ETV Bharat / state

ಬಿಡಿಎ ಅಕ್ರಮದ ಕುರಿತು ಸಿಎಂ ಗಮನಕ್ಕೆ ತಂದ ಮಾಜಿ ಸಚಿವ ಕೆ.ಜೆ. ಜಾರ್ಜ್ - ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಮಾಜಿ ಸಚಿವ ಕೆ.ಜೆ. ಜಾರ್ಜ್​ ಅವರು ಬಿಡಿಎಯ ಅಕ್ರಮದ ಕುರಿತು ಸಿಎಂ ಬಿ.ಎಸ್​​. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಈ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮಾಜಿ ಸಚಿವ ಕೆ.ಜೆ. ಜಾರ್ಜ್​ರಿಂದ ಸಿಎಂಗೆ ಪತ್ರ
author img

By

Published : Sep 13, 2019, 7:14 PM IST

Updated : Sep 13, 2019, 10:13 PM IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಕ್ರಮವಾಗಿ ಒಂಭತ್ತು ಕಾರ್ನರ್ ಸೈಟ್​​​ನ್ನು ಹಂಚಿಕೆ ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ ಎಂದು ಮಾಜಿ ಸಚಿವ ಕೆ.ಜೆ. ಜಾರ್ಜ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಮಾಜಿ ಸಚಿವ ಕೆ.ಜೆ. ಜಾರ್ಜ್​ರಿಂದ ಸಿಎಂಗೆ ಪತ್ರ

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಬಾಣಸವಾಡಿ ಗ್ರಾಮದ ಸುತ್ತಮುತ್ತ ರಘುರೆಡ್ಡಿ ಬಿನ್ ರಾಮಯ್ಯ ರೆಡ್ಡಿ ಎಂಬುವವರಿಗೆ ಸೇರಿದ ಸರ್ವೆ ನಂಬರ್​​ 120, 121ರಲ್ಲಿ ಒ.ಎಂ.ಬಿ.ಆರ್ ಬಡಾವಣೆಯಲ್ಲಿ 6*40 ಅಡಿ ವಿಸ್ತೀರ್ಣದ ಒಂಭತ್ತು ಮೂಲೆ ನಿವೇಶನ ಹಂಚಿಕೆಯಾಗಿದೆ. ಕಾನೂನುಬಾಹಿರವಾಗಿ ಹಾಗೂ ಅಕ್ರಮವಾಗಿ ಅಧಿಕಾರಿಗಳು, ಅಭಿಯಂತರು ಶಾಮೀಲಾಗಿ ಈ ಅಕ್ರಮ ಎಸಗಿದ್ದಾರೆ. ಗರಿಷ್ಠ ಬೆಲೆಯ ನಿವೇಶನ ಕನಿಷ್ಠ ಬೆಲೆಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಹಂಚಿಕೆಯಾಗಿರುವ ನಿವೇಶನಗಳನ್ನು ರದ್ದುಪಡಿಸಿ ಎಂದು ಕೆ.ಜೆ.ಜಾರ್ಜ್ ಪತ್ರ ಬರೆದಿದ್ದಾರೆ. ಅಲ್ಲದೆ ಈ ನಿವೇಶನಗಳನ್ನು ಸಾರ್ವಜನಿಕ ಸೌಲಭ್ಯ ಉಪಯೋಗಕ್ಕೆ ಮೀಸಲಿಡಬೇಕೆಂದು ಮನವಿ ಮಾಡಿದ್ದಾರೆ.

ಈ ಮೂಲಕ ಬಿಡಿಎಯ ಹಳೆಯ ಅಕ್ರಮವೊಂದು ಮತ್ತೆ ಬಯಲಿಗೆ ಬಂದಂತಾಗಿದೆ. ಈ ಕುರಿತು ಸಿಎಂ, ಬಿಡಿಎ ಆಯುಕ್ತರನ್ನು ಪ್ರಶ್ನಿಸಿದ್ದು, ಬಿಡಿಎ ತನಿಖೆಗೆ ಮುಂದಾಗಿದೆ.ಈ ಬಗ್ಗೆ ಮಾತನಾಡಿದ ಬಿಡಿಎ ಕಾರ್ಯದರ್ಶಿ ವಾಸಂತಿ ಅಮರ್, ನಿನ್ನೆಯಷ್ಟೆ ಈ ಪತ್ರ ನಮ್ಮ ಕೈ ತಲುಪಿದೆ. ಈ ಪ್ರಕರಣ ಏನಾಗಿದೆ ಅಂತ ಇನ್ನು ಪರಿಶೀಲಿಸಬೇಕಿದೆ. ಈ ಒಂಭತ್ತು ಸೈಟ್​​ಗಳ ವಿವರ ಪರಿಶೀಲಿಸಲಾಗುವುದು ಎಂದಿದ್ದಾರೆ.

