ETV Bharat / state

ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ: ಎಂ.ಬಿ.ಪಾಟೀಲ್ ಆಕ್ರೋಶ

ನೆರೆ ಪರಿಹಾರದ ಸಂಬಂಧ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಸರಿಯಲ್ಲ. ಹಾನಿ ಬಗ್ಗೆ ಕೇಂದ್ರ ಸರ್ಕಾರ ಸಾಕ್ಷಿ ಕೇಳುತ್ತಿದೆ. ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಂ.ಬಿ.ಪಾಟೀಲ್
author img

By

Published : Oct 4, 2019, 8:04 PM IST

ಬೆಂಗಳೂರು : ನೆರೆ ಪರಿಹಾರದ ಸಂಬಂಧ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಸರಿಯಲ್ಲ. ಪ್ರವಾಹ ಹಾನಿ ಬಗ್ಗೆ ಕೇಂದ್ರ ಸರ್ಕಾರ ಸಾಕ್ಷಿ ಕೇಳುತ್ತಿದೆ. ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ

ಎನ್​ಡಿಆರ್​ಎಫ್ ನಿಯಮಾವಳಿಗಳನ್ನು ನಾವು ಕೇಳಿದ್ದೇವೆ. ಅದನ್ನೇ ಕೇಂದ್ರ ಸರ್ಕಾರ ತಿರಸ್ಕರಿಸಿದೆ. ರಾಷ್ಟ್ರೀಯ ವಿಪತ್ತು ನೆರವು ಇನ್ನೆಲ್ಲಿ ನೀಡುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ರು.

ಸಂತ್ರಸ್ತರ ಬದುಕು ಬೀದಿಗೆ ಬಿದ್ದಿದೆ. ರಾಜ್ಯ ಸರ್ಕಾರದಿಂದಲೂ ಸರಿಯಾದ ಸಮೀಕ್ಷೆ ಆಗಿಲ್ಲ. ಬಿಜೆಪಿ ಸರ್ಕಾರಕ್ಕೆ ಬದ್ಧತೆ, ಇಚ್ಛಾಶಕ್ತಿ ಇಲ್ಲ. ಮನೆ-ಮಠಗಳಿಲ್ಲ, ಶಾಲಾ ಕೊಠಡಿಗಳಿಲ್ಲ, ಪ್ರವಾಹ ಪರಿಸ್ಥಿತಿ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ವರದಿಯನ್ನೂ ಸರಿಯಾಗಿ ಕಳಿಸಿಲ್ಲ. ರಾಜ್ಯದ 25 ಬಿಜೆಪಿ ಸಂಸದರು ಮಾತನಾಡುತ್ತಿಲ್ಲ. ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದೆಲ್ಲಾ ಅವರು ಕಿಡಿಕಾರಿದ್ರು.

ಚಕ್ರವರ್ತಿ ಸೂಲಿಬೆಲೆ, ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಅಭಿನಂದಿಸಬೇಕು. ಅವರು ಯಾವ ಪಕ್ಷದವರೇ ಆಗಿರಲಿ. ಇಂತಹ ಸಂದರ್ಭದಲ್ಲಿ ಗಟ್ಟಿ ಧ್ವನಿ ಎತ್ತಿದ್ದಾರೆ ಎಂದು ಹೇಳಿದ್ರು.

