv Bharat
ಸತೀಶ್ ಜಾರಕಿಹೊಳಿ ಕಾಂಗ್ರೆಸ್​​ನಲ್ಲಿ ಮೂಲೆಗುಂಪಾಗಲಿದ್ದಾರೆ, ಬೆಳಗಾವಿ ಟಿಕೆಟ್ ಕೂಡ ಕುಟುಂಬದ ಕೈ ತಪ್ಪಲಿದೆ: ಮುನಿರತ್ನ
author img

By ETV Bharat Karnataka Team

Published : Oct 22, 2023, 1:05 PM IST

ಮಾಜಿ ಸಚಿವ ಮುನಿರತ್ನ ಹೇಳಿಕೆ

ಬೆಂಗಳೂರು : ಸಚಿವ ಸತೀಶ್ ಜಾರಕಿಹೊಳಿ ಭದ್ರಕೋಟೆಯ ಒಂದೊಂದೇ ಕಲ್ಲು ಕಳಚಿ ಹೋಗುತ್ತಿದೆ. ಸತೀಶ್ ಜಾರಕಿಹೊಳಿ ದುರ್ಬಲವಾಗುತ್ತಿದ್ದಾರೆ. ಬೆಳಗಾವಿಯಲ್ಲಿ ಅವರಿಗೆ ಇದ್ದ ವರ್ಚಸ್ಸು ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಅವರು ಮೂಲೆ ಗುಂಪು ಆಗುತ್ತಾರೆ. ಬೆಳಗಾವಿ ಟಿಕೆಟ್ ಕೂಡ ಹೆಬ್ಬಾಳ್ಕರ್ ಕಡೆಯವರ ಪಾಲಾಗಲಿದೆ ಎಂದು ಮಾಜಿ ಸಚಿವ ಮುನಿರತ್ನ ಭವಿಷ್ಯ ನುಡಿದಿದ್ದಾರೆ.

ವೈಯಾಲಿಕಾವಲ್ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ವಾದ ಮತ್ತೆ ಮುನ್ನಲೆಗೆ ಬಂದಿದೆ. ಮೊದಲು ಇದ್ದಂತ ವಾತಾವರಣ ನೀನಾ ನಾನಾ ಅಂತ ಇತ್ತು. ಅಂದರೆ ರಮೇಶ್ ಜಾರಕಿಹೊಳಿನಾ, ಹೆಬ್ಬಾಳ್ಕರ್​ನಾ ಅನ್ನುವಂತಿತ್ತು. ಈಗ ನಾನಾ, ನೀನಾ ಅಂತ ಆಗಿದೆ. ಇಷ್ಟೇ ವ್ಯತ್ಯಾಸ. ಏನೇ ಅದರೂ ಈ ರಾಜ್ಯಕ್ಕೆ, ಬೆಳಗಾವಿಗೆ ಹತ್ತಿರದ ಸಂಬಂಧವಿದೆ. ಏನೇ ಆದರೂ ಬೆಳಗಾವಿಯಿಂದಲೇ ಪ್ರಾರಂಭ ಆಗೋದು. ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿದೆವು, ಆಗಿನಿಂದಲೇ ನೀನಾ ನಾನಾ, ನಾನಾ ನೀನಾ ಅಂತ ಶುರುವಾಗಿದೆ. ಇವರ ಹಕ್ಕು ಚಲಾಯಿಸುವ ಹೋರಾಟ ಎಲ್ಲಿಗೆ ಹೋಗಿ ನಿಲ್ಲಲಿದೆ ನೋಡೋಣ. ನಾವು ಮೌನವಾಗಿದ್ದೇವೆ, ನಾವು ಏನು ಮಾಡೋದು ಇಲ್ಲ. 135 ಜನ ಗೆದ್ದಿದ್ದಾರೆ, ಜನ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಒಳ್ಳೆಯ ಆಡಳಿತ ಕೊಡಲಿ ಅಂತ ಬಯಸುತ್ತೇವೆ. ಅದನ್ನ ಬಿಟ್ಟು ಬೇರೇನು ಆಲೋಚನೆ ಇಲ್ಲ ಎಂದರು.