Intro:ಬಿಡಿಎ ಅಕ್ರಮದ ಕುರಿತು ಸಿಎಂ ಗಮನಕ್ಕೆ ತಂದ ಮಾಜಿ ಸಚಿವ ಕೆಜೆ ಜಾರ್ಜ್

ಬೆಂಗಳೂರು- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಕ್ರಮವಾಗಿ ಒಂಭತ್ತು ಕಾರ್ನರ್ ಸೈಟನ್ನು ಹಂಚಿಕೆ ಮಾಡಿದೆ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರುಪಾಯಿ ನಷ್ಟ ಆಗಿದೆ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ನಗರದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಬಾಣಸವಾಡಿ ಗ್ರಾಮದ ಸುತ್ತಮುತ್ತ ರಘುರೆಡ್ಡಿ ಬಿನ್ ರಾಮಯ್ಯ ರೆಡ್ಡಿ ಎಂಬುವವರಿಗೆ ಸರ್ವೇ ಸಂಖ್ಯೆ 120, 121 ರಲ್ಲಿ ಒ.ಎಂ.ಬಿ.ಆರ್ ಬಡಾವಣೆಯಲ್ಲಿ 60×40 ಅಡಿ ವಿಸ್ತೀರ್ಣದ ಒಂಭತ್ತು ಮೂಲೆ ನಿವೇಶನ ಹಂಚಿಕೆಯಾಗಿದೆ. ಕಾನೂನುಬಾಹಿರವಾಗಿ, ಅಕ್ರಮವಾಗಿ ಅಧಿಕಾರಿಗಳು ಹಾಗೂ ಅಭಿಯಂತರು ಶಾಮೀಲಾಗಿ ಈ ಅಕ್ರಮ ಎಸೆಗಲಾಗಿದೆ. ಗರಿಷ್ಠ ಬೆಲೆಯ ನಿವೇಶನ ಕನಿಷ್ಠ ಬೆಲೆಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಹಂಚಿಕೆಯಾಗಿರುವ ನಿವೇಶನಗಳನ್ನು ರದ್ದುಪಡಿಸಿ ಎಂದು ಕೆ.ಜೆ.ಜಾರ್ಜ್ ಪತ್ರ ಬರೆದಿದ್ದಾರೆ. ಅಲ್ಲದೆ ಈ ನಿವೇಶನಗಳನ್ನು ಸಾರ್ವಜನಿಕ ಸೌಲಭ್ಯ ಉಪಯೋಗಕ್ಕೆ ಮೀಸಲಿಡಬೇಕೆಂದು ಮನವಿ ಮಾಡಿದ್ದಾರೆ
ಈ ಮೂಲಕ ಬಿಡಿಎ ಯ ಹಳೆಯ ಅಕ್ರಮವೊಂದು ಮತ್ತೆ ಬಯಲಿಗೆ ಬಂದಂತಾಗಿದೆ. ಈ ಕುರಿತು ಸಿಎಂ, ಬಿಡಿಎ ಆಯುಕ್ತರನ್ನು ಪ್ರಶ್ನಿಸಿದ್ದು, ಬಿಡಿಎ ತನಿಖೆಗೆ ಮುಂದಾಗಿದೆ.
ಈ ಬಗ್ಗೆ ಮಾತನಾಡಿದ ಬಿಡಿಎ ಕಾರ್ಯದರ್ಶ, ವಾಸಂತಿ ಅಮರ್, ನಿನ್ನೆಯಷ್ಟೆ ಈ ಪತ್ರ ನಮ್ಮ ಕೈ ತಲುಪಿದೆ. ಈ ಪ್ರಕರಣ ಏನಾಗಿದೆ ಅಂತ ಇನ್ನು ಪರಿಶೀಲಿಸಬೇಕಿದೆ. ಈ ಒಂಭತ್ತು ಸೈಟ್ ಗಳ ವಿವರ ಪರಿಶೀಲಿಸಲಾಗುವುದು ಎಂದರು.

ಸೌಮ್ಯಶ್ರೀ
Kn_bng_01_BDA_George_7202707

Body:..Conclusion:..
Last Updated : Sep 13, 2019, 10:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.