Intro:ಬೆಂಗಳೂರು : ನೆರೆ ಪರಿಹಾರದ ಸಂಬಂಧ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಸರಿಯಲ್ಲ. ಹಾನಿ ಬಗ್ಗೆ ಕೇಂದ್ರ ಸರ್ಕಾರ ಸಾಕ್ಷಿ ಕೇಳುತ್ತಿದೆ.
ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.Body:ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಎನ್ ಡಿಆರ್ ಎಫ್ ನಾರ್ಮ್ಸ್ ಅನ್ನು ನಾವು ಕೇಳಿದ್ದೇವೆ. ಅದನ್ನೇ ಕೇಂದ್ರ ಸರ್ಕಾರ ತಿರಸ್ಕರಿಸಿದೆ. ರಾಷ್ಟ್ರೀಯ ವಿಪತ್ತು ನೆರವು ಇನ್ನೆಲ್ಲಿ ನೀಡಲಿದೆ ಎಂದರು.
2009ರಲ್ಲಿ ನಡೆದ ಪ್ರವಾಹ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಬಂದಿದ್ದರು. ಸಮೀಕ್ಷೆ ಮಾಡಿ 1600 ಕೋಟಿ ಬಿಡುಗಡೆ ಮಾಡಿದ್ದರು. ಅಂದಿನ ಪ್ರವಾಹಕ್ಕಿಂತ ಇಂದು ಹೆಚ್ಚಿನ ಹಾನಿಯಾಗಿದೆ. ಸಂತ್ರಸ್ಥರ ಬದುಕು ಬೀದಿಗೆ ಬಿದ್ದಿದೆ. ರಾಜ್ಯ ಸರ್ಕಾರದಿಂದಲೂ ಸರಿಯಾದ ಸಮೀಕ್ಷೆ ಆಗಿಲ್ಲ. ಬಿಜೆಪಿ ಸರ್ಕಾರಕ್ಕೆ ಬದ್ಧತೆ, ಇಚ್ಛಾಶಕ್ತಿ ಇಲ್ಲ ಎಂದು ದೂರಿದರು.
ಮನೆ ಮಠಗಳಿಲ್ಲ,ಶಾಲಾ ಕೊಠಡಿಗಳು ಇಲ್ಲ
ಪ್ರವಾಹ ಪರಿಸ್ಥಿತಿ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ವರದಿಯನ್ನೂ ಸರಿಯಾಗಿ ಕಳಿಸಿಲ್ಲ. ರಾಜ್ಯದ 25 ಬಿಜೆಪಿ ಸಂಸದರು ಬಾಯ್ಬಿಡುತ್ತಿಲ್ಲ. ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಚಕ್ರವರ್ತಿ ಸೂಲಿಬೆಲೆ, ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಅಭಿನಂದಿಸಬೇಕು. ಅವರು ಯಾವ ಪಕ್ಷದವರೇ ಆಗಿರಲಿ. ಇಂತಹ ಸಂದರ್ಭದಲ್ಲಿ ಗಟ್ಟಿ ಧ್ವನಿ ಎತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಅವರದೇ ಬಿಜೆಪಿ ಸರ್ಕಾರ ವಿದೆ. ಅವರದೇ ಸಿಎಂ ಇಲ್ಲಿದ್ದಾರೆ. ಆದರೂ ಕೇಂದ್ರ ಯಾಕೆ ಇಂತಹ ಧೋರಣೆ ತಾಳಿದೆ.
ರಾಜ್ಯ, ಕೇಂದ್ರ ಎರಡರಲ್ಲೂ ಬಿಜೆಪಿ ಸರ್ಕಾರವಿದೆ. ಜನರ ಕಷ್ಟವನ್ನು ಇಬ್ಬರೂ ಪರಿಹರಿಸಬಹುದಿತ್ತು. ರಾಜ್ಯ 25 ಜನ ಸಂಸದರನ್ನು ನೀಡಿದೆ. ಆದರೂ ರಾಜ್ಯದ ಬಗ್ಗೆ ಕೇಂದ್ರಕ್ಕೆ ತಾತ್ಸಾರವೇಕೆ? ಎಂದು ಪ್ರಶ್ನಿಸಿದರು.
ನೆರೆ ಬಗ್ಗೆ ಸಮರ್ಪಕ ವರದಿ ನಾನು ಕೊಡ್ತೇನೆ. ಇನ್ನೂ ನಾಲ್ಕೈದು ವರದಿಗಳು ಇವೆ. ಇದನ್ನು ನೋಡಿಯಾದ್ರೂ ನೆರವು ಘೋಷಿಸಿ ಎಂದು ಕೇಂದ್ರಕ್ಕೆ ಎಂ.ಬಿ.ಪಾಟೀಲ್ ಒತ್ತಾಯಿಸಿದರು.