ಮುಂಬರುವ ಲೋಕಸಭಾ ಚುನಾವಣೆಗೆ ತಮ್ಮವರಿಗೆ ಟಿಕೆಟ್ ಕೊಡಿಸಲು ಉಭಯ ನಾಯಕರ ನಡುವೆ ಫೈಟ್ ನಡೆಯುತ್ತಿದೆ. ನನಗೆ ಗೊತ್ತಿರುವಂತೆ ಸತೀಶ್ ಜಾರಕಿಹೊಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಸತೀಶ್ ಜಾರಕಿಹೊಳಿ ಅವರು ಇಷ್ಟು ದಿನ ನಮ್ಮ ಬೆಳಗಾವಿ ನಮಗೆ ಭದ್ರಕೋಟೆ ಅಂದುಕೊಂಡಿದ್ದರು. ಅದೆಲ್ಲೋ ಒಂದು ಕಡೆ ಅವರ ಕೈ ತಪ್ಪಿ, ಅವರ ಕುಟುಂಬಕ್ಕೆ ಟಿಕೆಟ್ ಸಿಗೋದು ಅನುಮಾನ. ಇದು ನನ್ನ ಅನಿಸಿಕೆ. ನಾನು ನೋಡುತ್ತಿರೋ ಹಾಗೆ, ಲಕ್ಷ್ಮಿ ಹೆಬಾಳ್ಕರ್ ಮಗನಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇದನ್ನು ನಾನು ಹೇಳ್ತಿಲ್ಲ, ಜನರೇ ಹೇಳುತ್ತಿದ್ದಾರೆ. ಅವರೆಲ್ಲಾ 135 ಜನ ಒಂದೇ ಪಕ್ಷದಲ್ಲಿದ್ದಾರೆ, ಒಗ್ಗಟ್ಟಾಗಿದ್ದಾರೆ. ಮೈಸೂರಿಗೆ ಶಾಸಕರು ಒಟ್ಟಿಗೆ ಹೋಗಬೇಕು ಅಂದರೆ ಎಷ್ಟು ಒಗ್ಗಟ್ಟಿದೆ. ರಸ್ತೆಯಲ್ಲಿ ಹೋಗಬೇಕಾದರೆ ಏನೂ ಆಗಲ್ಲ. ಆದರೆ ದೋಣಿಯಲ್ಲಿ ಹೋಗುತ್ತಿದ್ದಾರೆ. ನೋಡೋಣ ದೋಣಿಯನ್ನು ಯಾರು ತೂತು ಮಾಡುತ್ತಾರೋ ಎಂದು ಕಾಂಗ್ರೆಸ್ ಒಗ್ಗಟ್ಟಿನ ಕುರಿತು ಮುನಿರತ್ನ ವ್ಯಂಗ್ಯವಾಡಿದರು.