ಪ್ರವಾಹ ಸಂತ್ರಸ್ಥರನ್ನು ಆ ದೇವರೇ ಕಾಪಾಡಬೇಕು. ನಮ್ಮ ಪ್ರಕಾರ ಒಂದು ಲಕ್ಷ ಕೋಟಿ ರೂ. ನಷ್ಟು ಹಾನಿಯಾಗಿದೆ. ಆದರೆ 38 ಸಾವಿರ ಕೋಟಿ ರೂ. ರಾಜ್ಯ ಪರಿಹಾರ ಕೇಳಿದೆ. ನಾನು ಈಗಲೇ ಹೇಳ್ತೇನೆ, ಕೇಂದ್ರ 2 ಹಾಗೂ ರಾಜ್ಯ 2 ಸಾವಿರ ಕೋಟಿ ಪ್ರವಾಹ ಸಂತ್ರಸ್ಥರಿಗೆ ಕೊಟ್ಟು ಕೈತೊಳೆದುಕೊಳ್ಳುತ್ತವೆ ಎಂದು ಹೇಳಿದರು.
ಸಚಿವರಾದ ಕೆ.ಎಸ್. ಈಶ್ವರಪ್ಪ, ಡಿಸಿಎಂ ಲಕ್ಷಣ ಸವದಿ, ಸಂಸದ ತೇಜಸ್ವಿ ಸೂರ್ಯ, ಸಚಿವ ಮಾಧುಸ್ವಾಮಿ ಸೇರಿದಂತೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರನ್ನು ಕರೆದುಕೊಂಡು ಹೋಗಿ ಪ್ರವಾಹ ನಡುಗಡ್ಡೆಯಲ್ಲಿ ನಿಲ್ಲಿಸಬೇಕು
ಆಗ ಅವರಿಗೆ ಪ್ರವಾಹದ ಪರಿಸ್ಥಿತಿ ಏನು ಅಂತ ಗೊತ್ತಾಗುತ್ತದೆ. ಧೈರ್ಯವಿದ್ದರೆ ರಾಷ್ಟ್ರೀಯ ವಿಪತ್ತು ಅಂತ ಘೋಷಿಸಿ, ನಿಮಗೆ ಘೋಷಿಸೋಕೆ ಸಾಧ್ಯವಾಗುತ್ತಾ? ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ಮಾತ್ರ ಪರಿಹಾರ ಹಣ ಕೇಳುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೆರೆ ಸಂತ್ರಸ್ತರಿಗೆ ಬಿಜೆಪಿಯವರೇ ಹೋಗಿ ವಿಷದ ಬಾಟಲ್ ಕೊಟ್ಟು ಬರಲಿ. ಈ ರೀತಿ ಬಾಲಿಶ ಹೇಳಿಕೆ ಕೊಡಬಾರದು ಎಂದರು.
ಯಡಿಯೂರಪ್ಪ ಅಸಹಾಯಕತೆ ಆದರೆ ರಾಜೀನಾಮೆ ಕೊಟ್ಟು ಹೊರಗೆ ಬನ್ನಿ. ಈ ಸಮಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸದಿದ್ರೆ ಬೇರೆ ಯಾವಾಗ ಸ್ಪಂದಿಸುತ್ತೀರಾ ಹೇಳಿ?. ಯಡಿಯೂರಪ್ಪ ಹಿರಿಯ ರಾಜಕಾರಣಿ ನಿಮ್ಮ ಮೇಲೆ ಗೌರವ ಇದೆ. ನೀವು ಅಸಹಾಯಕತೆ ಆಗಿದ್ರೆ ಈ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ. ನಾನು ಈ ಸ್ಥಾನದಲ್ಲಿ ಇದ್ದಿದ್ರೆ ರಾಜೀನಾಮೆ ಕೊಟ್ಟು ಹೊರಗೆ ಬರುತ್ತಿದ್ದೆ.
ಈ ಸಮಯದಲ್ಲಿ ದೇವರೇ ಕಾಪಾಡಬೇಕು ಎಂದು ಕಿಡಿಕಾರಿದರು.
ಬೆಳಗಾವಿ ಅಧಿವೇಶನಕ್ಕೆ ನಾವು ಒತ್ತಾಯಿಸಿದ್ದೆವು. ಅಲ್ಲಿ ಅಧಿವೇಶನ ನಡೆದಿದ್ದರೆ ನೈತಿಕ ಶಕ್ತಿ ಸಿಗುತ್ತಿತ್ತು. ಅಲ್ಲಿನ ಜನರಿಗೆ ನೈತಿಕ ಬಲ ಬರುತ್ತಿತ್ತು. ಆದರೆ ಈಗ ಬೆಂಗಳೂರಿನಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಕನಿಷ್ಠ ಪಕ್ಷ ಹತ್ತು ದಿನವಾದ್ರೂ ಅಧಿವೇಷನ ನಡೆಸಬೇಕು ಎಂದು ಒತ್ತಾಯಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.