ವಿದ್ಯುತ್ ಅಭಾವಕ್ಕೆ ಕಾರಣ ಕಾಂಗ್ರೆಸ್ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಹೇಳಿರುವುದು ಸರಿಯಾಗಿದೆ. ನಮ್ಮ ಸರ್ಕಾರ ಇದ್ದಾಗ ಪವರ್ ಮಿನಿಸ್ಟರ್ ಸುನಿಲ್ ಕುಮಾರ್ ಇದ್ದರು. ಎಲ್ಲಾದರೂ ಒಂದು ದಿನ ವಿದ್ಯುತ್‌ ಖರೀದಿ ಬಗ್ಗೆ ಮಾತನಾಡಿದ್ದೇವಾ.? ಈಗ ಏಕಾಏಕಿ ವಿದ್ಯುತ್ ಖರೀದಿ ಬಗ್ಗೆ ಮಾತನಾಡ್ತಿದ್ದಾರೆ. ಏನು ಅವಶ್ಯಕತೆ ಇತ್ತು?. ಸೋಲಾರ್ ಪ್ಲಾಂಟ್ ಹಾಕಿದ್ದಾರೆ, ಎಲ್ಲಾ ಮಾಡಿದ್ದಾರೆ. ಆದರೂ ವಿದ್ಯುತ್ ಖರೀದಿಗೆ ಹೊರಟಿದ್ದಾರೆ. ಹಾಗಾಗಿ ಕುಮಾರಸ್ವಾಮಿ ಹೇಳಿರೋದು ಸರಿ ಇದೆ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ಸಣ್ಣ ಅಭಿವೃದ್ಧಿ ಆಗಿಲ್ಲ. ಏನೂ ಇಲ್ಲ, ಗ್ಯಾರಂಟಿ ಹೆಸರಲ್ಲಿ ರಾಜ್ಯವನ್ನು ಕತ್ತಲಿನತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲಲಿದೆ ಎಂದು ಗೊತ್ತಿಲ್ಲ. ಇವರು 2 ಸಾವಿರ ಕೊಟ್ಟು, ವಾಪಸ್ ಕಿತ್ತುಕೊಳ್ತಿದ್ದಾರೆ. ಜನ ಅದನ್ನು ವಿರೋಧಿಸೋದನ್ನು ಕಾಯಬೇಕು. ಕೋಡೋದು ಎರಡು ಸಾವಿರ, ಕಿತ್ತುಕೊಳ್ಳೋದು ನಾಲ್ಕು ಸಾವಿರ ರೂಪಾಯಿ. ಎರಡು ಸಾವಿರ ಒಂದು ಕುಟುಂಬ ಪಡೆಯುತ್ತಿದ್ರೆ, ನಾಲ್ಕು ಸಾವಿರ ಮತ್ತೊಂದು ಕುಟುಂಬ ಕಟ್ಟುವಂತಾಗಿದೆ. ಕರೆಂಟ್ ಬಿಲ್ 2 ಸಾವಿರ ಕಟ್ಟುತ್ತಿದ್ದಾರೆ. ಎಲ್ಲದರ ಬೆಲೆ ಹೆಚ್ಚಳವಾಗಿದೆ. ನಮ್ಮ ಕ್ಷೇತ್ರದ ಅನುದಾನ ಇವರು ಬಳಸಿಕೊಳ್ತಿದ್ದಾರೆ. ಇವರ ಬಳಿ ಹಣ ಇಲ್ಲ. ಅಂದರೆ ಹೇಗೆ ಆಡಳಿತ ಮಾಡ್ತಿದ್ದಾರೆ ಗೊತ್ತಾಗ್ತಿದೆ ಎಂದು ಟೀಕಿಸಿದರು.

ತಾಜ್ ವೆಸ್ಟೆಂಡ್‌ನಲ್ಲಿ ಕುಳಿತು ಆಡಳಿತ ಮಾಡ್ತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿ, ತಾಜ್ ವೆಸ್ಟೆಂಡ್‌ನಲ್ಲಿ ಕುಳಿತಿದ್ರೋ, ಇಲ್ಲವೋ ಸೆಕೆಂಡರಿ. ನೀವು ಈಗ ವಿಧಾನಸೌಧದಲ್ಲಿ ಕುಳಿತಿದ್ದೀರಿ. ಒಳ್ಳೆಯ ಆಡಳಿತ ಕೊಡಿ. ನೋಡೋಣ ಹೇಗೆ ಕೊಡ್ತೀರಿ ಎಂದು ಸಿಎಂ ಸಿದ್ದರಾಮಯ್ಯಗೆ ಮುನಿರತ್ನ ಟಾಂಗ್ ನೀಡಿದರು.

ಇದನ್ನೂ ಓದಿ : ಬೆಳಗಾವಿ ಅಧಿವೇಶನದ ಕುರಿತು ಇನ್ನೆರಡು ದಿನಗಳಲ್ಲಿ ತೀರ್ಮಾನ: ಸ್ಪೀಕರ್​ ಯು ಟಿ ಖಾದರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.